More

    VIDEO: ಗೊಲ್ಲಾರ್​- ಔಷಧ ತಲುಪಿಸುವ ರೋಬಾಟ್

    ಕೋವಿಡ್-19 ಸೋಂಕು ಎಂದರೆ ಬಹಳ ಜನ ಭಯಭೀತರಾಗುತ್ತಾರೆ. ಅವರ ಜತೆಗೆ ಮಾತನಾಡುವುದಕ್ಕೂ ಅಂಜುತ್ತಾರೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಮುಂಬೈನ ವರ್ಲಿಯಲ್ಲಿರುವ ಪೊದಾರ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಔಷಧ, ಊಟ, ನೀರು ಕೊಡುವುದಕ್ಕೆ ನರ್ಸ್​ಗಳ ಬದಲು ಟ್ರಾಲಿ ಮಾದರಿಯ ರಿಮೋಟ್ ಕಂಟ್ರೋಲ್ ಆಧಾರಿತ ಗೊಲ್ಲಾರ್ ಎಂಬ ರೋಬಾಟ್ ಬಳಕೆಯಾಗುತ್ತಿದೆ. ಕೋವಿಡ್ ಸೋಂಕಿನ ಲಕ್ಷಣಗಳು ಕಂಡುಬಂದವರನ್ನು ಈ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
    ಅಂಥ ಶಂಕಿತರ ಜತೆಗೆ ನೇರ ಸಂಪರ್ಕ ಹೊಂದುವುದನ್ನು ತಪ್ಪಿಸಲು ಈ ಬಗೆಯ ರೋಬಾಟ್​ಗಳನ್ನು ಬಳಸಲಾಗುತ್ತಿದೆ. ಕ್ವಾರಂಟೈನ್ ವಾರ್ಡ್​ನಲ್ಲಿ ರೋಬಾಟ್ ಸಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    29 ಶೈಕ್ಷಣಿಕ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಭಾಗ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts