More

    ‘ವಿಜಯಾನಂದ’ ಟ್ರೇಲರ್​ ಮೆಚ್ಚಿದ ಜನ; ಐದು ಭಾಷೆಗಳಿಂದ 1.26 ಕೋಟಿ ವೀಕ್ಷಣೆ

    ಬೆಂಗಳೂರು: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ‘ವಿಜಯಾನಂದ’ ಚಿತ್ರದ ಟ್ರೇಲರ್​ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡಿಗರು, ಕನ್ನಡದ ಸಾಧಕನ ಕುರಿತು ಮಾಡಿರುವ ಕನ್ನಡದ ಪ್ರಪ್ರಥಮ ಪ್ಯಾನ್​ ಇಂಡಿಯಾ ಸಿನಿಮಾ ಎಂಬ ಹೆಗ್ಗಳಿಕೆ ಚಿತ್ರಕ್ಕೆ ಸಲ್ಲುತ್ತದೆ. ನ. 19ರಂದು ಬಿಡುಗಡೆಯಾದ ಚಿತ್ರದ ಟ್ರೇಲರ್​ ಕೇವಲ ನಾಲ್ಕು ದಿನಗಳಲ್ಲಿ 1.26 ಕೋಟಿ ಮಂದಿ ವೀಸಿ, ಮೆಚ್ಚಿಕೊಂಡಿದ್ದಾರೆ.

    ಇದನ್ನೂ ಓದಿ: ಆಶಿಕಾಗೆ ಆಶಿಕಾ ಪೈಪೋಟಿ; ಒಂದೇ ದಿನ ಎರಡು ಚಿತ್ರಗಳ ಬಿಡುಗಡೆ

    ಅದಕ್ಕೂ ಮುನ್ನ ಬಿಡುಗಡೆಯಾಗಿದ್ದ ಚಿತ್ರದ ಟೀಸರ್​ ಮತ್ತು ‘ಹಾಗೆ ಆದ ಆಲಿಂಗನ…’ ಹಾಡು ಕೂಡ ತಲಾ ಎರಡು ಕೋಟಿ ಬಾರಿ ವೀಕ್ಷಣೆಯಾಗಿದ್ದವು. ಆನಂದ್​ ಆಡಿಯೋ ಯೂಟ್ಯೂಬ್​ ಚಾನಲ್​ನಲ್ಲಿ ಬಿಡುಗಡೆಯಾಗಿರುವ ‘ವಿಜಯಾನಂದ’ ಚಿತ್ರದ ಕನ್ನಡ ಟ್ರೇಲರ್​ಗೆ 42 ಲಕ್ಷ ವೀವ್ಸ್​, ತೆಲುಗು ಅವತರಣಿಕೆಗೆ 31 ಲಕ್ಷ, ತಮಿಳು ವರ್ಷನ್​ಗೆ 22 ಲಕ್ಷ ವೀವ್ಸ್​, ಹಿಂದಿ ಟ್ರೇಲರ್​ಗೆ 19 ಲಕ್ಷ ವೀವ್ಸ್​ ಹಾಗೂ ಮಲಯಾಳಂ ಭಾಷೆಯಲ್ಲಿ 12 ಲಕ್ಷ ಮಂದಿ ಟ್ರೇಲರ್​ ಸಿಕ್ಕಿದೆ. ಆ ಮೂಲಕ ಐದೂ ಭಾಷೆಗಳಿಂದ ಟ್ರೇಲರ್​ಅನ್ನು 1.26 ಕೋಟಿಗೂ ಹೆಚ್ಚು ಮಂದಿ ವೀಸಿದ್ದಾರೆ.

    ವಿಆರ್​ಎಲ್​ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಡಾ. ಆನಂದ ಸಂಕೇಶ್ವರ ನಿರ್ಮಿಸಿರುವ ‘ವಿಜಯಾನಂದ’ ಚಿತ್ರಕ್ಕೆ ರಿಷಿಕಾ ಶರ್ಮಾ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಡಿ. 9ರಂದು ವಿಶ್ವದಾದ್ಯಂತ 1600ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ‘ವಿಜಯಾನಂದ’ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲಾದ ರಿಯಲ್ ಸ್ಟಾರ್ ಉಪೇಂದ್ರ

    ಇನ್ನು, ಚಿತ್ರದ ಪ್ಯಾನ್​ ಇಂಡಿಯಾ ಪ್ರಚಾರ ಪ್ರಾರಂಭವಾಗಿದ್ದು, ಈ ಪ್ರಚಾರದಲ್ಲಿ ವಿಆರ್​ಎಲ್​ ಸಮೂಹ ಸಂಸ್ಥೆಯ ಎಂಡಿ ಡಾ. ಆನಂದ ಸಂಕೇಶ್ವರ, ನಾಯಕ ನಿಹಾಲ್​, ನಾಯಕಿ ಸಿರಿ ಪ್ರಹ್ಲಾದ್​, ನಟರಾದ ಭರತ್​ ಬೋಪಣ್ಣ ಸದ್ಯ ಬಿಜಿಯಾಗಿದ್ದಾರೆ. ನ. 22ರಂದು ಗುಜರಾತ್​ನ ಅಹಮದಾಬಾದ್​ ಮತ್ತು 23ರಂದು ಉತ್ತಪ್ರದೇಶದ ರಾಜಧಾನಿ ಲಖ್​ನೌನಲ್ಲಿ ಪ್ರಚಾರ ಮಾಡಿರುವ ಚಿತ್ರತಂಡ, ಇಂದು ಮಧ್ಯಪ್ರದೇಶದ ಇಂದೋರ್​ನಲ್ಲಿ ಪ್ರಚಾರ ನಡೆಸಲಿದೆ.

    ಡಿ. 11ಕ್ಕೆ ಬೆಂಗಳೂರಿನಲ್ಲಿ ಅಭಿಷೇಕ್​ ಅಂಬರೀಶ್​ ನಿಶ್ಚಿತಾರ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts