More

    ರಾಜ್ಯದಲ್ಲಿ ಕಾಂಗ್ರೆಸ್ ಎರಡು ಹೋಳಾಗುವುದರಲ್ಲಿ ಅಚ್ಚರಿ ಇಲ್ಲ: ಈಶ್ವರಪ್ಪ

    ವಿಜಯಪುರ: ಸಾರ್ವತ್ರಿಕ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಎರಡು ಹೋಳಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಡಿ.ಕೆ.ಶಿವಕುಮಾರ ಎಡಗಡೆ ಎಳೆದರೆ ಸಿದ್ದರಾಮಯ್ಯ ಬಲಗಡೆ ಎಳೆಯುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

    ಸಿಂದಗಿ ವಿಧಾನ ಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮಿತಿಮೀರಿ ಹೋಗಿದೆ. ಡಿಕೆಶಿಯದ್ದೇ ಒಂದು ಗುಂಪು, ಸಿದ್ದರಾಮಯ್ಯಂದು ಮತ್ತೊಂದು ಗುಂಪು ಇದೆ. ಮುಖ್ಯಮಂತ್ರಿ ಸ್ಥಾನಕ್ಕೆ ಜಗಳವಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಎರಡು ಹೋಳಾದರೂ ಅಚ್ಚರಿ ಪಡಬೇಕಿಲ್ಲ ಎಂದರು.

    ಇದನ್ನೂ ಓದಿ: ಎಚ್​.ಡಿ.ಕುಮಾರಸ್ವಾಮಿ ಆಪ್ತನ ಮನೆ ಮೇಲೂ ಐಟಿ ದಾಳಿ

    ಐಟಿ ದಾಳಿ ವಿಚಾರ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಪ್ತರ ಮನೆ ಮೇಲಿನ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಐಟಿ ಸಂಸ್ಥೆ ಸ್ವಾಯತ್ತ ಸಂಸ್ಥೆ. ತನ್ನಷ್ಟಕ್ಕೆ ಕೆಲಸ ಮಾಡುತ್ತದೆ. ಈ ಹಿಂದೆ ಕಾಂಗ್ರೆಸ್ಸಿಗರ ಮನೆ ಮೇಲೆ ಐಟಿ ದಾಳಿ ನಡೆದಾಗ ಬಿಜೆಪಿ ಮೇಲೆ ಆರೋಪಿಸಿದರು. ಈಗ ಮತ್ತೊಂದು ಆರೋಪ ಮಾಡುತ್ತಿದ್ದಾರೆ. ಪ್ರತಿಪಕ್ಷದವರ ಕೆಲಸವೇ ಅದಾಗಿದೆ ಎಂದರು.

    ಆರ್‌ಎಸ್‌ಎಸ್ ವಿರುದ್ಧ ಆರೋಪ ಸಲ್ಲ: ಸಚಿವ ಗೋವಿಂದ ಕಾರಜೋಳ ಮಾತನಾಡಿ, ರಾಜಕೀಯದಲ್ಲಿ ಆರ್‌ಎಸ್‌ಎಸ್ ಎಳೆದು ತರೋದು ಕಾಂಗ್ರೆಸ್‌ನ ಹತಾಶ ಮನೋಭಾವ ಆಗಿದೆ ಎಂದರು. ಜೆಡಿಎಸ್ ಹಾಗೂ ಕಾಂಗ್ರೆಸ್‌ನವರು ಮಾಡಲು ಬೇರೆ ಕೆಲಸವಿಲ್ಲದೆ ಆರ್‌ಎಸ್‌ಎಸ್ ಬಗ್ಗೆ ಆರೋಪಿಸುತ್ತಿದ್ದಾರೆ. ಆರ್‌ಎಸ್‌ಎಸ್ ತಗಲಾಕಿಕೊಂಡರೆ ಚುನಾವಣೆ ಲಾಭ ಆಗಬಹುದು ಎಂದು ಆರೋಪ ಮಾಡುತ್ತಿದ್ದಾರೆ ಎಂದರು.

    ಅಮಾವಾಸ್ಯೆ ಬಳಿಕ ಘೋಷಣೆ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಉತ್ತರ ಭಾರತದಲ್ಲಿ ನವರಾತ್ರಿ ಪವಿತ್ರ ಆಚರಣೆ. ಹೀಗಾಗಿ ಅಮಾವಾಸ್ಯೆ ಕಳೆದ ಬಳಿಕ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಅಭ್ಯರ್ಥಿ ಘೋಷಣೆ ವಿಳಂಬಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, 2ನೇ ತಾರೀಕೇ ಪಕ್ಷದ ಕೋರ್ ಕಮೀಟಿ ಸಭೆಯಲ್ಲಿ ಅಭ್ಯರ್ಥಿ ಪಟ್ಟಿ ಆಯ್ಕೆ ಮಾಡಿ ಹೈಕಮಾಂಡ್‌ಗೆ ಕಳುಹಿಸಲಾಗಿತ್ತು. ನವರಾತ್ರಿ ಹಿನ್ನೆಲೆ ಘೋಷಣೆಯಾಗಿರಲಿಲ್ಲ ಎಂದರು.

    ಇದನ್ನೂ ಓದಿ: ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಬೇಡ ; ವಿರೋಧ ಪಕ್ಷಗಳಿಗೆ ಜೆಡಿಎಸ್ ಮುಖಂಡ ಕೃಷ್ಣಮೂರ್ತಿ ಸಲಹೆ

    ಸಿಂದಗಿ ಚುನಾವಣೆಗಾಗಿ ಸಚಿವರು, ಸಂಸದರು, ಕಲಬುರಗಿ ಜಿಲ್ಲೆಯ ಹಾಗೂ ಇತರೆಡೆಯ ಶಾಸಕರನ್ನು ಒಳಗೊಂಡು 7 ತಂಡಗಳ ರಚನೆ ಮಾಡಲಾಗಿದೆ. ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲುವ ಗುರಿ ಹೊಂದಲಾಗಿದೆ. ಕಾರ್ಯಕರ್ತರಲ್ಲಿ ಉತ್ಸಾಹ ಇದೆ. ಕಳೆದ ಸಲ ಕ್ಷೇತ್ರ ಕಳೆದುಕೊಂಡ ನೋವಿದೆ. ಹೀಗಾಗಿ ಈ ಬಾರಿ ಗೆಲ್ಲುವ ಛಲ ಇದೆ. ನಾವೆಲ್ಲ ಇಲ್ಲೇ ಇದ್ದು ಗೆಲುವಿಗೆ ಶ್ರಮಿಸುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಎರಡು ದಿನ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.

    ಸಚಿವ ವಿ.ಸೋಮಣ್ಣ ಮಾತನಾಡಿ, ರಮೇಶ ಭೂಸನೂರ ಎಲ್ಲರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಅವರನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಜನ ಒಳ್ಳೆಯ ಸಂದೇಶ ನೀಡಲಿದ್ದಾರೆ ಎಂದರು. ಸಚಿವರಾದ ಸಿ.ಸಿ. ಪಾಟೀಲ, ಶಶಿಕಲಾ ಜೊಲ್ಲೆ, ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಅಭ್ಯರ್ಥಿ ರಮೇಶ ಭೂಸನೂರ ಮತ್ತಿತರರಿದ್ದರು.

    ಲಖೀಂಪುರ್​ ಖೇರಿ ಕೇಸ್​: ಕೇಂದ್ರ ಸಚಿವರ ಪುತ್ರನಿಗೆ ಪೊಲೀಸ್​ ಸಮನ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts