More

    VIDEO | ಬೆಟ್ಟದ ಮೇಲೆ ಓಡಿದ ಸಚಿವರು ! ‘ಹೊಸ ಭಾರತ ಫಿಟ್ ಭಾರತ’

    ಶ್ರೀನಗರ : ಭಾರತದ ಕ್ರೀಡಾ ಮತ್ತು ಯುವಜನ ಸೇವಾ ಸಚಿವರಾದ ಕಿರೆನ್ ರಿಜಿಜು ಅವರು ಶ್ರೀನಗರದ ಬೆಟ್ಟದ ಮೇಲಿನ ರಸ್ತೆಯಲ್ಲಿ ಓಡುತ್ತಿರುವ ತಮ್ಮ ವಿಡಿಯೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸುಮಾರು 5,400 ಅಡಿ ಎತ್ತರದಲ್ಲಿ ಅಪ್​ಹಿಲ್​ ರನ್ನಿಂಗ್​ ಮಾಡುತ್ತಿರುವ ರಿಜಿಜು, ಇದಕ್ಕೆ ‘ಫಿಟ್​ ಇಂಡಿಯಾ ಮೂವ್​ಮೆಂಟ್’​ ಮತ್ತು ‘ನ್ಯೂ ಇಂಡಿಯಾ ಫಿಟ್ ಇಂಡಿಯಾ’ ಎಂಬ ಹ್ಯಾಷ್​ ಟ್ಯಾಗ್​ಗಳನ್ನು ಹಾಕಿದ್ದಾರೆ.

     

    “ಯಾವುದೇ ಸ್ಥಳದಲ್ಲಿರಲಿ, ಯಾವುದೇ ಸಮಯವಾಗಿರಲಿ, ದೇಹದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು” ಎಂದಿರುವ ರಿಜಿಜು, ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆಯ ವ್ಯಾಯಾಮ ಮಾಡಿ ಎಂದು ಕರೆ ನೀಡಿದ್ದಾರೆ. “ಎಲ್ಲಾ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಫಿಟ್​ನೆಸ್ಸೇ ಪರಿಹಾರ” ಎಂದಿದ್ದಾರೆ.

    ವಿಡಿಯೋದಲ್ಲಿ ಹಿನ್ನೆಲೆಯಲ್ಲಿ ‘ಖೇಲೋ ಇಂಡಿಯಾ ದುನಿಯಾ ಕೋ ಜೀತೋ’ ಎಂಬ ಸ್ಫೂರ್ತಿದಾಯಕ ಹಿಂದಿ ಹಾಡು ಕೇಳಿಬರುತ್ತದೆ. “ಫಿಟ್​ನೆಸ್​ ಕಾ ಡೋಸ್ ಆಧಾ ಘಂಟಾ ರೋಜ್” ಎಂಬ ಧ್ಯೇಯಮಂತ್ರವನ್ನೂ ನೀಡಿರುವ ಕ್ರೀಡಾ ಸಚಿವರ ಈ ವಿಡಿಯೋ ನೋಡಿ, ನಿಮಗೂ ಪ್ರತಿದಿನ ವ್ಯಾಯಾಮ ಮಾಡಲು ಉತ್ಸಾಹ ಬರಲಿ! (ಏಜೆನ್ಸೀಸ್)

    10, 12 ನೇ ತರಗತಿ ಪರೀಕ್ಷೆಗಳ ಮುಂದೂಡಿಕೆ; ನಿಮ್ಮ ಆರೋಗ್ಯ ನಮ್ಮ ಆದ್ಯತೆ ಎಂದ ಸಚಿವರು

    ಪ್ರಧಾನಿ ಮೋದಿ ವಿರುದ್ಧ ಸಿಬಿಐ ತನಿಖೆ ಕೋರಿ ಪಿಐಎಲ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts