More

    ಬಾಲಿವುಡ್​ನಲ್ಲಿ ಬಾಲಾಕೋಟ್​ ಏರ್​ಸ್ಟ್ರೈಕ್​ ಸಿನಿಮಾ; ಅಭಿನಂದನ್​ ಪಾತ್ರಕ್ಕೆ ದಕ್ಷಿಣದ ಖ್ಯಾತ ನಟ!

    ಮುಂಬೈ: ಯುದ್ಧ ಸನ್ನಿವೇಶಗಳನ್ನೇ ಆಧರಿಸಿ ಬಾಲಿವುಡ್​ನಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಇದೀಗ ಬಾಲಾಕೋಟ್​ ಏರ್​ಸ್ಟ್ರೈಕ್​ ಕುರಿತ ಸಿನಿಮಾ ಸರದಿ. ಪುಲ್ವಾಮಾ ದಾಳಿಯ ಪ್ರತೀಕಾರವಾಗಿ ಬಾಲಾಕೋಟ್​ನಲ್ಲಿ ಏರ್​ಸ್ಟ್ರೈಕ್​ ನಡೆಸಿದ ಭಾರತೀಯ ವಾಯುಸೇನೆ, ಉಗ್ರರ ಹುಟ್ಟಡಗಿಸಿತ್ತು. ಇದೀಗ ಆ ಕಥೆಯೇ ಬಾಲಿವುಡ್​ನಲ್ಲಿ ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ.

    ಇದನ್ನೂ ಓದಿ: ಅತ್ಯಾಚಾರ ಆರೋಪದಡಿ ನಿರ್ದೇಶಕ ಅನುರಾಗ್​ ಕಶ್ಯಪ್ ವಿರುದ್ಧ ದೂರು ದಾಖಲು

    ಸದ್ಯದ ಮಾಹಿತಿ ಪ್ರಕಾರ ಬಾಲಿವುಡ್​ನಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ದಕ್ಷಿಣದ ಸ್ಟಾರ್ ನಟನಿಗೆ ತಂಡ ಮಣೆ ಹಾಕಿದೆ. ಈಗಾಗಲೇ ಒಂದು ಹಂತದ ಮಾತುಕತೆಯೂ ಮುಗಿದಿದ್ದು, ಇನ್ನೇನು ಅಧಿಕೃತವಾಗಿ ಘೋಷಣೆ ಮಾಡಿಕೊಳ್ಳಲಿದೆ. ಹಾಗಾದರೆ ಯಾರು ಆ ನಟ? ಅಭಿಷೇಕ್​ ಕಪೂರ್​ ನಿರ್ದೇಶನದಲ್ಲಿ ಮೂಡಿಬರಲಿರುವ ಶೀರ್ಷಿಕೆ ಅಂತಿಮವಾಗದ ಈ ಚಿತ್ರಕ್ಕೆ ವಿಜಯ್​ ದೇವರಕೊಂಡ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತ ಘೋಷಣೆ ಆಗಲಿದೆ.

    ಬಾಲಿವುಡ್​ನಲ್ಲಿ ಬಾಲಾಕೋಟ್​ ಏರ್​ಸ್ಟ್ರೈಕ್​ ಸಿನಿಮಾ; ಅಭಿನಂದನ್​ ಪಾತ್ರಕ್ಕೆ ದಕ್ಷಿಣದ ಖ್ಯಾತ ನಟ!

    ಇದನ್ನೂ ಓದಿ: VIDEO| ಯಶ್​ -ರಾಧಿಕಾ ಪುತ್ರಿ ಐರಾ ಇದೀಗ ಟೀಚರ್​; ತಮ್ಮನಿಗೆ ಹೇಗೆ ಪಾಠ ಮಾಡ್ತಾಳೆ ನೋಡಿ

    ಈಗಾಗಲೇ ಕರಣ್​ ಜೋಹರ್​ ನಿರ್ಮಾಣದ ಫೈಟರ್​ ಚಿತ್ರದಲ್ಲಿ ವಿಜಯ್​ ನಟಿಸುತ್ತಿದ್ದಾರೆ. ತೆಲುಗಿನ ಜತೆಗೆ ಹಿಂದಿಯಲ್ಲಿಯೂ ಈ ಸಿನಿಮಾ ಸಿದ್ಧವಾಗುತ್ತಿದ್ದು, ಪುರಿ ಜಗನ್ನಾಥ್​ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಇದೀಗ ಆ ಸಿನಿಮಾದ ಜತೆಗೆ ಈ ಸಿನಿಮಾ ಕುರಿತ ಸುದ್ದಿಯೂ ಸದ್ದು ಮಾಡುತ್ತಿದ್ದು, ವಿಂಗ್​ಕಮಾಂಡರ್​ ಅಭಿನಂದನ್​ ಪಾತ್ರ ನಿಭಾಯಿಸಲಿದ್ದಾರೆ ಎನ್ನಲಾಗುತ್ತಿದೆ. (ಏಜೆನ್ಸೀಸ್​)

    ಸಿಸಿಬಿ ವಿಚಾರಣೆ ಮುಕ್ತಾಯ: ಮತ್ತೆ ಕರೆದರೆ ಬರುವೆ ಎಂದ ದಿಗಂತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts