More

    ನೆನಪಿನಶಕ್ತಿ ಹೆಚ್ಚಿಸಲು, ಮನಸ್ಸನ್ನು ಶಾಂತವಾಗಿಸಲು ‘ಯೋಗಮುದ್ರಾಸನ’ ಮಾಡಿ! ಮುಖದ ಕಾಂತಿಯೂ ಹೆಚ್ಚುತ್ತದೆ!

    ನೆನಪಿನ ಶಕ್ತಿ ಮತ್ತು ಮುಖದ ಕಾಂತಿ ಹೆಚ್ಚಿಸಲು ಉಪಯುಕ್ತವಾದುದು, ‘ಯೋಗಮುದ್ರಾಸನ’. ಇದೊಂದು ವಿಶ್ರಾಂತಿ ಪಡೆಯುವ ವಿಧಾನವಾಗಿದ್ದು, ಸರಳ ಆಸನವಾಗಿದೆ.

    ಪ್ರಯೋಜನಗಳು: ಈ ಆಸನ ಮಾಡುವುದರಿಂದ ಶಿರಸ್ಸಿಗೆ ರಕ್ತಸಂಚಲನ ಹೆಚ್ಚಿ, ನರಮಂಡಲ ಸಚೇತನಗೊಳ್ಳುತ್ತದೆ. ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಮುಖದ ಕಾಂತಿ ಹೆಚ್ಚುತ್ತದೆ. ಮಲಬದ್ಧತೆ ಮತ್ತು ಹೊಟ್ಟೆಯ ಗ್ಯಾಸ್​, ಗ್ಯಾಸ್ಟ್ರಿಕ್ ಸಮಸ್ಯೆಗಳ ನಿಯಂತ್ರಣಕ್ಕೆ ಕೂಡ ಸಹಕಾರಿ. ಯೋಗಮುದ್ರಾಸನವನ್ನು ನಿತ್ಯ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ, ಚಿತ್ತಶುದ್ಧಿಯಾಗುತ್ತದೆ.

    ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರುಪಾಲಾದ ಯುವಕ

    ಅಭ್ಯಾಸ ಕ್ರಮ: ಪ್ರಥಮವಾಗಿ, ಕಾರ್ಪೆಟ್​ ಮೇಲೆ ವಜ್ರಾಸನದ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಕೈಗಳನ್ನು ಎತ್ತಿ ಶಿಸ್ತುಬದ್ಧವಾಗಿ ಬೆನ್ನಿನ ಹಿಂದಕ್ಕೆ ತಂದು, ಒಂದು ಕೈಯಿಂದ ಇನ್ನೊಂದು ಕೈನ ಮಣಿಕಟ್ಟನ್ನು ಹಿಡಿದುಕೊಳ್ಳಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಒಮ್ಮೆ ಹಿಂದಕ್ಕೆ ಬಾಗಿ, ಉಸಿರನ್ನು ಬಿಡುತ್ತಾ ದೇಹವನ್ನು ಮುಂದಕ್ಕೆ ಬಗ್ಗಿಸಬೇಕು. ಹಣೆಯನ್ನು ನೆಲಕ್ಕೆ ಸ್ಪರ್ಶಿಸಬೇಕು. ಈ ಭಂಗಿಯಲ್ಲಿ ಸ್ವಲ್ಪ ಹೊತ್ತು ಸಮ ಉಸಿರಾಟ ನಡೆಸುತ್ತಿರಬೇಕು. ಆಮೇಲೆ ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಮೇಲಕ್ಕೆ ಬರಬೇಕು. ಕೈಗಳನ್ನು ಬಿಡಿಸಿಕೊಂಡು ಮುಂದಕ್ಕೆ ತರಬೇಕು. ನಂತರ ಕಾಲುಗಳನ್ನು ವಿಸ್ತರಿಸಿ ವಿಶ್ರಾಂತಿ ಪಡೆಯಬೇಕು.

    ಒಮ್ಮೆ ಅಭ್ಯಾಸವಾದರೆ ಮತ್ತೆ ಎರಡು-ಮೂರು ಬಾರಿ ಮಾಡಬಹುದು. ಯೋಗಾಭ್ಯಾಸ ಮಾಡಿದ ನಂತರ ಕೊನೆಯಲ್ಲಿ ಶಾಂತಿ ಮಂತ್ರ ಹೇಳಿ ಈ ಆಸನವನ್ನು ಅಭ್ಯಾಸ ಮಾಡುವುದು ಪ್ರತೀತಿ. ತೀರಾ ಸೊಂಟ ನೋವು, ಮಂಡಿ ನೋವು ಇರುವವರು ಹಾಗೂ ಹೃದಯದ ಖಾಯಿಲೆ, ಅಧಿಕ ರಕ್ತದೊತ್ತಡ ಇರುವವರು ಈ ಆಸನವನ್ನು ಮಾಡಬಾರದು.

    ಅಚ್ಚರಿಯಾಗುವಂತೆ ಹೊಟ್ಟೆಯ ಬೊಜ್ಜು ಕರಗಿಸುತ್ತದೆ, ಈ ಯೋಗಾಸನ!

    ಶಾಲೆ-ಕಾಲೇಜು, ಚಿತ್ರಮಂದಿರಗಳಲ್ಲಿ 100% ಭರ್ತಿ ಅವಕಾಶ; ಗಾಂಧಿ ಜಯಂತಿ ನಂತರ ಪಬ್​ ಓಪನ್​! ಯಾವಾಗ? ಏನೇನು?

    ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಅಮೆರಿಕದಲ್ಲಿ STEM ಉನ್ನತ ವ್ಯಾಸಂಗಕ್ಕೆ ‘ಖ್ವಾಡ್​ ಫೆಲೋಶಿಪ್​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts