More

    ಪಶು ವೈದ್ಯರಿದ್ದರು ಚಿಕಿತ್ಸೆಗೆ ಪರದಾಟ

    ಅರಕೇರಾ; ಪಟ್ಟಣದ ಪಶು ಚಿಕಿತ್ಸಾಲಯ ವೈದ್ಯರು ಹಾಗೂ ಸಿಬ್ಬಂದಿ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಹರ್ಷವರ್ಧನ ನಾಯಕ ದೊರೆ ಆರೋಪಿಸಿದರು.

    ಇದನ್ನೂ ಓದಿ: ಕಿಬ್ಬೊಟ್ಟೆಯ ಕ್ಯಾನ್ಸರ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ಪಶು ಚಿಕಿತ್ಸಾಲಯಕ್ಕೆ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರೊಂದಿಗೆ ಭೇಟಿ ನೀಡಿ ಗುರುವಾರ ಮಾತನಾಡಿದರು.
    ಕಚೇರಿಗೆ ಸಿಬ್ಬಂದಿ ಬೆಳಗ್ಗೆ 11ಗಂಟೆಯಾದರು ಬಾರದಿದ್ದರಿಂದ ಜಿಪಿಎಸ್ ಫೋಟೊ ತೆಗೆದು ಸಾಕ್ಷಿ ಸಹಿತ ದೂರಿದರು. ಸರಿಯಾದ ಸಮಯಕ್ಕೆ ವೈದ್ಯರು, ಸಿಬ್ಬಂದಿ, ಔಷಧಿವಿಲ್ಲಾದೆ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    21 ಗ್ರಾಮಗಳು ಮತ್ತು 43,587 ಜಾನುವಾರುಗಳು ಈ ಆಸ್ಪತ್ರೆ ವ್ಯಾಪ್ತಿಗೆ ಒಳಪಟ್ಟಿವೆ. ಆದರೆ, ಬೇರೆ ಚಿಕಿತ್ಸಾಲಯ ವೈದ್ಯರನ್ನು ಇಲ್ಲಿಗೆ ಪ್ರಭಾರಿಯಾಗಿ ನಿಯೋಜನೆ ಮಾಡಲಾಗಿದ್ದು, ಸಮರ್ಪಕವಾಗಿ ಸಿಗುತ್ತಿಲ್ಲ.

    ಇದರಿಂದ ಕಾಲು-ಬಾಯಿ, ಚರ್ಮಗಂಟು, ಸೇರಿ ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿರುವ ಜಾನುವಾರುಗಳ ಚಿಕಿತ್ಸೆಗಾಗಿ ಅಲೆದಾಡಬೇಕಿದೆ. ಅಲ್ಲದೇ, ವೈದ್ಯರು ಸಿಗುತ್ತಿಲ್ಲವಾದ್ದರಿಂದ ಮೈತ್ರಿ ಸಹಾಯಕರು, ಸಿಬ್ಬಂದಿಯಿಂದ ಚಿಕಿತ್ಸೆ ನಡೆಯುತ್ತಿದೆ. ರೈತರಲ್ಲಿ ಮನಬಂದಂತೆ ಹಣ ವಸೂಲಿ ನಡೆಯುತ್ತಿದೆ ಎಂದು ಆರೋಪಿಸಿದರು.

    ಪ್ರಮುಖರಾದ ರಂಗನಾಥ ಸಾತಲ್, ರವಿಕುಮಾರ ಸಾತಲ್, ಶಾಲಂ ಬಡಿಗೇರ, ಮಲ್ಲಿಕಾರ್ಜುನ ಗೌಡ, ವೆಂಕೋಬ ಖಾನಾಪುರ, ಬಸವರಾಜ ಸಾತಲ್, ಶಿವಕುಮಾರ ಜಾಲಹಳ್ಳಿ, ಕರಿಯಪ್ಪ, ಹನುಮಂತ ಚಿಂತಲಕುಂಟ, ಮಲ್ಲಪ್ಪ ಮಡಿವಾಳ, ಅಂಜಪ್ಪ ಗಾಲಿ, ಮಲ್ಲಪ್ಪ, ಗೋವಿಂದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts