More

    ಕತ್ರೀನಾ-ವಿಕಿ ಮದುವೆ ಯಾವತ್ತು? ಎಲ್ಲಿ? ವೆಡ್ಡಿಂಗ್​​​ ಸೂಟ್​ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

    ಮುಂಬೈ: ಬಾಲಿವುಡ್​ ಹಾಟ್​ ಕಪಲ್​ ಕತ್ರೀನಾ ಕೈಫ್​ ಮತ್ತು ವಿಕಿ ಕೌಶಲ್​ರ ಮದುವೆ ರಾಜಸ್ಥಾನದ ಸವಾಯಿ ಮಾಧೋಪುರ್​ನ ರೆಸಾರ್ಟೊಂದರಲ್ಲಿ ಡಿಸೆಂಬರ್ 9ಕ್ಕೆ ನಡೆಯಲಿದೆ. ವಧು-ವರರು ತಮ್ಮ ಕುಟುಂಬಸಹಿತರಾಗಿ ವಿವಾಹ ಸ್ಥಳವಾದ ಸಿಕ್ಸ್​​ ಸೆನ್ಸಸ್​ ಫೋರ್ಟ್​​ ಬರ್ವಾರ ರೆಸಾರ್ಟನ್ನು ಡಿಸೆಂಬರ್ 6 ರಂದು ತಲುಪಲಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಸಿಕ್ಸ್​ ಸೆನ್ಸಸ್​ ರೆಸಾರ್ಟಿನಲ್ಲಿ ಡಿಸೆಂಬರ್​ 6 ರಿಂದ 11 ರವರೆಗೆ ವಾಸ್ತವ್ಯ ಹೂಡಲಿರುವ ವಿಕಿ ಮತ್ತು ಕತ್ರೀನಾರಿಗಾಗಿ ಅಲ್ಲಿನ ಅತ್ಯಂತ ದುಬಾರಿ ಸೂಟ್​ ಬುಕ್​ ಆಗಿದೆ. ರಾಜಾ ಮಾನ್​ ಸಿಂಗ್​ ಎಂಬ ಹೆಸರಿನ ಈ ಸೂಟ್​ನ ಒಂದು ರಾತ್ರಿಯ ಟ್ಯಾರಿಫ್​7 ಲಕ್ಷ ರೂಪಾಯಿಗಳಾಗಿವೆ. ಅದರೊಳಗೆ ಪ್ರೈವೇಟ್​ ಗಾರ್ಡನ್​ ಮತ್ತು ಸ್ವಿಮ್ಮಿಂಗ್ ಪೂಲ್​ ಕೂಡ ಇದೆ ಎನ್ನಲಾಗಿದೆ.

    ಇದನ್ನೂ ಓದಿ: ಕತ್ರೀನಾ – ವಿಕಿ ಕೌಶಲ್ ಮದುವೆಗೆ ‘ನೋ ಫೋನ್​’​ ನಿಯಮ?!

    ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಬಂಧುಮಿತ್ರರಿಗಾಗಿ ಅಲ್ಲಿನ 4 ಲಕ್ಷ ರೂ. ಮತ್ತು 1 ಲಕ್ಷ ರೂ. ದರದ ಇತರ ಸೂಟ್​ಗಳನ್ನೂ ಬುಕ್​ ಮಾಡಲಾಗಿದೆ. ಭದ್ರತೆಯ ದೃಷ್ಟಿಯಿಂದ ರೆಸಾರ್ಟ್​ನ ಪ್ರವೇಶಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

    ಕಳೆದೆರಡು ತಿಂಗಳಿಂದ ವಿಕಿ-ಕತ್ರೀನಾ ಮದುವೆಯ ಸುದ್ದಿಗಳು ಮಾಧ್ಯಮದಲ್ಲಿ ಹರಿದಾಡುತ್ತಿದ್ದರೂ, ಇಬ್ಬರೂ ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. ಆದರೆ, ಈರ್ವರ ಇಡೀ ಕುಟುಂಬ ಪೂರ್ಣ ಪ್ರಮಾಣದ ಸಿದ್ಧತೆಯಲ್ಲಿ ತೊಡಗಿದೆ. ಬಾಲಿವುಡ್​ನ ಖ್ಯಾತನಾಮರು ಭಾಗವಹಿಸಲಿರುವ ಈ ವಿಶೇಷ ವೆಡ್ಡಿಂಗ್​ ಕಾರ್ಯಕ್ರಮವನ್ನು ಡೆಕೋ ಈವೆಂಟ್ಸ್​ ಸಂಸ್ಥೆ ಆಯೋಜಿಸುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)

    VIDEO| ಜೀತೇಗಾ.. ಇಂಡಿಯಾ ಜೀತೇಗಾ! ’83’ ಟ್ರೇಲರ್​ ಬಿಡುಗಡೆ​​

    VIDEO| ಈ ರಾಜ್ಯದ ನಾಡಗೀತೆ ಕೇಳಿ… ಅಂಧ ಬಾಲಕನ ಸವಿದನಿಯಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts