More

    200 ಕೋಟಿ ಆಫರ್ ತುಂಬ ಕಮ್ಮಿ ಆಯ್ತು; ‘ಲೈಗರ್‘ ಒಟಿಟಿ ರೇಟ್ ಬಗ್ಗೆ ದೇವರಕೊಂಡ ಕಮೆಂಟ್

    ಹೈದರಾಬಾದ್: ಪುರಿ ಜಗನ್ನಾಥ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಲೈಗರ್‘, ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್ ಮುಗಿಸಿಕೊಂಡಿದೆ. ಇತ್ತೀಚೆಗಷ್ಟೇ ಚಿತ್ರದ ಶೀರ್ಷಿಕೆ ಸಹ ಅನಾವರಣಗೊಂಡು, ದೊಡ್ಡ ಮಟ್ಟದಲ್ಲಿ ಸದ್ದು ಸಹ ಮಾಡಿತ್ತು. ಇದೀಗ ಇದೇ ಸಿನಿಮಾ ದೊಡ್ಡ ಮೊತ್ತಕ್ಕೆ ಒಟಿಟಿಗೆ ಸೇಲ್ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ಸುದ್ದಿಗೆ ಚಿತ್ರದ ನಾಯಕ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನೂ ಓದಿ: ಅಡಕತ್ತರಿಯಲ್ಲಿ ಚಿರಂಜೀವಿ … ಆ ಇಬ್ಬರಲ್ಲಿ ಯಾರಿಗೆ ಸಪೋರ್ಟ್​?

    ಹೌದು ಲೈಗರ್ ಸಿನಿಮಾಕ್ಕೆ ಒಟಿಟಿಯಲ್ಲಿ ಡಿಮಾಂಡ್ ಕ್ರಿಯೆಟ್ ಆಗಿದೆ ಎಂಬಂಥ ಸುದ್ದಿ ಹರಿದಾಡುತ್ತಿದೆ. ಅಷ್ಟೇ ಅಲ್ಲ ಸಿನಿಮಾ ತಂಡಕ್ಕೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಲು 200 ಕೋಟಿ ಆಫರ್ ಸಹ ಕೊಟ್ಟಿದ್ದಾರಂತೆ. ಈ ವದಂತಿಗೆ ಪ್ರತಿಕ್ರಿಯಿಸಿರುವ ದೇವರಕೊಂಡ, ಇದು ತುಂಬ ಸಣ್ಣ ಮೊತ್ತವಾಯಿತು. ಚಿತ್ರಮಂದಿರಗಳಲ್ಲಿ ಇದಕ್ಕಿಂತ ಹೆಚ್ಚಿನದನ್ನೇ ಗಳಿಕೆ ಮಾಡಲಿದ್ದೇನೆ ಎನ್ನುವ ಮೂಲಕ ಚಿತ್ರಮಂದರಿದತ್ತ ಮುಖ ಮಾಡಿದ್ದಾರೆ.


    ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಸ್ಟಾರ್​ಪಟ್ಟ ಗಿಟ್ಟಿಸಿಕೊಂಡ ವಿಜಯ್, ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅರ್ಜುನ್ ರೆಡ್ಡಿ ಬಳಿಕ ಬಂದ ಸಿನಿಮಾಗಳೆಲ್ಲವೂ ಹಲವು ಭಾಷೆಗಳಲ್ಲಿ ತೆರೆಗೆ ಬಂದಿವೆಯಾದರೂ, ಎಲ್ಲವೂ ನಿರೀಕ್ಷೆ ಮಟ್ಟ ತಲುಪಿಲ್ಲ. ಆದರೂ ವಿಜಯ್ ತಮ್ಮ ಮಾರುಕಟ್ಟೆಯ ಮೌಲ್ಯವೇನೂ ಕಮ್ಮಿ ಆಗಿಲ್ಲ. ಹಾಗಾಗಿಯೇ ಕರಣ್ ಜೋಹರ್ ಮತ್ತು ಚಾರ್ಮಿ ಕೌರ್ ಲೈಗರ್ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ.

    ಇದನ್ನೂ ಓದಿ: ಪ್ರತಿ ಚಿತ್ರವೂ ಪ್ರಶಸ್ತಿ ತರುವುದಿಲ್ಲ ಎಂಬ ಸತ್ಯ ವಿಜಯ್​ಗೂ ಗೊತ್ತಿತ್ತು …

    ಆ್ಯಕ್ಷನ್ ಪ್ಯಾಕ್ ಸಿನಿಮಾ ಇದಾಗಿರಲಿದ್ದು, ವಿಜಯ್ ದೇವರಕೊಂಡ ಹಿಂದೆಂದೂ ಕಾಣಿಸದ ರೀತಿಯಲ್ಲಿ ಬಾಕ್ಸಿಂಗ್ ಕೋರ್ಟ್ನಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಲೈಗರ್ ಚಿತ್ರಕ್ಕೆ ಸಾಲಾ ಕ್ರಾಸ್ ಬ್ರೀಡ್ ಎಂಬ ಟ್ಯಾಗ್​ಲೈನ್​ ಸಹ ಇದೆ. ಹಿಂದಿ, ತೆಲುಗು, ತಮಿಳು, ಕನ್ನಡ ,ಮತ್ತು ಮಲಯಾಳಂನಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ರಮ್ಯಾ ಕೃಷ್ಣನ್ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts