More

    ಆನಂದ ಸಿಂಗ್ ರಾಜೀನಾಮೆ ಗುಲ್ಲಿನ ಬೆನ್ನಿಗೇ ಕಾವೇರಿದ ರಾಜಕೀಯ ಚಟುವಟಿಕೆ; ಬಂಡೇಳುತ್ತಾರಾ ಮತ್ತಷ್ಟು ಶಾಸಕರು?

    ಬೆಂಗಳೂರು: ರಾಜ್ಯ ಬಿಜೆಪಿಗೆ ಸದ್ಯ ತಲೆನೋವಾಗಿ ಪರಿಣಮಿಸಿರುವ ಅತೃಪ್ತ ಸಚಿವ ಆನಂದ ಸಿಂಗ್, ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಆನಂದಕ್ಕೇ ಕುತ್ತು ತಂದಿದ್ದಾರೆ. ಮಾತ್ರವಲ್ಲ, ಆನಂದ ಸಿಂಗ್ ರಾಜೀನಾಮೆ ಗುಲ್ಲಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು, ಒಂದು ರೀತಿಯಲ್ಲಿ ಕಾವೇರಿದ ವಾತವಾರಣ ಸೃಷ್ಟಿಯಾಗಿದೆ.

    ಸದ್ಯದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸುಮಾರು ಅರ್ಧಗಂಟೆ ಕಾಲ ಚರ್ಚಿಸಿ ಕೆಲವು ನಿಮಿಷಗಳ ಮೊದಲು ಅಲ್ಲಿಂದ ತೆರಳಿರುವ ಸಿಎಂ, ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.

    ಆನಂದ ಸಿಂಗ್ ಮಾತ್ರವಲ್ಲದೆ ಅಸಮಾಧಾನಿತ ಶಾಸಕರಾದ ಎಂಟಿಬಿ ನಾಗರಾಜ್​, ಸಿ.ಪಿ. ಯೋಗೀಶ್ವರ್, ಪ್ರೀತಂ ಗೌಡ ಮುಂತಾದವರ ಕುರಿತು ಚರ್ಚೆ ನಡೆದಿದ್ದು, ಮುಂದೇನು ಮಾಡಬೇಕು ಎಂಬ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ. ಅಸಮಾಧಾನಿತ ಶಾಸಕರ ಮನವೊಲಿಸುವ ತಂತ್ರಗಾರಿಕೆಯಲ್ಲಿ ಯಡಿಯೂರಪ್ಪ ಚಾಣಾಕ್ಷರಾಗಿರುವ ಕಾರಣಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಸದ್ಯ ರೆಬೆಲ್​ ಆಗಿರುವ ಶಾಸಕರ ಜತೆಗೆ ಮತ್ತಷ್ಟು ಶಾಸಕರು ಸೇರಿದರೆ ಸರ್ಕಾರಕ್ಕೆ ಆಪತ್ತು ಖಚಿತ ಎಂಬುದನ್ನು ಅರಿತ ಸಿಎಂ, ಈಗಾಗಲೇ ಆ ಎಲ್ಲ ಬೆಳವಣಿಗೆಗಳನ್ನು ಶಮನಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂಬದು ತಿಳಿದು ಬಂದಿದೆ.

    ರಾಜೀನಾಮೆ ಕೊಟ್ಟೇ ಬಿಟ್ರಾ ಸಚಿವ ಆನಂದ ಸಿಂಗ್​!; ಬೊಮ್ಮಾಯಿ ಸಂಪುಟದಲ್ಲಿ ಮೊದಲ ವಿಕೆಟ್ ಪತನ?

    ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವನನ್ನು ತಾವು ಸಂಚರಿಸುತ್ತಿದ್ದ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ದ ಶಾಸಕ

    ರೋಗಿ ಎಚ್ಚರವಿರುವಾಗಲೇ ನಡೆಯಿತು ಮಿದುಳಿನ ಶಸ್ತ್ರಚಿಕಿತ್ಸೆ; ಸರ್ಜರಿ ನಡೆಯುವಾಗ ಗಾಯತ್ರಿ ಮಂತ್ರ ಪಠನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts