More

    ಇನ್ನು ದಪ್ಪ ಆಗಬಾರದು ಎಂದು ವಿಜಯ್​ ಸೇತುಪತಿ ತೀರ್ಮಾನ … ಯಾಕೆ ಗೊತ್ತಾ?

    ಚೆನ್ನೈ: ಕಳೆದ ತಿಂಗಳು ಕಾಲಿವುಡ್​ ನಟ ಸೇತುಪತಿ ಸೋಷಿಯಲ್​ ಮೀಡಿಯಾದಲ್ಲಿ ಒಂದು ಫೋಟೋ ಹಂಚಿಕೊಂಡಿದ್ದರು. ಆ ಫೋಟೋ ನೋಡಿದವರೆಲ್ಲ ಸಾಕಷ್ಟು ಆಶ್ಚರ್ಯಪಟ್ಟಿದ್ದರು. ಏಕೆಂದರೆ, ವಿಜಯ್​ ಸೇತುಪತಿ ಅದರಲ್ಲಿ ಸಾಕಷ್ಟು ತೂಕ ಇಳಿಸಿಕೊಂಡು ಸ್ಲಿಮ್​ ಅಂಡ್​ ಟ್ರಿಮ್​ ಆಗಿದ್ದರು. ಹಾಗಾಗಿ, ಎಲ್ಲರೂ ಅವರ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ಗೆ ಎಂಟ್ರಿ ಕೊಡುವುದಕ್ಕೆ ರೆಡಿಯಾಗಿದ್ದಾಳೆ ರವೀನಾ ಟಂಡನ್​ ಮಗಳು

    ಹೀಗೆ ಎಲ್ಲರೂ ಮೆಚ್ಚಿ ಮಾತನಾಡಿರುವುದು ವಿಜಯ್​ ಸೇತುಪತಿಗೆ ಬಹಳ ಖುಷಿ ತಂದಿದೆ. ಈ ಖುಷಿಯಿಂದಲೇ ಅವರೊಂದು ತೀರ್ಮಾನಕ್ಕೆ ಬಂದಿದ್ದಾರೆ. ಮುಂದೆ ಯಾವತ್ತೂ ದಪ್ಪ ಆಗಬಾರದು ಎಂದು ನಿರ್ಧರಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ‘ಅಭಿಮಾನಿಗಳು ಮಾಡಿದ ಕಾಮೆಂಟ್​ಗಳನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಬಹಳಷ್ಟು ಜನ ನಾನು ತೂಕ ಕಡಿಮೆ ಮಾಡಿಕೊಂಡಿದ್ದರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು. ಸಾಮಾನ್ಯವಾಗಿ ನಾನುಯ ವರ್ಕೌಟ್​ ಮಾಡುವುದು ರಾತ್ರಿ ಹೊತ್ತು. ಕೆಲವೊಮ್ಮೆ ಶೂಟಿಂಗ್​ ಒತ್ತಡದಲ್ಲಿ ವರ್ಕೌಟ್​ ಮಾಡುವುದಕ್ಕೆ ಆಗುವುದಿಲ್ಲ. ಜನರ ಮಾತು ಕೇಳಿ ಇನ್ನು ಮುಂದೆ ಪ್ರತಿದಿನ ಜಿಮ್​ಗೆ ಹೋಗಬೇಕು ಎಂದು ನಿರ್ಧರಿಸಿದ್ದೇನೆ. ಯಾವುದೇ ಕಾರಣಕ್ಕೂ ಮಿಸ್​ ಮಾಡಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೇನೆ’ ಎನ್ನುತ್ತಾರೆ ಅವರು.

    ಇದನ್ನೂ ಓದಿ: ಬಾಲಿವುಡ್​ಗೆ ಎಂಟ್ರಿ ಕೊಡುವುದಕ್ಕೆ ರೆಡಿಯಾಗಿದ್ದಾಳೆ ರವೀನಾ ಟಂಡನ್​ ಮಗಳು

    ‘ಫರ್ಜಿ’ ಎಂಬ ಹಿಂದಿ ವೆಬ್​ ಸೀರೀಸ್​ ಅಲ್ಲಿ ನಟಿಸಿರುವ ವಿಜಯ್​ ಸೇತುಪತಿ, ಅದಲ್ಲದೆ ಶಾರುಖ್​ ಖಾನ್​ ಅಭಿನಯದ ‘ಜವಾನ್​’ ಚಿತ್ರದಲ್ಲಿ ವಿಲನ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ರಚಿತಾ ರಾಮ್​ ಹೇಳಿಕೆಗೆ ಟೀಕೆ; ಮದ್ದೂರಿನಲ್ಲಿ ಕೇಸ್‌ ದಾಖಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts