More

    ಬೈಕ್​​ನಲ್ಲಿ ಬೆಟ್ಟ ಗುಡ್ಡಗಳಿಗೆ ರೈಡ್​​​ ಹೋಗುತ್ತೀರಾ? ಹಾಗಾದರೆ ಇಲ್ಲಿವೆ 3 ರೈಡಿಂಗ್​​​ ಟಿಪ್ಸ್!

    ಬೆಂಗಳೂರು: ಇತ್ತೀಚೆಗೆ ಬಹಳಷ್ಟು ಜನ ಸಿಟಿಯ ಟ್ರಾಫಿಕ್​​ ಜಂಜಾಟದಿಂದ ದೂರಾಗಲು ಪರಿಸರದ ಮೊರೆ ಹೋಗುತ್ತಾರೆ. ಅಂದರೆ ನದಿ, ಸಮುದ್ರ, ಬೆಟ್ಟದ ಪ್ರದೇಶಕ್ಕೆ ಬೈಕ್​​ನಲ್ಲಿ ರೈಡ್​​​ ಹೋಗಿ ಬರುತ್ತಾರೆ. ಆದರೆ ನಗರ ಪ್ರದೇಶದ ರಸ್ತೆಯಲ್ಲಿ ಬೈಕ್​​​ ಓಡಿಸಿದಂತೆ ಬೆಟ್ಟ ಗುಡ್ಡದ ಪ್ರದೇಶದಲ್ಲಿ ಓಡಿಸಿದರೆ ಅಪಘಾತಕ್ಕೆ ಖಚಿತ. ಬೆಟ್ಟ ಗುಡ್ಡದ ಪ್ರದೇಶದಲ್ಲಿ ಬೈಕ್​​ ಓಡಿಸುವುದು ಸುಲಭವಲ್ಲ. ಅದಕ್ಕೆ ಬೇರೆಯದೇ ಟೆಕ್ನಿಕ್​​ಗಳಿವೆ. ಇಲ್ಲಿ ಕೆಲವು ಟೆಕ್ನಿಕ್​​​ಗಳನ್ನು ತಿಳಿಸಲಾಗಿದೆ.

    ಬೈಕ್​​ ಅನ್ನು ಲೇನ್​​ನಲ್ಲಿ ಓಡಿಸಿ
    ಬೆಟ್ಟದ ಪ್ರದೇಶದಲ್ಲಿ ಬೈಕ್​​ ಓಡಿಸುವಾಗ ಒಂದು ಲೇನ್​​​​​ನಲ್ಲಿಯೇ ಓಡಿಸಬೇಕು. ಆಗ ನಿಮ್ಮಿಂದ ಬೇರೆ ವಾಹನಗಳಿಗೆ ಸಮಸ್ಯೆ ಆಗುವುದಿಲ್ಲ. ಮುಖ್ಯವಾಗಿ ಬೈಕನ್ನು ರಸ್ತೆಯ ತುದಿಯಲ್ಲಿ ಓಡಿಸಬಾರದು. ಏಕೆಂದರೆ ಬೇರೆ ವಾಹನಗಳು ಟರ್ನ್​ ಮಾಡುವ ಸಂದರ್ಭದಲ್ಲಿ ನಿಮ್ಮ ಬೈಕ್​​ ತಡೆಯುತ್ತದೆ.

    ಗೇರ್​​ನ ಬಗ್ಗೆ ಗಮನವಿರಲಿ
    ಬೆಟ್ಟದ ಪ್ರದೇಶಕ್ಕೆ ಬೈಕ್​​ನಲ್ಲಿ ಹೋದಾಗ ಗೇರ್​​​ನ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ. ಯಾವಾಗಲೂ ಹೆಚ್ಚು ಆರ್​​ಪಿಎಮ್​​​ (RPM) ಮತ್ತು ಕಮ್ಮಿ ಗೇರ್​​​ನಲ್ಲಿ ಓಡಿಸಬೇಕು. ಎಲ್ಲಿ ಇಂಜಿನ್​​​​ ಹೆಚ್ಚು ಶಕ್ತಿಯನ್ನು ಉತ್ಪಾದಿಸುತ್ತದೆ ಎಂದು ಗುರುತಿಸಬೇಕು. ತಪ್ಪು ಗೇರ್​ನಲ್ಲಿ ಚಲಿಸುವುದರಿಂದ ಬೈಕ್ ಹಠಾತ್ತನೆ ನಿಲ್ಲುವ ಸಾಧ್ಯತೆ ಇರುತ್ತದೆ.

    ಸರಿಯಾದ ಸಮಯಕ್ಕೆ ಬ್ರೇಕ್​​ ಹಾಕಬೇಕು
    ಬೈಕನ್ನು ಬೆಟ್ಟದ ಪ್ರದೇಶ ಅಥವಾ ಎಲ್ಲಿಯಾದರೂ ತೆಗೆದುಕೊಂಡು ಹೋದಾಗ ಬ್ರೇಕ್‌ಗಳು ಅತ್ಯಂತ ಮುಖ್ಯ. ಈ ಕಾರಣದಿಂದ ಸುರಕ್ಷಿತವಾಗಿ ಚಾಲನೆ ಮಾಡಬಹುದು. ಇತರರು ಕೂಡ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಬೆಟ್ಟವನ್ನು ಹತ್ತುವಾಗ ಮುಂಭಾಗದ ಬ್ರೇಕ್​​ಗಿಂತ ಹಿಂದಿನ ಬ್ರೇಕ್ ಅನ್ನು ಹೆಚ್ಚು ಬಳಸಬೇಕು. ಇಳಿಯುವಾಗ ಹಿಂದಿನ ಬ್ರೇಕ್‌ಗಿಂತ ಮುಂಭಾಗದ ಬ್ರೇಕ್ ಅನ್ನು ಹೆಚ್ಚು ಬಳಸಬೇಕು. (ಏಜೆನ್ಸೀಸ್​​)

    ಭಾರತಕ್ಕೆ ಜಮ್ಮು-ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದ್ದು ಜಾಕ್​ಪಾಟ್ ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts