More

    ಟ್ವಿಟರ್​ನಲ್ಲಿ ಮುಟ್ಟಿದ್ರೇನೆ ‘ಲವ್’: ಇನ್ಮುಂದೆ ಹಾಗಾಗದಂತೆ ನಡೆಯುತ್ತಿದೆ ಹೊಸ ಪ್ರಯೋಗ!

    ನವದೆಹಲಿ: ಕರೊನಾ ಹಿನ್ನೆಲೆಯಲ್ಲಿ ಉಂಟಾದ ಪರಿಸ್ಥಿತಿಯ ಕಾರಣದಿಂದಾಗಿ ಡಿಜಿಟಲ್​ ಲೋಕದಲ್ಲಿ ಭಾರಿ ಬೆಳವಣಿಗೆಗಳು ಆಗುತ್ತಿದ್ದು, ಮೆಸೇಜಿಂಗ್​ ಹಾಗೂ ಸೋಷಿಯಲ್ ಮೀಡಿಯಾ ಕುರಿತಾದ ಆ್ಯಪ್​ಗಳಲ್ಲೂ ಭಾರಿ ಅಪ್​ಡೇಟ್ಸ್​ ಆಗುತ್ತಿವೆ. ಮೊನ್ನೆಮೊನ್ನೆಯಷ್ಟೇ ವಾಟ್ಸ್​​ಆ್ಯಪ್​ ಮಹತ್ವದ ಅಪ್​ಡೇಟ್​ವೊಂದನ್ನು ಕೊಟ್ಟಿದ್ದು, ಫೇಸ್​ಬುಕ್​ ಕೂಡ ಸದ್ಯದಲ್ಲೇ ಹೊಸದೇನನ್ನೋ ಕೊಡುವುದಾಗಿ ಘೋಷಿಸಿದೆ. ಈಗ ಟ್ವಿಟರ್​ ಸಹ ಹೊಸದೊಂದು ಅಪ್​ಡೇಟ್​ ಕೊಟ್ಟಿದ್ದು, ಟ್ವಿಟರ್​ನಲ್ಲಿ ‘ಲವ್’​ ಗೊಂದಲ ಪರಿಹಾರವಾಗಲಿದೆ.

    ಅಂದರೆ ಸದ್ಯ ಟ್ವಿಟರ್​ನಲ್ಲಿ ಯಾವುದೇ ಟ್ವೀಟ್​ ಅಥವಾ ರಿಪ್ಲೈಗೆ ಯಾರಾದರೂ ಅಸಮಾಧಾನ ಅಥವಾ ಅಸಮ್ಮತಿ ಸೂಚಿಸುವುದು ಸಾಧ್ಯವಿಲ್ಲ. ಯಾವುದೇ ಟ್ವೀಟ್​ ಅಥವಾ ರಿಪ್ಲೈಯನ್ನು ಸುಮ್ಮನೆ ಮುಟ್ಟಿದರೂ ಅದು ಲವ್ ಆಗಿ ಅಂದರೆ ಹಾರ್ಟ್​ ಸಿಂಬಲ್​ ಥರ ಬರುವುದರಿಂದ ಎಲ್ಲವೂ ಮೆಚ್ಚುಗೆ ಎಂದೇ ಬಿಂಬಿತವಾಗುತ್ತಿದೆ. ಪರಿಣಾಮವಾಗಿ ಯಾವುದೇ ಒಂದು ಟ್ವೀಟ್​ ಅಥವಾ ರಿಪ್ಲೈಗೆ ಅಸಮಾಧಾನ ಅಥವಾ ಅಸಮ್ಮತಿ ಸೂಚಿಸಬೇಕಿದ್ದರೆ ಅದಕ್ಕೆ ಪ್ರತಿಯಾಗಿ ನೆಗೆಟಿವ್ ಆಗಿ ರಿಪ್ಲೈ ಮಾಡಬೇಕಿದೆಯೇ ಹೊರತು ಜಸ್ಟ್ ರಿಯಾಕ್ಷನ್​ನಿಂದ ಅದನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ.

    ಇದನ್ನೂ ಓದಿ: ಇವರು ಸಾಮಾನ್ಯ ಖದೀಮರಲ್ಲ; ಒಂದೇ ಖಾತೆಗೆ 102 ಬಾರಿ ಕನ್ನ ಹಾಕಿದ್ದರು, ತಮ್ಮದೇ ಹೆಸರಲ್ಲಿ 50 ಖಾತೆ ತೆರೆದಿದ್ದರು!

    ಆದರೆ ಟ್ವಿಟರ್​ ಈಗ ಇದಕ್ಕೆ ಒಂದು ಪರಿಹಾರ ಒದಗಿಸುತ್ತಿದ್ದು, ಅಪ್​ವೋಟ್​ ಹಾಗೂ ಡೌನ್​ವೋಟ್​ ಆಪ್ಷನ್​ ಕೂಡ ಕೊಡಲು ಮುಂದಾಗಿದೆ. ಹೀಗಾಗಿ ಇನ್ನುಮುಂದೆ ನಮ್ಮ ಟ್ವೀಟ್​ ಅಥವಾ ರಿಪ್ಲೈ ಎಷ್ಟು ಮಂದಿ ಒಪ್ಪಿದ್ದಾರೆ ಅಥವಾ ಒಪ್ಪಿಲ್ಲ ಎಂಬುದು ನೆಟ್ಟಿಗರ ರಿಯಾಕ್ಷನ್​ನಿಂದಲೂ ತಿಳಿಯಲಿದೆ. ಸದ್ಯ ಇದನ್ನು ಐಫೋನ್​ ಆಪರೇಟಿಂಗ್ ಸಿಸ್ಟಮ್​​ನಲ್ಲಿ ಟ್ವಿಟರ್ ಟ್ರಯಲ್​ ನೋಡುತ್ತಿದ್ದು, ಸದ್ಯದಲ್ಲೇ ಎಲ್ಲರಿಗೂ ಈ ಅಪ್​ಡೇಟ್​ ಕೊಡಲಿದೆ.

    ಅಲ್ಲದೆ ಇದು ಸದ್ಯ ಪ್ರಯೋಗವಷ್ಟೇ ಎಂದಿರುವ ಟ್ವಿಟರ್​, ಇದು ಡಿಸ್​ಲೈಕ್ ಬಟನ್​ ಅಲ್ಲ. ಏಕೆಂದರೆ ಈ ಡೌನ್​​ವೋಟ್ಸ್​ ಪಬ್ಲಿಕ್​ ಆಗಿ ಕಾಣಿಸುವುದಿಲ್ಲ, ಸಂಬಂಧಿತ ಟ್ವಿಟರ್​ ಹ್ಯಾಂಡಲ್​ನವರಿಗಷ್ಟೇ ಕಾಣಿಸುತ್ತದೆ. ಅಲ್ಲದೆ ಈ ವೋಟ್​ಗಳು ರಿಪ್ಲೈ ಆರ್ಡರ್ ಮೇಲೆ ಪರಿಣಾಮ ಬೀರುವುದಿಲ್ಲ ಎಂದೂ ಟ್ವಿಟರ್ ಹೇಳಿದೆ. ಅಂದಹಾಗೆ ಇದು ಸದ್ಯ ರಿಪ್ಲೈಗೆ ಮಾತ್ರವೋ ಅಥವಾ ಟ್ವೀಟ್​-ರಿಟ್ವೀಟ್​ಗೂ ಅನ್ವಯಿಸುತ್ತದೋ ಎಂಬುದರ ಬಗ್ಗೆ ಟ್ವಿಟರ್​ ಇನ್ನೂ ಸ್ಪಷ್ಟವಾಗಿ ತಿಳಿಸಿಲ್ಲ. (ಏಜೆನ್ಸೀಸ್)

    ಬ್ಲೂ ಫಿಲ್ಮ್​ ಕೇಸ್​ನಲ್ಲಿ ಪತಿ ಅರೆಸ್ಟ್​; ನಟಿ ಶಿಲ್ಪಾ ಶೆಟ್ಟಿ ‘ಚಾಪ್ಟರ್​’ ಕ್ಲೋಸ್​?

    ಇನ್ನು ಸ್ಮಾರ್ಟ್​ಫೋನ್​ ಇಲ್ಲದೆ ವಾಟ್ಸ್​ಆ್ಯಪ್​ ಬಳಸಬಹುದು; ಬೀಟಾ ಯೂಸರ್ಸ್​ಗೆ ಹೊಸ ಆಪ್ಷನ್​!

    ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts