More

    VIDEO| ಪ್ರವಾಹಕ್ಕೆ ಸಿಲುಕಿರೋ ಜನರನ್ನ ರಕ್ಷಿಸುತ್ತಿರೋ ಹೆಲಿಕಾಪ್ಟರ್​ ದೃಶ್ಯ ನೋಡಿ!

    ಮುಂಬೈ: ಕಳೆದ ದಿನಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಎದ್ದ ಗುಲಾಬ್​ ಚಂಡಮಾರುತದ ಅಬ್ಬರಕ್ಕೆ ಆಂಧ್ರ ಪ್ರದೇಶ ಮತ್ತು ಒಡಿಶಾದೊಂದಿಗೆ ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿಯೂ ಭಾರೀ ಮಳೆ ಉಂಟಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಿವಿಧ ರೀತಿಯಲ್ಲಿ ಅಪಾಯ ಒದಗಿಬಂದಿದೆ.

    ಮಹಾರಾಷ್ಟ್ರದ ಪ್ರವಾಹಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳಿಗಾಗಿ ಮಂಗಳವಾರದಿಂದ ಭಾರತೀಯ ವಾಯುಪಡೆಯ (ಐಎಎಫ್​) ಎಂಐ-17 ಹೆಲಿಕಾಪ್ಟರ್​ಗಳನ್ನು ಬಳಸಲಾಗುತ್ತಿದೆ. ರಾಜ್ಯದ ಲಾತೂರ್​ ಜಿಲ್ಲೆಯ ಪೋಹರೆಗಾವ್​​ ಗ್ರಾಮದಲ್ಲಿ ಗುಡಿಸಲೊಂದರ ತಾರಸಿಯಿಂದ ಮೂರು ಜನರನ್ನು ರಕ್ಷಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. (ಏಜೆನ್ಸೀಸ್)

    ವಿಕೃತಕಾಮಿ‌ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ

    ಸರ್ಕಾರಿ ಶಾಲೆ ಮಕ್ಕಳಿಗೆ ಪೌಷ್ಠಿಕ ಆಹಾರ: ‘ಪಿಎಂ ಪೋಷಣ್​’ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts