More

    VIDEO| ನದಿಯಲ್ಲಿ ಮೀನಿಗಾಗಿ ಗಾಳ ಹಾಕಿದ ವ್ಯಕ್ತಿಗೆ ಕಾದಿತ್ತು ಬಿಗ್​ ಶಾಕ್​..!

    ಪರ್ತ್​: ಮೀನಿಗಾಗಿ ಗಾಳ ಹಾಕಿ ಕಾಯುತ್ತಿದ್ದ ಆಸ್ಟ್ರೇಲಿಯಾ ಮೂಲದ ವ್ಯಕ್ತಿಯೊಬ್ಬನಿಗೆ ಕೊನೆಯಲ್ಲಿ ಗಾಳಕ್ಕೆ ಸಿಲುಕಿದ್ದನ್ನು ಮೇಲೆತ್ತುವಾಗ ಸರ್ಪ್ರೈಸ್​ ಒಂದು ಕಾದಿತ್ತು.

    ಹವ್ಯಾಸಿ ಮೀನುಗಾರನ ಗಾಳಕ್ಕೆ ಸಿಲುಕಿದ್ದು ಮೀನಲ್ಲ. ಬದಲಾಗಿ ಭಾರಿ ಗಾತ್ರದ ಅಪಾಯಕಾರಿ ಮೊಸಳೆಯೊಂದು ಗಾಳಕ್ಕೆ ಸಿಲುಕಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ರೋಡ್​ ಆ್ಯಂಡ್​ ರಿಫ್ಲ್​ ಟ್ಯಾಕಲ್​ವರ್ಲ್ಡ್​​ ಕ್ಯಾಥರಿನ್​ (Rod and Rifle Tackleworld Katherine) ಫೇಸ್​ಬುಕ್​ ಪೇಜ್​ನಲ್ಲಿ ಅಪ್​​ಲೋಡ್​ ಮಾಡಲಾಗಿದ್ದು, ಭಾರಿ ವೈರಲ್​ ಆಗಿದೆ.

    ವಿಡಿಯೋದಲ್ಲಿ ಏನಿದೆ?: ಹವ್ಯಾಸಿ ಮೀನುಗಾರ ಮೀನಿಗಾಗಿ ಗಾಳ ಹಾಕಿರುವಾಗ ಮೀನು ಸಿಲುಕಿತೇನೋ ಎಂದು ಗಾಳವನ್ನು ಮೇಲೆತ್ತಲು ಪ್ರಯತ್ನಿಸುತ್ತಾರೆ. ಆದರೆ, ಅಷ್ಟು ಸುಲಭವಾಗಿ ಮೇಲೆ ಬರದಿದ್ದಾಗ ಭಾರಿ ಮೀನು ಸಿಕ್ಕಿಕೊಂಡಿಬೇಕೆಂದು ಭಾಸವಾಗುತ್ತದೆ. ಆದರೆ, ನಿಧಾನವಾಗಿ ನೀರಿನ ಮೇಲೆ ಬರುವ ಮೊಸಳೆಯ ಬಾಯಿಗೆ ಗಾಳ ಸಿಲುಕಿಕೊಂಡಿರುತ್ತದೆ. ತಕ್ಷಣ ನೀರಿನ ಒಳಗಡೆ ಹೋಗುವ ಮೊಸಳೆಯ ಬಾಯಿಂದ ಗಾಳವನ್ನು ಬಿಡಿಸಿಕೊಳ್ಳಲು ಮೀನುಗಾರ ಯತ್ನಿಸುತ್ತಾನೆ. ಸಾಕಷ್ಟು ಪ್ರಯತ್ನಗಳ ನಡುವೆ ಕೊನೆಯಲ್ಲಿ ಮೊಸಳೆ ಬಾಯಿಂದ ಗಾಳ ಪ್ರತ್ಯೇಕವಾಗುತ್ತದೆ.

    ಇದನ್ನೂ ಓದಿ: ಈ ರಾಶಿಯವರು ವಿವಾದವೊಂದರಲ್ಲಿ ಸಿಕ್ಕಿ ಒದ್ದಾಡುವ ಸಂಭವ ಇದೆ. ಆದರೂ ಪರಿಹಾರ ಇಲ್ಲಿದೆ..

    Here we were just trolling along with a classic 200 and this fella decides he wants to have a crack at it. Managed to get the lure back! Although it doesn’t track as straight as it use to.Rod – Samaki XT scale 6’ 12-20lb Reel – shimano Calcutta 250 TE DC with 50lb fins braid and 80lb Schneider leader.

    Posted by Rod & Rifle TackleWorld Katherine on Thursday, October 15, 2020

    ಘಟನೆ ಬಗ್ಗೆ ಮಾಧ್ಯಮವೊಂದಲ್ಲಿ ಮಾತನಾಡಿರುವ ಮೀನುಗಾರ ಅಕ್ಟೋಬರ್​ 12ರಂದು ವಿಡಿಯೋ ಸೆರೆಹಿಡಿಯಲಾಯಿತು. ಸ್ನೇಹಿತರೊಂದಿಗೆ ವಿಕ್ಟೋರಿಯಾ ನದಿಯಲ್ಲಿ ಮೀನು ಹಿಡಿಯಲು ಹೋದಾಗ ಈ ಘಟನೆ ನಡೆಯಿತು. ಗಾಳಕ್ಕೆ ಆಕಸ್ಮಿಕವಾಗಿ ಮೊಸಳೆ ಸಿಲುಕಿತು. ಬಳಿಕ ಅದನ್ನು ತಿನ್ನಲು ಸಾಕಷ್ಟು ಪ್ರಯತ್ನವನ್ನು ಮಾಡಿದೆ. ಆದರೆ, ಸಾಧ್ಯವಾಗಲಿಲ್ಲ ಎಂದಿದ್ದಾರೆ.

    ಸಿಕ್ಕಾಪಟ್ಟೆ ವೈರಲ್​
    ವಿಡಿಯೋವನ್ನು ಕೇವಲ 5 ದಿನಗಳ ಹಿಂದಷ್ಟೇ ಅಪ್​ಲೋಡ್​ ಮಾಡಲಾಗಿದ್ದು, ಈವರೆಗೆ ಬರೋಬ್ಬರಿ 1.6 ಮಿಲಿಯನ್ಸ್​ ಮಂದಿಗೂ ಅಧಿಕ ವೀಕ್ಷಣೆ ಮಾಡಿದ್ದಾರೆ. 5 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ಸ್​ ಮಾಡಿದ್ದು, 4 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್​ ಮಾಡಿದ್ದಾರೆ. 12 ಸಾವಿರಕ್ಕೂ ಹೆಚ್ಚು ಮಂದಿ ಶೇರ್​ ಮಾಡಿಕೊಂಡಿದ್ದಾರೆ. ಸದ್ಯ ಜಾಲತಾಣದಲ್ಲಿ ವಿಡಿಯೋ ಭಾರಿ ಸಂಚಲನ ಮೂಡಿಸಿದೆ. (ಏಜೆನ್ಸೀಸ್​)

    Web Exclusive|ಆರೋಗ್ಯ ಇಲಾಖೆಗೆ ಕೈಕೊಟ್ಟ 937 ಅಧಿಕಾರಿ, ನೌಕರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts