More

    VIDEO| ಮಾಸ್ಕ್ ಧರಿಸದ ಕಾರು ಚಾಲಕ ಟ್ರಾಫಿಕ್ ಪೊಲೀಸ್​ನನ್ನೇ ಬಾನೆಟ್​ ಮೇಲೆ ಹೊತ್ತೊಯ್ದ!

    ಪುಣೆ: ಕರ್ತವ್ಯ ನಿರತರಾಗಿದ್ದ ಸಂಚಾರಿ ಪೊಲೀಸ್ ಒಬ್ಬರು ಮಾಸ್ಕ್ ಧರಿಸದ ಕಾರು ಚಾಲಕನನ್ನು ತಡೆಯತ್ನಿಸಿದ ವೇಳೆ, ಆತ ಸಂಚಾರಿ ಪೊಲೀಸ್​ನನ್ನೇ ಗುದ್ದಿ ಬಾನೆಟ್​ ಮೇಲೆ ಹೊತ್ತೊಯ್ದ ಘಟನೆ ಪಿಂಪ್ರಿ ಚಿಂಚ್ವಾಡದಿಂದ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿದೆ.

    ಮಾಸ್ಕ್ ಧರಿಸದೇ ಪ್ರಯಾಣಿಸುತ್ತಿರುವವರನ್ನು ಗುರುತಿಸಿ ದಂಡ ವಿಧಿಸುವ ಕೆಲಸವನ್ನು ಸಂಚಾರಿ ಪೊಲೀಸ್ ಮಾಡುತ್ತಿದ್ದರು. ಇದೇ ವೇಳೆ, ಈ ಕಾರಿನಲ್ಲಿ ಬಂದವರು ಮಾಸ್ಕ್ ಧರಿಸದೇ ಇರುವುದನ್ನು ಗಮನಿಸಿ ನಿಲ್ಲಿಸುವುದಕ್ಕಾಗಿ ಕಾರಿನ ಎದುರು ಹೋಗಿದ್ದಾರೆ. ಕಾರುಚಾಲಕ ಸಂಚಾರಿ ಪೊಲೀಸ್​ಗೆ ಗುದ್ದಿದ್ದು, ಅವರು ಕಾರಿನ ಬಾನೆಟ್ ಮೇಲೆ ಬಿದ್ದರೂ ಚಾಲಕ ನಿಲ್ಲಿಸದೇ ಹಾಗೆಯೇ ಅವರನ್ನು ಹೊತ್ತುಕೊಂಡು ಮುಂದಿನ ಸಿಗ್ನಲ್ ತನಕ ಕಾರು ಚಲಾಯಿಸಿದ್ದ! ಕೆಲವು ಬೈಕ್ ಸವಾರರು ಕಾರನ್ನು ನಿಲ್ಲಿಸುವ ಪ್ರಯತ್ನ ಮಾಡಿರುವ ದೃಶ್ಯವೂ ವಿಡಿಯೋದಲ್ಲಿದೆ.

    ಇದನ್ನೂ ಓದಿ: ವಿವೇಕಧಾರೆ ಅಂಕಣ: ವಿಶ್ವವಿದ್ಯಾಲಯ ವಿದ್ಯೆಯ ಆಲಯವೋ? ಲಯವೋ?

    ಗಾಯಗೊಂಡ ಸಂಚಾರಿ ಪೊಲೀಸ್ ಹೆಸರು ಅಬಾಸಾಹೇಬ್​ ಸಾವಂತ್​. ಆರೋಪಿಯ ಹೆಸರು ಯುವರಾಜ್​ ಹನುವತೆ (49). ಈ ಸಂಬಂಧ ಪಿಂಪ್ರಿ ಚಿಂಚ್ವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಏಜೆನ್ಸೀಸ್)

    ಬಾದಾಮಿ ಪಟ್ಟಣದಲ್ಲಿ ಭಾರಿ ಅಗ್ನಿದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts