More

    VIDEO: ಕೂಲಿ ಕಾರ್ಮಿಕರ ಜಾಗ ತುಂಬೋದಕ್ಕೆ ಬರ್ತಿವೆ ರೊಬಾಟ್​​ಗಳು!

    ಸರಕು ಸಾಗಣೆಯಲ್ಲಿ ಪ್ರಮುಖ ಪಾತ್ರವಹಿಸುವವರು ಕೂಲಿ ಕಾರ್ಮಿಕರು/ಶ್ರಮಿಕರು. ಭವಿಷ್ಯದಲ್ಲಿ ಅವರ ಜಾಗವನ್ನು ರೊಬಾಟ್​ಗಳು ತುಂಬಿದರೆ ಅಚ್ಚರಿ ಏನಿಲ್ಲ. ಅಮೆರಿಕದ ಎಜಿಲಿಟಿ ರೊಬಾಟಿಕ್ಸ್​ ಎಂಬ ಕಂಪನಿಯೊಂದು ಇಂತಹ ರೊಬಾಟ್​ಗಳನ್ನು ನಿರ್ಮಿಸತೊಡಗಿದೆ. ಅದು ನಿರ್ಮಿಸುತ್ತಿರುವ ರೊಬಾಟ್​ಗಳನ್ನು ಖರೀದಿಸುವ ಮೊದಲ ಕಂಪನಿ ತಾನೆಂದು ಫೋರ್ಡ್​ ಇತ್ತೀಚೆಗೆ ಘೋಷಿಸಿಕೊಂಡಿದೆ! ಅಂದ ಹಾಗೆ ಈ ರೊಬಾಟ್​ನ ಹೆಸರು ಡಿಜಿಟ್​.

    ಹಲವಾರು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ದೃಷ್ಟಿಯಿಂದ ಬಹುತೇಕ ಕಂಪನಿಗಳು ಆಟೋಮೇಷನ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮುಂತಾದವುಗಳ ಮೊರೆ ಹೋಗುತ್ತಿವೆ. ಫೋರ್ಡ್​ ಮೋಟಾರ್ ಕಂಪನಿ ಕೂಡ ಬಹುತೇಕ ಕೆಲಸಗಳನ್ನು ಆಟೋಮೇಷನ್ ಮಾಡಿಕೊಂಡಿದ್ದು, ಇದೀಗ ಎಜಿಲಿಟಿ ರೊಬಾಟಿಕ್ಸ್​ನಿಂದ ಎರಡು ಡಿಜಿಟ್ ರೊಬಾಟ್​ಗಳನ್ನು ಪಡೆದುಕೊಳ್ಳುತ್ತಿದೆ. ಈ ಸಂಬಂಧ ಒಪ್ಪಂದವನ್ನೂ ಮಾಡಿಕೊಂಡಿರುವುದಾಗಿ ಘೋಷಿಸಿದೆ. ಗ್ರಾಹಕರ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸುವುದಕ್ಕೆ ಈ ರೊಬಾಟ್​ಗಳು ನೆರವಾಗಲಿವೆ. ರೊಬಾಟ್​ಗಳಿಗೆ ಪರಸ್ಪರ ಮಾತನಾಡುವ ಸಾಮರ್ಥ್ಯವೂ ಇದ್ದು ಅನುಕೂಲವಾಗಲಿದೆ ಎಂದು ಕಂಪನಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಆಹಾ! ರುಚಿ ರುಚಿ ಮಾಸ್ಕ್‌ ಪರೋಟಾ… ಸವಿಯಬೇಕಿದ್ದರೆ ಇಲ್ಲಿಗೆ ಬನ್ನಿ…

    ಡಿಜಿಟ್​ನ ಮೊದಲ ಪ್ರೊಟೊಟೈಪ್​ ಮೇ ತಿಂಗಳಲ್ಲಿ ಪೂರ್ಣಗೊಂಡಿದೆ. ಲಾಸ್​ವೇಗಾಸ್​ನಲ್ಲಿ ಸಿಇಎಸ್​ 2020ರ ಜನವರಿ 7-10ರಂದು ನಡೆದಾಗ ಅಲ್ಲಿ ಫೋರ್ಡ್​​ನ ಬೂತ್​ನಲ್ಲಿ ಎರಡು ಪ್ರೀ ಪ್ರೊಡಕ್ಷನ್ ಡಿಜಿಟ್​ ಪ್ರೊಟೊಟೈಪ್​ ರೊಬಾಟ್​ಗಳನ್ನು ಬಳಸಲಾಗಿತ್ತು. ಇದು ಟೆಕ್​ ಜಗತ್ತಿನ ಗಮನಸೆಳೆದಿತ್ತು. ಫೋರ್ಡ್​ ಮತ್ತು ಎಜಿಲಿಟಿ ರೊಬಾಟಿಕ್ಸ್​ನ ಈ ಪ್ರಯತ್ನ ಈಗ ಜಗತ್ತಿನ ಕುತೂಹಲ ಕೆರಳಿಸಿದೆ. (ಏಜೆನ್ಸೀಸ್)

    Viral : ಯಾವ ಝೀಬ್ರಾ ಮುಂಭಾಗದಲ್ಲಿದೆ ಹೇಳಬಲ್ಲಿರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts