More

    ಕೇಸ್ ಕ್ಲೋಸ್ ಮಾಡಿ, ಸಾಲ ಮರುಪಾವತಿಸ್ತೇನೆ- ಅಂಗಾಲಾಚುತ್ತಿದ್ದಾರೆ ವಿಜಯ್ ಮಲ್ಯ!

    ನವದೆಹಲಿ: ಸಾಲ ಮರುಪಾವತಿ ವಿಚಾರದಲ್ಲಿ ಕಾನೂನು ಹೋರಾಟದ ಮೊರೆ ಹೋಗಿ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್​ ಮಲ್ಯ ತಮ್ಮ ವರಸೆ ಬದಲಾಯಿಸಿಕೊಂಡಿದ್ದು, ಶೇಕಡ 100ಕ್ಕೆ 100 ಸಾಲವನ್ನೂ ಮರುಪಾವತಿಸುತ್ತೇನೆ, ನನ್ನ ವಿರುದ್ಧದ ಎಲ್ಲ ಕೇಸ್ ಕ್ಲೋಸ್ ಮಾಡಿ ಎಂದು ಅಂಗಾಲಾಚತೊಡಗಿದ್ದಾರೆ.

    ಇದನ್ನೂ ಓದಿ: 54 ವರ್ಷದ ಮಹಿಳೆಗೆ ಅವಳಿ ಮಕ್ಕಳು, ಪತಿಗೆ 64 ವರ್ಷ- ದಂಪತಿಯ ಬದುಕೇ ಒಂದು ಕರುಣಾಜನಕ ಕಥೆ

    ಭಾರತಕ್ಕೆ ಗಡಿಪಾರು ಮಾಡುವ ವಿಚಾರದಲ್ಲಿ ಲಂಡನ್​ನಲ್ಲಿದ್ದುಕೊಂಡೇ ತೀವ್ರ ಹೋರಾಟ ನಡೆಸುತ್ತಿರುವ ಮಲ್ಯ, ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ ಭಾರತ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅದೂ ಟ್ವೀಟ್ ಮಾಡುವ ಮೂಲಕ!

    ಇದನ್ನೂ ಓದಿ: ಮದ್ಯಪ್ರಿಯರಿಗಷ್ಟೇ ಅಲ್ಲ, ಮದ್ಯ ಮಾರಾಟಗಾರರಿಗೂ ದೀದಿ ನಾಡಲ್ಲಿ ಭಾರಿ ಸಂಕಷ್ಟ!

    ಕೋವಿಡ್ 19 ಪರಿಹಾರ ಪ್ಯಾಕೇಜ್ ಘೋಷಿಸಿದ ಸರ್ಕಾರವನ್ನು ಅಭಿನಂದಿಸುತ್ತೇನೆ. ಅವರು ಅವರಿಗೆ ಬೇಕಾದಷ್ಟು ಕರೆನ್ಸಿಯನ್ನು ಮುದ್ರಿಸಬಹುದು. ಆದರೆ, ಆರ್ಥಿಕತೆಗೆ ಚಿಕ್ಕ ಕೊಡುಗೆ ಕೊಡುವ ನನ್ನಂಥ ವ್ಯಕ್ತಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಾಲವನ್ನು ಶೇಕಡ 100ರಷ್ಟೂ ಪಾವತಿಸುತ್ತೇನೆ ಎಂದರೂ ನಿರಂತರವಾಗಿ ನಿರ್ಲಕ್ಷಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ರೌಡಿ ಮೂಲಕ ಹಣ ವಸೂಲಿ: ಸಿಸಿಬಿ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳ ಖತರ್​ನಾಕ್ ಐಡಿಯಾ!

    ಅವರ ಈ ಟ್ವೀಟ್​ ಸರ್ಕಾರವನ್ನು ಅಂಗಾಲಾಚುವಂತೆ ಕಂಡರೂ ಅಲ್ಲೊಂದು ವ್ಯಂಗ್ಯವಿದೆ, ಲೇವಡಿ ಇದೆ, ರಾಜಕೀಯ ಕಂಪು ಇರುವುದು ಕಂಡುಬರುತ್ತದೆ. ಅವರ ಈ ಟ್ವೀಟ್​ ಅನ್ನು ಹತ್ತಿರ ಹತ್ತಿರ 4 ಸಾವಿರ ಜನ ಮೆಚ್ಚಿದ್ದು, 700ಕ್ಕೂ ಹೆಚ್ಚು ಜನ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆ ಪ್ರತಿಕ್ರಿಯೆಗಳಲ್ಲೂ ಅಂಥದ್ದೇ ಲೇವಡಿ, ವ್ಯಂಗ್ಯ, ಹಾಸ್ಯಗಳೂ ಇವೆ!.

    ಅಪ್ಪನ ಬೆನ್ನಿಗೆ ಚೂರಿ ಇಟ್ಟ ಆ ಹುಡುಗ, “ಬೈಕ್ ಓಡಿಸು” ಅಂದ; ಮುಂದೇನಾಯಿತು..

    ಮಲ್ಯಗೆ ಇನ್ನು ಭಾರತವೇ ಗತಿ! ಹಸ್ತಾಂತರ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಲಂಡನ್‌ ಹೈಕೋರ್ಟ್‌

    ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಶರ್ ಸಂಸ್ಥೆ ಪಾವತಿಸಬೇಕಿದ್ದ ಒಂದೇ ಒಂದು ಪೈಸಾ ಬಂದಿಲ್ಲ; ನ್ಯಾಯಮೂರ್ತಿ ರೋಹಿಂಟನ್ ನಾರಿಮನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts