More

    ವಿಜಯನಗರ ಜಿಲ್ಲೆ ರಚನೆಗೆ ವಿರೋಧ ವ್ಯಕ್ತಪಡಿಸಿದ್ದ ಸೋಮಶೇಖರ ರೆಡ್ಡಿ ಈಗ ಸೈಲೆಂಟ್ ಆಗಿದ್ದೇಕೆ?

    ಬಳ್ಳಾರಿ: ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ಹೊಸಪೇಟೆ ಕೇಂದ್ರೀಕೃತ ವಿಜಯನಗರ ಜಿಲ್ಲೆಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದ ಶಾಸಕ ಜಿ.ಸೋಮಶೇಖರ ರೆಡ್ಡಿ ಈಗ ತುಸು ಶಾಂತರಾಗಿದ್ದಾರೆ. ರೆಡ್ಡಿಯನ್ನು ಸಿಎಂ ಸೇರಿದಂತೆ ಹಲವು ಸಚಿವರು ಭವಿಷ್ಯದ ಬಗ್ಗೆ ಮನವರಿಕೆ ಮಾಡಿ, ಸಮಾಧಾನ ಪಡಿಸಿದ್ದಾರೆ.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ ರೆಡ್ಡಿ, ರಾಜ್ಯದಲ್ಲಿ ಯಾವುದೇ ಸರ್ಕಾರ ಇದ್ದರೂ ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆ ವಿಭಜನೆ ನಿಶ್ಚಿತ. ಹೀಗಾಗಿ ಪ್ರತಿರೋಧ ಕೈಬಿಡುವಂತೆ ಮುಖ್ಯಮಂತ್ರಿ ಮತ್ತು ಕೆಲ ಸಚಿವರು ತಿಳಿಸಿದ್ದಾರೆ. ಆದರೂ, ಜಿಲ್ಲೆ ವಿಭಜಿಸುವ ಸರ್ಕಾರದ ನಿರ್ಧಾರ ನೋವು ಉಂಟು ಮಾಡಿದೆ ಎಂದರು.

    ಎಂಎಲ್ಸಿ ಕೆ.ಸಿ.ಕೊಂಡಯ್ಯ ಹೊರತುಪಡಿಸಿ ಬೇರೆ ಯಾರೂ ಜಿಲ್ಲೆ ವಿಭಜನೆ ಬೆಂಬಲಿಸಿಲ್ಲ. ವಿಜಯನಗರ ಜಿಲ್ಲೆಗೆ ಸಚಿವ ಶ್ರೀರಾಮುಲು ಸಹಮತ ವ್ಯಕ್ತಪಡಿಸಿರುವುದು ಅವರ ವೈಯಕ್ತಿಕ ವಿಚಾರ. ನಾನು ಆಡಳಿತ ಪಕ್ಷದ ಶಾಸಕ ಆಗಿರುವುದರಿಂದ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ಸಂಟನೆಗಳು ಘೋಷಿಸಿರುವ ನ.26ರ ಬಳ್ಳಾರಿ ಬಂದ್‌ಗೆ ಬೆಂಬಲಿಸುವುದಿಲ್ಲ. ಆದರೆ, ಬಂದ್ ಯಶಸ್ವಿಯಾಗಲಿ ಎಂದು ಹಾರೈಸುವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts