More

    ಕನಕದಾಸ ವೃತ್ತ ನಿರ್ಮಾಣಕ್ಕೆ ಭೂಮಿ ಪೂಜೆ

    ವಿಜಯಪುರ: ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಪಕ್ಕದ ರಸ್ತೆಯಲ್ಲಿ ಭಕ್ತ ಶ್ರೇಷ್ಠ ಕನಕದಾಸ ವೃತ್ತ ನಿರ್ಮಾಣಕ್ಕೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಂಗಳವಾರ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು, ಭಕ್ತ ಶ್ರೇಷ್ಠ ಕನಕದಾಸರು ಶ್ರೀಕೃಷ್ಣನನ್ನು ಒಲಿಸುವ ಮೂಲಕ ತಮ್ಮ ಭಕ್ತಿ ಪರಕಾಷ್ಠೆಯನ್ನು ಇಮ್ಮಡಿಗೊಳಿಸಿದರು. ಕನಕದಾಸರು ದಾಸ ಸಾಹಿತ್ಯದ ಮೂಲಕ ಒಳ್ಳೆಯ ವಿಚಾರಗಳನ್ನು ಸಮಾಜದಲ್ಲಿ ಬಿತ್ತಿದರು. ಇಂತಹ ದಾಸರ ವೃತ್ತವು ನಿರ್ಮಾಣಗೊಳ್ಳುತ್ತಿರುವುದು ಸಂತಸದ ವಿಷಯ. ಅದೇ ರೀತಿ ದಾಸರ, ಶರಣರ ಆದರ್ಶಗಳನ್ನು ಮೈಗೂಡಿಕೊಂಡು ನಮ್ಮ ಜೀವನವನ್ನು ಸಾಕಾರಗೊಳಿಸಬೇಕಾಗಿದೆ ಎಂದರಲ್ಲದೇ ವೃತ್ತಕ್ಕೆ ಶಾಸಕರ ನಿಧಿಯಿಂದ 5 ಲಕ್ಷ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದರು.

    ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಲ್ಲಣ್ಣ ಶಿರಶ್ಯಾಡ ಮಾತನಾಡಿ, ದಾಸಶ್ರೇಷ್ಠ ಕನಕದಾಸರು ತಮ್ಮ ಜೀವನದಕ್ಕೂದ್ದಕ್ಕೂ ಮತ್ತೊಮ್ಮೆ ಒಳಿತನ್ನು ಮಾಡುವ ಆದರ್ಶ ಅಡಿಪಾಯ ಹಾಕಿಕೊಟ್ಟವರು. ಇಂತಹ ದಾಸರ ವೃತ್ತ ನಿರ್ಮಾಣಗೊಳ್ಳುತ್ತಿರುವುದು ಇಡೀ ಕುರುಬ ಸಮಾಜಕ್ಕೆ ಸಂತೋಷದಾಯಕ ವಿಷಯ. ಈಗಾಗಲೇ ಭಕ್ತ ಶ್ರೇಷ್ಠ ಕನಕದಾಸರ ಕಂಚಿನ ಮೂರ್ತಿಗೆ ಜಿಲ್ಲಾ ಕುರುಬರ ಸಮಾಜದಿಂದ 10 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಈಗಾಗಲೇ ಮೂರ್ತಿಯು ಸಹ ತಯಾರಾಗಿದೆ. ವೃತ್ತದ ಕಾಮಗಾರಿ ಪೂರ್ಣಗೊಂಡ ನಂತರ ಒಳ್ಳೆಯ ದಿನದಂದು ಕನಕದಾಸರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದರು.

    ಕವಲಗುಡ್ಡದ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಕುರುಬರ ಸಂಘದ ನಗರ ಘಟಕದ ಅಧ್ಯಕ್ಷ ರಾಜು ಕಗ್ಗೋಡ, ದಯಾನಂದ ಸಂಗೋಗಿ, ರಾಜು ಗಿರಿಯಪ್ಪ ಬಿಸೆ, ಮಹಾಂತೇಶ ಬೇವೂರ, ಅರವಿಂದ ಬಿರಾದಾರ, ರಮೇಶ ಕಾಲೇಬಾಗ, ಸುರೇಶ ಡೊಂಬಾಳೆ, ಶ್ರೀಕಾಂತ ಸಂಗೋಗಿ, ಅಶೋಕ ತಿಳಗೂಳಕರ, ಸುರೇಶ ಹೊಂಬಾಳೆ, ಮಂಜು ವಾಲೀಕಾರ, ಚಂದ್ರಶೇಖರ ನಾಗರಾಳೆ, ಭೀರಪ್ಪ ಜುಮನಾಳ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts