More

    VIDEO | ಖಾರದ ಮೆಣಸಿನಕಾಯಿ ತಿನ್ನುವುದೇ ಇವನ ಧರ್ಮ!

    ಟೊರೊಂಟೊ: ಊಟಕ್ಕೆ ರುಚಿ ಬರಲಿ ಅಂತ ಮೆಣಸಿನಕಾಯಿ ಒಗ್ಗರಣೆ ಹಾಕ್ತೀವಿ. ಅದನ್ನು ಅಪ್ಪಿತಪ್ಪಿ ತಿಂದುಬಿಟ್ಟರೆ ಚೆನ್ನಾಗಿ ನೀರು ಕುಡಿಯೋತನಕ ಪಾಡು ಪಡ್ತೀವಿ. ಅಂಥದ್ರಲ್ಲಿ ಇಲ್ಲೊಬ್ಬ ಖಾರದ ಮೆಣಸಿನಕಾಯಿಗಳನ್ನೇ ಹುಡುಕಿಕೊಂಡು ಹೋಗಿ ತಿನ್ನುತ್ತಾನೆ… ಅದೂ ತಟ್ಟೆ ತುಂಬಾ! ಹೀಗೆ ಮೆಣಸಿನಕಾಯಿ ತಿಂದೇ ಗಿನ್ನೆಸ್ ದಾಖಲೆಗಳನ್ನು ಮಾಡುತ್ತಿದ್ದಾನೆ, ಈ ಭೂಪ!

    ಕೆನಡಾದ ಮೈಕ್ ಜ್ಯಾಕ್ ಎಂಬುವ ಮೆಣಸಿನಕಾಯಿ ತಿನ್ನೋದಕ್ಕೆ ಪ್ರಸಿದ್ಧನಾಗಿದ್ದಾನೆ. ಈಗಾಗಲೇ ಹಲವಾರು ಮೆಣಸಿನಕಾಯಿ ತಿನ್ನುವ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಈತ ಅದರಲ್ಲೇ ಮೂರು ಗಿನ್ನಿಸ್ ದಾಖಲೆಗಳನ್ನೂ ಮಾಡಿದ್ದ. ಆ ದಾಖಲೆಗಳೆಂದರೆ…. “ಎರಡು ನಿಮಿಷದಲ್ಲಿ ಅತಿಹೆಚ್ಚು ಭುಟ್ ಜೊಲೊಕಿಯಾ ವೆರೈಟಿಯ ಮೆಣಸಿನಕಾಯಿ ತಿಂದ ದಾಖಲೆ – 246 ಗ್ರಾಂ” (ಕಾಲು ಕೆಜಿ); “ಒಂದು ನಿಮಿಷದಲ್ಲಿ ಅತಿ ಹೆಚ್ಚು ಭುಟ್ ಜೊಲೊಕಿಯಾ ಮೆಣಸಿನಕಾಯಿ ತಿಂದ ದಾಖಲೆ – 97 ಗ್ರಾಂನಷ್ಟು” ಮತ್ತು “ಅತಿವೇಗವಾಗಿ ಮೂರು ಭುಟ್ ಜೊಲೊಕಿಯಾ ಮೆಣಸಿನಕಾಯಿಗಳನ್ನು ತಿಂದ ದಾಖಲೆ – 9.75 ಸೆಕೆಂಡುಗಳಲ್ಲಿ”.

    ಇದನ್ನೂ ಓದಿ: 10ನೇ ತರಗತಿ ಪರೀಕ್ಷೆ ಬರೆಯಲಿದ್ದಾನೆ 11 ವರ್ಷದ ಪೋರ!

    ಇತ್ತೀಚೆಗೆ ಅವನು ನಾಲ್ಕನೇ ದಾಖಲೆ ಮಾಡಿದ್ದಾನೆ – ಅತಿಕಡಿಮೆ ಸಮಯದಲ್ಲಿ ಮೂರು ಕರೊಲೀನಾ ರೀಪರ್ ವೆರೈಟಿಯ ಮೆಣಸಿನಕಾಯಿಗಳನ್ನು ತಿನ್ನುವ ದಾಖಲೆ. ಕರೊಲೀನಾ ರೀಪರ್ ವಿಧದ ಮೆಣಸಿನಕಾಯಿಯನ್ನು ಜಗತ್ತಿನ ಅತ್ಯಂತ ಖಾರದ ಮೆಣಸಿನಕಾಯಿ ಎಂದೇ ಹೇಳುತ್ತಾರೆ. ತಲಾ 5 ಗ್ರಾಂ ತೂಕವಿದ್ದ ಮೂರು ಕೆರೊಲೀನಾ ರೀಪರ್​ಗಳನ್ನು 9.72 ಸೆಕೆಂಡುಗಳಲ್ಲಿ ಮೈಕ್ ತಿಂದುಮುಗಿಸುವ ಯೂಟ್ಯೂಬ್ ವೀಡಿಯೋ ಇಲ್ಲಿದೆ ನೋಡಿ. ಆಶ್ಚರ್ಯವೆಂದರೆ ತಿಂದ ಮೇಲೆ ಅವನು ನೀರೂ ಕುಡಿಯುವುದಿಲ್ಲ!

    ಮೆಣಸಿನಕಾಯಿ ತಿನ್ನುವುದನ್ನೇ ಕಸುಬು ಮಾಡಿಕೊಂಡಿರುವ ಮೈಕ್​ಗೆ ಹೇಳೋರು ಕೇಳೋರು ಯಾರೂ ಇಲ್ಲ ಅನ್ಕೋಬೇಡಿ. ಮೈಕ್, ಕೆನಡಾದ ಓಂಟರಿಯೊ ಪ್ರಾಂತ್ಯದಲ್ಲಿರುವ ತನ್ನ ಮನೆಯಲ್ಲಿ ತನ್ನ ಹೆಂಡತಿಯ ಮುಂದೆಯೇ ಈ ರೆಕಾರ್ಡ್ ಮಾಡಿದ್ದಾನೆ. ಈ ದಾಖಲೆಗೆ ಅವನ ಹೆಂಡತಿಯೇ ಪ್ರತ್ಯಕ್ಷದರ್ಶಿ ಮತ್ತು ಟೈಮ್​ಕೀಪರ್​ ಆಗಿದ್ದಾಳೆ.

    ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್​ ಸಂಸ್ಥೆ ಇದನ್ನು “ಆರು ವರ್ಷಗಳ ನಂತರ ಮುರಿದಿರುವ ಅತ್ಯಂತ ಸ್ಪೈಸಿ ರೆಕಾರ್ಡ್” ಎಂದು ಬಣ್ಣಿಸಿದೆ. ಆದರೆ ಮೈಕ್​ಗೆ ಇಷ್ಟಕ್ಕೇ ಹೊಟ್ಟೆ ತುಂಬಿಲ್ಲ. ಇನ್ನೂ ನಾಲ್ಕು ಮೆಣಸಿನಕಾಯಿ ತಿನ್ನುವ ದಾಖಲೆಗಳನ್ನು ಮಾಡುವ ಹಂಬಲ ಇದೆ ಎಂದಿದ್ದಾನೆ.(ಏಜೆನ್ಸೀಸ್)

    VIDEO | ಲ್ಯಾಂಡ್ ಕ್ರೂಸರ್ ಚಲಾಯಿಸಿದ ಐದು ವರ್ಷದ ಬಾಲಕ; ಕಾಲೆಟುಕದಿದ್ದರೂ ಕೈಗೆ ಸ್ಟೇರಿಂಗ್​!

    ಅಮೆರಿಕದಲ್ಲಿ ನೆಲಕ್ಕುರುಳಿತು ಗಾಂಧಿ ಪ್ರತಿಮೆ: ಮುಖ, ಪಾದ ತುಂಡರಿಸಿದ ದುಷ್ಕರ್ಮಿಗಳು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts