More

    ನೌಕರರೊಂದಿಗೆ ಸಂಭಾವನೆ ಹಂಚಿಕೊಂಡ ವೆಟ್ಟೋರಿ..!

    ಢಾಕಾ: ಕೋವಿಡ್-19ರ ಮಹಾಮಾರಿಯಿಂದಾಗಿ ಜಾಗತಿಕ ಕ್ರೀಡಾಲೋಕವೇ ಅಲ್ಲೋಲ ಕಲ್ಲೋಲವಾಗಿರುವುದು ಸುಳ್ಳಲ್ಲ. ಕ್ರಿಕೆಟ್ ಚಟುವಟಿಕೆ ಸ್ಥಗಿತವಾಗಿರುವುದರಿಂದ ಕ್ರಿಕೆಟ್ ಸಂಸ್ಥೆಗಳೂ ಸಂಕಷ್ಟದಲ್ಲಿ ಸಿಲುಕಿವೆ. ಕೆಲವೊಂದು ಕ್ರಿಕೆಟ್ ಸಂಸ್ಥೆಗಳು ದಿವಾಳಿಯತ್ತ ಸಾಗಿವೆ. ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಇಂಥ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶ ತಂಡದ ಸ್ಪಿನ್ ಬೌಲಿಂಗ್ ಕೋಚ್ ಡೇನಿಯಲ್ ವೆಟ್ಟೋರಿ ನೌಕರರ ಸಹಾಯಕ್ಕೆ ನಿಂತಿದ್ದಾರೆ. ತಮ್ಮ ಸಂಬಳದಲ್ಲಿ ಒಂದು ಭಾಗವನ್ನು ನೌಕಕರಿಗೆ ನೀಡುವಂತೆ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆಗೆ (ಬಿಸಿಬಿ) ಕೇಳಿಕೊಂಡಿದ್ದಾರೆ.

    ಇದನ್ನೂ ಓದಿ: VIDEO: ಅಣ್ಣಾವ್ರ ಹಾಡಿಗೆ ಅಪ್ಪನೊಂದಿಗೆ ಹೆಜ್ಜೆಹಾಕಿದ ಕ್ರಿಕೆಟರ್ ವೇದಾಕೃಷ್ಣಮೂರ್ತಿ

    ಶ್ರೇಷ್ಠ ಸ್ಪಿನ್ ಬೌಲರ್‌ಗಳ ಪೈಕಿ ಒಬ್ಬರೆನಿಸಿರುವ ಡೇನಿಯಲ್ ವೆಟ್ಟೋರಿ, ಸಾಮಾಜಿಕ ಕಳಕಳಿ ಮೂಲಕ ಗಮನ ಸೆಳೆದಿದ್ದಾರೆ. ಕರೊನಾ ವೈರಸ್‌ನಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿರುವ ಬಿಸಿಬಿ ಬೆಂಬಲಕ್ಕೆ ನಿಂತಿದ್ದಾರೆ. ‘ಬಿಸಿಬಿಯಲ್ಲಿ ಕಡಿಮೆ ಸಂಬಳ ಹೊಂದಿರುವ ನೌಕಕರಿಗೆ ತನ್ನ ಸಂಬಳದಲ್ಲಿ ಒಂದು ಭಾಗದಷ್ಟು ಉಪಯೋಗಿಸಿಕೊಳ್ಳುವಂತೆ ಸೂಚಿಸಿದ್ದಾರೆ’ ಎಂದು ಬಿಸಿಬಿ ಸಿಇಒ ನಿಜಾಮುದ್ದೀನ್ ಚೌಧರಿ ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾರೆ. 41 ವರ್ಷ ವೆಟ್ಟೋರಿ, ಬಾಂಗ್ಲಾದೇಶ ತಂಡದ ಸಿಬ್ಬಂದಿ ವರ್ಗದವರ ಪೈಕಿ ವೆಟ್ಟೋರಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. 100 ದಿನಗಳ ಗುತ್ತಿಗೆಗೆ ವೆಟ್ಟೋರಿ 250,000 ಅಮೆರಿಕನ್ ಡಾಲರ್ (1.88 ಕೋಟಿ ರೂ) ಸಂಭಾವನೆ ಪಡೆಯುತ್ತಿದ್ದಾರೆ. ಟಿ20 ವಿಶ್ವಕಪ್ ಅಂತ್ಯದವರೆಗೂ ವೆಟ್ಟೋರಿ ಬಿಸಿಬಿ ಜತೆ ಗುತ್ತಿಗೆ ಹೊಂದಿದ್ದಾರೆ. ಇದಕ್ಕೂ ಮೊದಲು ಬಿಸಿಬಿ, ಕೋವಿಡ್-19ರ ವಿರುದ್ಧದ ಹೋರಾಟಕ್ಕಾಗಿ ಸ್ಥಳೀಯ ಸರ್ಕಾರಕ್ಕೆ 3 ಕೋಟಿ ರೂಪಾಯಿ ದೇಣಿಗೆ ನೀಡಿತ್ತು.

    ಇದನ್ನೂ ಓದಿ: VIDEO: ನನ್ನ ದಾಖಲೆ ಮುರಿಯಿರಿ, ಸಚಿನ್‌ಗೆ ಯುವರಾಜ್ ಪ್ರತಿ ಸವಾಲು!

    ನ್ಯೂಜಿಲೆಂಡ್ ತಂಡದ ಮಾಜಿ ನಾಯಕನೂ ಆಗಿರುವ ವೆಟ್ಟೋರಿ, 18 ವರ್ಷಗಳ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದರು.ನೌಕರರೊಂದಿಗೆ ಸಂಭಾವನೆ ಹಂಚಿಕೊಂಡ ವೆಟ್ಟೋರಿ..! 2015ರ ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿದ ಕಿವೀಸ್ ತಂಡದ ಸದಸ್ಯರಾಗಿದ್ದರು. ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ ಬಳಿಕ ಐಪಿಎಲ್ ಪ್ರಾಂಚೈಸಿ  ಆರ್‌ಸಿಬಿ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. 113 ಟೆಸ್ಟ್, 295 ಏಕದಿನ ಹಾಗೂ 34 ಟಿ20 ಪಂದ್ಯಗಳನ್ನಾಡಿದ್ದಾರೆ.

     

    VIDEO: ಅಣ್ಣಾವ್ರ ಹಾಡಿಗೆ ಅಪ್ಪನೊಂದಿಗೆ ಹೆಜ್ಜೆಹಾಕಿದ ಕ್ರಿಕೆಟರ್ ವೇದಾಕೃಷ್ಣಮೂರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts