ಇಸ್ಲಾಮಾಬಾದ್: ನಾಳೆ ಭಾರತದ ಪ್ರಧಾನ ಮಂತ್ರಿ, ಪಾಕಿಸ್ತಾನ ಕ್ರಿಕೆಟ್ಗೆ ಫಂಡ್ ಮಾಡಬಾರದು ಎಂದು ಯೋಚಿಸಿದಲ್ಲಿ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಕುಸಿದುಬೀಳಬಹುದು ಎಂದು ಪಿಸಿಬಿ ಚೇರ್ಮನ್ ರಮೀಜ್ ರಾಜ ಹೇಳಿದ್ದಾರೆ.
“ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಶೇಕಡ 50ರಷ್ಟು ಫಂಡಿಂಗ್ ಐಸಿಸಿಯಿಂದ ಬರುತ್ತದೆ. ಐಸಿಸಿಯನ್ನು ಶೇಕಡ 90 ರಷ್ಟು ಫಂಡ್ ಮಾಡುವುದು ಭಾರತದ ಮಾರುಕಟ್ಟೆ. ಆದ್ದರಿಂದ ಪಾಕ್ ಕ್ರಿಕೆಟ್ನ ಅಸ್ತಿತ್ವ ಭಾರತದ ಬಿಸಿನೆಸ್ ಹೌಸ್ಗಳ ಕೈಯಲ್ಲಿದೆ. ನಾಳೆ ಭಾರತದ ಪ್ರಧಾನಿ ಪಿಸಿಬಿಗೆ ಫಂಡ್ ಮಾಡಬಾರದು ಎಂದು ಯೋಚಿಸಿದಲ್ಲಿ, ನಮ್ಮ ಕ್ರಿಕೆಟ್ ಬೋರ್ಡ್ ಕುಸಿದುಬೀಳುತ್ತದೆ. ಇದು ಭಯ ಹುಟ್ಟಿಸುವ ವಿಚಾರವಾಗಿದೆ” ಎಂದು ರಾಜಾ ಹೇಳಿದ್ದಾರೆ.
“50% of PCB is run on ICC funding. 90% of ICC is run on BCCI funding. India is running PCB. Modi can shut down PCB the day he wants.”
– PCB Chairman, Ramiz Raja pic.twitter.com/4DOqJOQLGJ
— Amit Malviya (@amitmalviya) October 7, 2021
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಕ್ರಿಕೆಟ್ ಸಂಬಂಧದ ಉನ್ನತ ಮಟ್ಟದ ಸಭೆಯೊಂದರಲ್ಲಿ ರಾಜ ಈ ಮಾತುಗಳನ್ನು ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಐಸಿಸಿ ಮೇಲಿನ ಅವಲಂಬನೆಯನ್ನು ಪಿಸಿಬಿ ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿರುವ ಅವರು, ಜೊತೆಯಲ್ಲೇ ಪಾಕ್ ಕ್ರಿಕೆಟ್ಗೆ ದೇಶೀಯವಾಗಿ ಪೂರಕ ಅರ್ಥವ್ಯವಸ್ಥೆ ಕಲ್ಪಿಸುವುದು ಬಹಳ ಮುಖ್ಯ ಎಂದಿದ್ದಾರೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)
ರಾಜ್ಯದಲ್ಲಿ ಕಾಂಗ್ರೆಸ್ ಎರಡು ಹೋಳಾಗುವುದರಲ್ಲಿ ಅಚ್ಚರಿ ಇಲ್ಲ: ಈಶ್ವರಪ್ಪ