More

    ವಿಶ್ವ ಕ್ವಾಲಿಫೈಯರ್ ಟೂರ್ನಿಗೆ ಭಾರತ ತಂಡ ಪ್ರಕಟ:ಒಲಿಂಪಿಕ್ಸ್ ಖೋಟಾ ಪಡೆಯಲು ಕೊನೇ ಅವಕಾಶ

    ನವದೆಹಲಿ: ಪ್ಯಾರಿಸ್ ಆತಿಥ್ಯದಲ್ಲಿ ಜುಲೈನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಜಾಗತಿಕ ಕ್ರೀಡಾ ಹಬ್ಬಕ್ಕೆ ಅರ್ಹತೆ ಪಡೆಯಲು ಬಾಕ್ಸರ್‌ಗಳಿಗೆ ಕೊನೇ ಅವಕಾಶ ಎನಿಸಿರುವ 2ನೇ ವಿಶ್ವ ಕ್ವಾಲಿೈಯರ್ ಬಾಕ್ಸಿಂಗ್ ಕೂಟಕ್ಕೆ ಶನಿವಾರ ಭಾರತ ತಂಡ ಪ್ರಕಟ ಮಾಡಲಾಗಿದೆ. ಮೇ 25 ರಿಂದ ಜೂನ್ 2 ರವರೆಗೆ ಬ್ಯಾಂಕಾಕ್‌ನಲ್ಲಿ ಟೂರ್ನಿ ನಡೆಯಲಿದೆ.

    2023ರ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಬಾಕ್ಸರ್ ಅಮಿತ್ ಪಾಂಗಲ್ ಭಾರತ ತಂಡಕ್ಕೆ ಮರಳಿದ್ದು, ಕಂಚಿನ ಪದಕ ವಿಜೇತ ದೀಪಕ್ ಬೋರಿಯ (51 ಕೆಜಿ), ಮೊಹವದ್ ಹುಸ್ಸಮುದೀನ್ (57 ಕೆಜಿ), ಆರು ಬಾರಿ ಏಷ್ಯನ್ ಚಾಂಪಿಯನ್ ಪದಕ ವಿಜೇತ ಶಿವ ಥಾಪ ಸಿಂಗ್ (63.5 ಕೆಜಿ), ರಾಷ್ಟ್ರೀಯ ಚಾಂಪಿಯನ್ ಲಕ್ಷ್ಯ ಚಾಹರ್ (80ಕೆಜಿ) ಹಾಗೂ ಕಾಮನ್ವೆಲ್ತ್ ಗೇಮ್ಸ್ ಕಂಚು ವಿಜೇತ ಜೈಸ್ಮಿನ್ ಲಂಬೋರಿಯ (60 ಕೆಜಿ) ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಇದುವರೆಗೆ ಭಾರತ ಪುರುಷ ಬಾಕ್ಸರ್‌ಗಳು ಒಲಿಂಪಿಕ್ಸ್ ಅರ್ಹತೆ ಪಡೆಯುವಲ್ಲಿ ವಿಲರಾಗಿದ್ದು, ಟೋಕಿಯೊದಲ್ಲಿ ಕಳೆದ ತಿಂಗಳು ನಡೆದ 2ನೇ ವಿಶ್ವ ಕ್ವಾಲಿೈಯರ್ ಟೂರ್ನಿಯಲ್ಲಿ ಭಾಗವಹಿಸಿದ್ದ ಭಾರತ 9 ಬಾಕ್ಸರ್‌ಗಳು ಒಲಿಂಪಿಕ್ಸ್ ಖೋಟಾ ಪಡೆಯುವಲ್ಲಿ ವಿಲರಾಗಿದ್ದರು. ಮಹಿಳಾ ವಿಭಾಗದಲ್ಲಿ ನಾಲ್ವರು ಪ್ಯಾರಿಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

    ತಂಡ: ಪುರುಷರ ವಿಭಾಗ: ಅಮಿತ್ ಪಾಂಗಲ್ (51 ಕೆಜಿ), ಸಚಿನ್ ಸಿವಾ (57 ಕೆಜಿ), ಅಭಿನಾಶ್ ಜಾಮವಾಲ್ (63.5 ಕೆಜಿ), ನಿಶಾಂತ್ ದೇವ್ (71 ಕೆಜಿ), ಅಭಿಮನ್ಯು ಲೋರಾ (80 ಕೆಜಿ), ಸಂಜೀತ್ (92 ಕೆಜಿ), ನರೀಂದರ್ ಬೆರ್ವಾಲ್ (92+ ಕೆಜಿ), ಮಹಿಳಾ ವಿಭಾಗ: ಅಂಕುಶೀತಾ ಬೋರಾ (60 ಕೆಜಿ), ಆರುಂಧತಿ ಚೌಧರಿ (66 ಕೆಜಿ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts