More

    VIDEO: ಅಣ್ಣಾವ್ರ ಹಾಡಿಗೆ ಅಪ್ಪನೊಂದಿಗೆ ಹೆಜ್ಜೆಹಾಕಿದ ಕ್ರಿಕೆಟರ್ ವೇದಾಕೃಷ್ಣಮೂರ್ತಿ

    ಬೆಂಗಳೂರು: ಡಾ.ರಾಜ್‌ಕುಮಾರ್ ಹಾಡಿ ನಟಿಸಿರುವ ನಿನ್ನಂಥ ಅಪ್ಪ ಇಲ್ಲ…ನಿನ್ನಂಥ ಮಗಳು ಇಲ್ಲ..ಈ ಗೀತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. 90ರ ದಶಕದಲ್ಲಿ ತೆರೆಕಂಡ ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್ ಹಾಗೂ ಸುಧಾರಾಣಿ ಅಭಿನಯದ ದೇವತಾ ಮನುಷ್ಯ ಚಿತ್ರದ ಈ ಗೀತೆ ಇಂದಿಗೂ ಪ್ರಸಿದ್ಧಿ ಪಡೆದಿದೆ. ಅಪ್ಪ-ಮಗಳ ಸಂಬಂಧ ಬೆಸೆಯುವ ಈ ಹಾಡು ಭಾವನಾನ್ಮಕವಾಗಿದೆ. ಇದೀಗ ಈ ಹಾಡಿಗೆ ಭಾರತದ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ತಮ್ಮ ತಂದೆ ಕೃಷ್ಣಮೂರ್ತಿ ಜತೆಗೂಡಿ ಮಾಡಿರುವ ಡ್ಯಾನ್ಸ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಇದನ್ನೂ ಓದಿ: VIDEO: ನನ್ನ ದಾಖಲೆ ಮುರಿಯಿರಿ, ಸಚಿನ್‌ಗೆ ಯುವರಾಜ್ ಪ್ರತಿ ಸವಾಲು!

    VIDEO: ಅಣ್ಣಾವ್ರ ಹಾಡಿಗೆ ಅಪ್ಪನೊಂದಿಗೆ ಹೆಜ್ಜೆಹಾಕಿದ ಕ್ರಿಕೆಟರ್ ವೇದಾಕೃಷ್ಣಮೂರ್ತಿಕರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಕಳೆದ ಎರಡೂವರೆ ತಿಂಗಳಿಂದ ಮನೆಯಲ್ಲೇ ಲಾಕ್ ಆಗಿರುವ ಕ್ರಿಕೆಟ್ ವೇದಾಕೃಷ್ಣಮೂರ್ತಿ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಮನೆಯಲ್ಲೇ ಫಿಟ್ನೆಸ್, ಅಡುಗೆ ಮಾಡುವುದು, ಟಿಕ್‌ಟಾಕ್ (ಈಗ ನಿಲ್ಲಿಸಿದ್ದಾರೆ) ಅವರ ನೆಚ್ಚಿನ ಹವ್ಯಾಸಗಳಾಗಿದ್ದವು. ಲಾಕ್‌ಡೌನ್‌ನಿಂದಾಗಿ ಪಾಲಕರಿಂದ ದೂರವಿದ್ದ ವೇದಾ, ಈಗ ಸಡಿಲಿಕೆಗೊಂಡ ಬಳಿಕ ತವರಿಗೆ ತೆರಳಿದ್ದಾರೆ. ಅಲ್ಲಿ ತಂದೆಯೊಂದಿಗೆ ದೇವತಾ ಮನುಷ್ಯಾ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ‘ಒಪ್ಪಿಸೋಕೆ ಸ್ವಲ್ಪ ಕಷ್ಟ ಆಯಿತು. ಕೊನೆಗೂ ಒಪ್ಪಿಕೊಂಡ್ರು, ನನ್ನ ಪ್ರೀತಿಯ ಅಪ್ಪ’ ಎಂಬ ಅಡಿ ಬರಹದೊಂದಿಗೆ ವೇದಾ ಕೃಷ್ಣಮೂರ್ತಿ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಜತೆಗೆ ಇದು ಟಿಕ್‌ಟಾಕ್ ಅಲ್ಲ ಅಂತಾನೂ ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಸಾವಿರಾರು ಜನ ವಿಡಿಯೋ ಲೈಕ್ ಮಾಡಿದ್ದು, ಅಪ್ಪ-ಮಗಳ ಸಂಬಂಧದ ಕುರಿತುಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದ ಸೆಹ್ವಾಗ್ ಕುಟುಂಬ

    ಟಿಕ್‌ಟಾಕ್‌ನಿಂದ ದೂರ ಉಳಿದ ವೇದಾ
    ಚೀನಾ ಆ್ಯಪ್ ಆಗಿರುವ ಬಹುತೇಕ ಭಾರತೀಯರು ಟಿಕ್‌ಟಾಕ್‌ನಿಂದ ದೂರ ಉಳಿಯುತ್ತಿದ್ದು, ವೇದಾ ಕೃಷ್ಣಮೂರ್ತಿ ಕೂಡ ಇದರಿಂದ ಹೊರ ಬಂದಿದ್ದಾರೆ. ಚೀನಾಗೆ ಸೆಡ್ಡು ಹೊಡೆಯುವ ಸಲುವಾಗಿ ಟಿಕ್‌ಟಾಕ್‌ಗೆ ಭಾರತೀಯರು ಗುಡ್‌ಬಾಯ್ ಹೇಳುತ್ತಿದ್ದಾರೆ. ವಿಡಿಯೋ ಪ್ರಕಟಿಸುವಾಗಲೇ ಇದು ಟಿಕ್‌ಟಾಕ್ ಅಲ್ಲ ಎನ್ನುವ ಮೂಲಕ ವೇದಾ ಇತರರಿಗೆ ಮಾದರಿಯಾಗಿದ್ದಾರೆ. ಮನೆಯಲ್ಲೇ ವಿವಿಧ ವಿಡಿಯೋಗಳಿಗೆ ಸಹೋದರ, ಚಿಕ್ಕಮಕ್ಕಳೊಂದಿಗೆ ಟಿಕ್‌ಟಾಕ್ ಮೂಲಕ ಗಮನಸೆಳೆದಿದ್ದರು. ವೇದಾ ಕೃಷ್ಣಮೂರ್ತಿ 48 ಏಕದಿನ ಹಾಗೂ 76 ಟಿ20 ಪಂದ್ಯಗಳನ್ನಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts