ಗೌಹಾಟಿ : ಟೋಕಿಯೋ ಒಲಂಪಿಕ್ಸ್ನಲ್ಲಿ ಬಾಕ್ಸಿಂಗ್ ವುಮೆನ್ಸ್ ವೆಲ್ಟರ್ವೈಟ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವವರು ಅಸ್ಸಾಂನ ಲವ್ಲೀನಾ ಬೊರ್ಗೊಹೈನ್. ಇವರಿಗೆ ಬೆಂಬಲ ನೀಡುವುದಕ್ಕಾಗಿ ರಾಜ್ಯದ ಸಿಎಂ ಹಿಮಂತ ಬಿಸ್ವ ಸರ್ಮ ನೇತೃತ್ವದಲ್ಲಿ ಗೌಹಾಟಿಯಲ್ಲಿಂದು ಸೈಕಲ್ ಜಾಥಾ ನಡೆಯುತ್ತಿದೆ.
“ರಾಜ್ಯದ ಮಗಳನ್ನು ಬೆಂಬಲಿಸಲು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡರ ನಾಯಕರೂ ಈ 7 ಕಿಲೋಮೀಟರ್ ಸೈಕಲ್ ರಾಲಿ ನಡೆಸಲು ಒಂದಾಗಿದ್ದಾರೆ” ಎಂದು ಸಿಎಂ ಸರ್ಮ ಹೇಳಿದ್ದಾರೆ. ಲವ್ಲೀನಾ ಅವರ ಚಿತ್ರವುಳ್ಳ ಅಂಗಿಗಳನ್ನು ತೊಟ್ಟು ರಾಜಕೀಯ ಮುಖಂಡರು ಸೈಕಲ್ ಸವಾರಿ ನಡೆಸಿದ್ದಾರೆ.
#WATCH | Assam CM Himanta Biswa Sarma participates in a cycle rally to support boxer Lovlina Borgohain who will be representing India at the upcoming Tokyo Olympics. "Both ruling party & Opposition have come together for this 7 km cycle rally to support their daughter," he says pic.twitter.com/aJBgzDDgDz
— ANI (@ANI) July 21, 2021
ಹವ್ಯಾಸಿ ಬಾಕ್ಸರ್ ಆಗಿರುವ 23 ವರ್ಷ ವಯಸ್ಸಿನ ಲವ್ಲೀನಾ ಅವರು ಅಸ್ಸಾಂನ ಗೊಲಾಘಟ್ ಮೂಲದವರು. ಬಾಕ್ಸಿಂಗ್ನಲ್ಲಿ ಉನ್ನತ ಸಾಧನೆಗಾಗಿ ಅವರಿಗೆ ಪ್ರತಿಷ್ಠಿತ ಅರ್ಜನ ಪ್ರಶಸ್ತಿ ಸಂದಿದೆ. 2018 ಮತ್ತು 2019 ನೇ ಸಾಲುಗಳ ಎಐಬಿಎ ವುಮೆನ್ಸ್ ವರ್ಲ್ಡ್ ಬಾಕ್ಸಿಂಗ್ ಚ್ಯಾಂಪಿನ್ಶಿಪ್ಸ್ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದಾರೆ. (ಏಜೆನ್ಸೀಸ್)