More

    VIDEO| 20 ಮೀ.​ ನಡಿಗೆಯಲ್ಲಿ ವಿಶ್ವ ದಾಖಲೆ ಮಾಡಿದ ಕಾಲಿಲ್ಲದ ಯುವಕ!

    ನ್ಯೂಯಾರ್ಕ್​: ಅಂಗವಿಕಲತೆಯು ಸಾಧನೆಯ ಹಾದಿಯಲ್ಲಿ ಅಡಚಣೆಯಾಗುವುದಿಲ್ಲ ಎಂದು ಇತ್ತೀಚೆಗಷ್ಟೇ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್​ ಕ್ರೀಡಾಪಟುಗಳು ಸಾಬೀತುಪಡಿಸಿದ್ದಾರೆ. ಇದೀಗ ಮತ್ತೊಬ್ಬ ಪ್ಯಾರಾ ಅಥ್ಲೀಟ್​​, ಕೈಗಳ ಮೇಲೆ 20 ಮೀಟರ್​ ನಡಿಗೆ ಮಾಡಿ ಗಿನ್ನೆಸ್​ ದಾಖಲೆ ರಚಿಸಿದ್ದಾನೆ.

    23 ವರ್ಷ ವಯಸ್ಸಿನ ವಿಶೇಷ ಚೇತನ ಜಿಯಾನ್​ ಕ್ಲಾರ್ಕ್​​ 20 ಮೀಟರ್​ಗಳ ದೂರವನ್ನು 4.78 ಸೆಕೆಂಡುಗಳಲ್ಲಿ ತನ್ನ ಕೈಗಳ ಮೇಲೆ ನಡೆದು ಫಾಸ್ಟೆಸ್ಟ್​ 20 ಮೀಟರ್​ ಆನ್​ ಹ್ಯಾಂಡ್ಸ್​ನ ವಿಶ್ವ ದಾಖಲೆ ಮಾಡಿದ್ದಾನೆ. ಅಮೇರಿಕದ ಅಥ್ಲೀಟ್​ ಆಗಿರುವ ಕ್ಲಾರ್ಕ್​​, ಬೆನ್ನುಮೂಳೆಯ ಅಪರೂಪದ ಸಮಸ್ಯೆಯಿಂದಾಗಿ ಕಾಲುಗಳಿಲ್ಲದೆ ಜನಿಸಿದ್ದರು ಎನ್ನಲಾಗಿದೆ.

    ಉದ್ಯಮಿ, ನಟ, ಲೇಖಕ ಹಾಗೂ ಮೋಟಿವೇಷನಲ್ ಸ್ಪೀಕರ್ ಕೂಡ ಆಗಿರುವ ಜಿಯಾನ್​ ಕ್ಲಾರ್ಕ್​, 2021 ರ ಫೆಬ್ರವರಿ 15 ಕ್ಕೆ ಈ ದಾಖಲೆ ಸೃಷ್ಟಿಸಿದ್ದಾನೆ. ಅಮೆರಿಕದ ಓಹಿಯೋನ ಮಸ್ಸಿಲ್ಲನ್​ನಲ್ಲಿ ತಾವು ಓದಿದ ಶಾಲೆಯ ಜಿಮ್​ನಲ್ಲಿ ಈ ಸಾಧನೆ ಕೈಗೊಂಡಿದ್ದಾನೆ ಎಂದು ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​ನ ಪ್ರಕಟಣೆ ತಿಳಿಸಿದೆ. (ಏಜೆನ್ಸೀಸ್)

    ನೆನಪಿನಶಕ್ತಿ ಹೆಚ್ಚಿಸಲು, ಮನಸ್ಸನ್ನು ಶಾಂತವಾಗಿಸಲು ‘ಯೋಗಮುದ್ರಾಸನ’ ಮಾಡಿ! ಮುಖದ ಕಾಂತಿಯೂ ಹೆಚ್ಚುತ್ತದೆ!

    ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಅಮೆರಿಕದಲ್ಲಿ STEM ಉನ್ನತ ವ್ಯಾಸಂಗಕ್ಕೆ ‘ಖ್ವಾಡ್​ ಫೆಲೋಶಿಪ್​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts