More

    ಡಿ. 11ಕ್ಕೆ ಬೆಂಗಳೂರಿನಲ್ಲಿ ಅಭಿಷೇಕ್​ ಅಂಬರೀಶ್​ ನಿಶ್ಚಿತಾರ್ಥ

    ಬೆಂಗಳೂರು: ಕನ್ನಡ ಚಿತ್ರರಂಗವು ಸದ್ಯದಲ್ಲೇ ಇನ್ನೊಂದು ಮದುವೆ ಸಂಭ್ರಮಕ್ಕೆ ಸಾಕ್ಷಿ ಆಗಲಿದೆ. ಕನ್ನಡ ಚಿತ್ರರಂಗದ ಮೋಸ್ಟ್​ ಎಲಿಜಿಬಲ್​ ಬ್ಯಾಚಲರ್​ ಆಗಿರುವ ಅಭಿಷೇಕ್​ ಅಂಬರೀಷ್​ಗೆ ಹುಡುಗಿ ಗೊತ್ತಾಗಿದ್ದು, ಡಿ.11ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವಾಹ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

    ಇದನ್ನೂ ಓದಿ: ಪುತ್ರಿಯ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ; ಅಮ್ಮನಂತೆ ಮಗಳು ಎಂದ ಫ್ಯಾನ್ಸ್​!

    ದಿವಂಗತ ಅಂಬರೀಶ್ ಮತ್ತು ಸಂಸದೆ ಸುಮಲತಾ ಅಂಬರೀಶ್‌ ಪುತ್ರ ಅಭಿಷೇಕ್ ಅಂಬರೀಷ್​ ಈಗಾಗಲೇ ಹೀರೋ ಆಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಅಮರ್​’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು ಅವರು, ಸದ್ಯ ‘ಬ್ಯಾಡ್​ ಮ್ಯಾನರ್ಸ್​’ ಎಂಬ ಸೂರಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಲ್ಲದೆ ‘ಕಾಳಿ’ ಮತ್ತು ‘ಎಎ 04’ ಎಂಬ ಚಿತ್ರಗಳಲ್ಲೂ ನಟಿಸುವುದಕ್ಕೆ ಅವರು ಒಪ್ಪಿಕೊಂಡಿದ್ದು, ಆ ಚಿತ್ರಗಳ ಚಿತ್ರೀಕರಣ ಮುಂದಿನ ವರ್ಷದಿಂದ ಪ್ರಾರಂಭವಾಗಲಿದೆ.

    ಇದನ್ನೂ ಓದಿ: ಘೋಸ್ಟ್ ಮೊದಲ ಹಂತದ ಚಿತ್ರೀಕರಣ ಪೂರ್ಣ

    ಈ ಮಧ್ಯೆ, ಮೋಸ್ಟ್​ ಎಲಿಜಿಬಲ್​ ಬ್ಯಾಚಲರ್​ ಆಗಿದ್ದ ಅಭಿಷೇಕ್​ಗೆ ಮದುವೆ ಯಾವಾಗ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಇತ್ತು. ಸದ್ಯಕ್ಕೆ, ಡಿ. 11ರಂದು ನಿಶ್ಚಿತಾರ್ಥ ನಡೆಯಲಿದ್ದು, ಅಭಿಷೇಕ್​ ಮದುವೆಯಾಗುತ್ತಿರುವ ಯುವತಿ ಯಾರು, ಎಲ್ಲಿಯವರು, ಮದುವೆ ಯಾವಾಗ ಮುಂತಾದ ಎಲ್ಲ ವಿಷಯಗಳನ್ನು ಸದ್ಯಕ್ಕೆ ರಹಸ್ಯವಾಗಿ ಇಡಲಾಗಿದೆ. ನಿಶ್ಚಿತಾರ್ಥದ ಸಿದ್ಧತೆಗಳು ನಡೆಯುತ್ತಿದ್ದು, ಮದುವೆ ದಿನಾಂಕ, ಹುಡುಗಿಯ ಹಿನ್ನೆಲೆ ಸೇರಿದಂತೆ ಹಲವು ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದೆ.

    ವಿಜಯಾನಂದ ಟ್ರೇಲರ್​ಗೆ ಮನಸೋತ ಜನ; 4 ದಿನ, 5 ಭಾಷೆ, 1.18 ಕೋಟಿ ವೀಕ್ಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts