More

    ಮೊದಲ ಬಾರಿಗೆ ತೆರೆಹಂಚಿಕೊಳ್ಳಲು ರೆಡಿಯಾಗಿದ್ದಾರೆ ವಿಕ್ರಮ್ ಮತ್ತು ವಿಜಯ್ ಸೇತುಪತಿ?

    ಚೆನೈ: ಹಲವು ವರದಿಗಳ ಪ್ರಕಾರ, ನಿರ್ದೇಶಕ ಮಣಿಕಂದನ್ ಅವರ ಮುಂದಿನ ಚಿತ್ರದಲ್ಲಿ ಕಾಲಿವುಡ್‌ನ ಇಬ್ಬರು ಪ್ರಮುಖ ನಟರು ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಹೌದು, ನಿರ್ದೇಶಕ ಮಣಿಕಂದನ್ ಅವರು ತಮ್ಮ ಹೊಸ ಚಿತ್ರದಲ್ಲಿ ನಟ ವಿಕ್ರಮ್ ಮತ್ತು ನಟ ವಿಜಯ್ ಸೇತುಪತಿಯನ್ನು ತೆರೆಹಂಚಿಕೊಳ್ಳಲು ವಿನಂತಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಇಬ್ಬರು ನಟರು ತೆರೆ ಹಂಚಿಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂಬುದು ಅಧಿಕೃತ ಘೋಷಣೆಯ ಬಳಿಕವೇ ತಿಳಿಯಲಿದೆ.
    ಅಂದಹಾಗೆ, ತಮಿಳಿನಲ್ಲಿ ಈ ಇಬ್ಬರು ನಟರದ್ದು ಒಂದು ಹೊಸ ಕಾಂಬೊ ಆಗಿರುವುದರಿಂದ, ಎಲ್ಲವೂ ನಿರ್ದೇಶಕ ಮಣಿಕಂದನ್ ಅಂದುಕೊಂಡ ಹಾಗೆ ನಡೆದರೆ ಅವರ ಸಿನಿಮಾದ ಮೇಲಿನ ನಿರೀಕ್ಷೆಗಳು ಸಿಕ್ಕಾಪಟ್ಟೆ ಹೆಚ್ಚಾಗುತ್ತೆ. ನಟ ವಿಜಯ್ ಸೇತುಪತಿ ಈಗಾಗಲೇ ನಿರ್ದೇಶಕ ಮಣಿಕಂದನ್ ಜೊತೆ ‘ಆಂಡವನ್ ಕಟ್ಟಲೈ’ ಮತ್ತು ‘ಕಡೈಸಿ ವಿವಾಹಿ’ ಎಂಬ ಎರಡು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ.
    ಆದರೆ, ವಿಜಯ್ ಅವರು ನಟ ವಿಕ್ರಮ್ ಜೊತೆ ಕೆಲಸ ಮಾಡುವುದು ಅವರಿಗೆ ಇದೇ ಮೊದಲಾಗುತ್ತೆ. ಇನ್ನು, ಹೆಸರಿಲ್ಲದ ನಿರ್ದೇಶಕ ಮಣಿಕಂದನ್ ಅವರ ಈ ಹೊಸ ಸಿನಿಮಾ ಇದೇ ವರ್ಷದ ಕೊನೆಯಲ್ಲಿ ಸೆಟ್ಟೇರಲಿದ್ದು, ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ವರದಿಗಳು ಸೂಚಿಸುತ್ತವೆ. ಎಂ.ಮಣಿಕಂದನ್ ನಿರ್ದೇಶನದ ಇತ್ತೀಚಿನ ಸಿನಿಮಾ ಕಡೈಸಿ ವಿವಸಾಯಿ ಸಿನಿಪ್ರೇಕ್ಷಕರ ಜತೆಗೆ ವಿಮರ್ಶಕರ ಮೆಚ್ಚುಗೆಯೂ ಗಳಿಸಿತು

    ಪತ್ನಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಜಗ್ಗೇಶ್​ಗೆ ಇಂದು 38ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ!

    ಅದೊಂದು ಮುಜುಗರ: 20 ಕೆ.ಜಿ ತೂಕ ಇಳಿಸಿರುವ ಹಿಂದಿನ ರಹಸ್ಯ ಬಿಚ್ಚಿಟ್ಟ 51ರ ಖುಷ್ಬೂ!

    ಪಿಂಕ್ ಬಿಕಿನಿ ಟಾಪ್​ ಧರಿಸಿ ಮಿಂಚಿದ ನಟಿ ತಮನ್ನಾ ಭಾಟಿಯಾ! ಮಾಲ್ಡೀವ್ಸ್‌ನಲ್ಲಿ ಮಸ್ತ್ ಮಜಾ…

    ಮಗ ಆಯ್ತು, ಇದೀಗ ಮಹೇಶ್ ಬಾಬು ಮಗಳೂ ಬೆಳ್ಳಿ ತೆರೆಯಗೆ ಎಂಟ್ರಿ! ಹೇಗಿದೆ ಸಿತಾರಾ ಡ್ಯಾನ್ಸ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts