More

    ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ: 27 ಜನರ ಬಂಧನ

    ಮೈಸೂರು: ನಗರದಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಜೂಜಾಡುತ್ತಿದ್ದ 27 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


    ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಂಪುರ 2ನೇ ಹಂತ ನಿರ್ಮಲ ಸ್ಕೂಲ್ ಹಿಂಭಾಗದ ಖಾಲಿ ಜಾಗದಲ್ಲಿ ಅಂದರ್ ಬಾಹರ್ ಜೂಜಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ, ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, 18 ಜನರನ್ನು ಬಂಧಿಸಿ, ಅವರಿಂದ 2.02 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ಮತ್ತೊಂದು ಪ್ರಕರಣದಲ್ಲಿ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚೌಡೇಶ್ವರಿ ದೇವಸ್ಥಾನದ ವಾಟರ್ ಟ್ಯಾಂಕ್ ರಸ್ತೆ ಬಳಿಯ ಖಾಲಿ ಜಾಗದಲ್ಲಿ ಅಂದರ್ ಬಾಹರ್‌ನಲ್ಲಿ ತೊಡಗಿದ್ದ 9 ಜನರನ್ನು ಸಿಸಿಬಿ, ಆಲನಹಳ್ಳಿ ಠಾಣೆ ಪೊಲೀಸರು ಜಂಟಿ ದಾಳಿ ವಶಕ್ಕೆ ಪಡೆದು, ಅವರಿಂದ 1.12 ಲಕ್ಷ ರೂ. ನಗದು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts