More

    ಮೊಟ್ಟೆ ತಿಂದರೂ ಸಸ್ಯಾಹಾರಿ: ವಿವಾದಕ್ಕೆ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ

    ನವದೆಹಲಿ: ನಾನೀಗ ಸಂಪೂರ್ಣ ಸಸ್ಯಾಹಾರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದರೂ, ಡಯೆಟ್‌ನಲ್ಲಿ ಮೊಟ್ಟೆ ತಿನ್ನುವುದಾಗಿ ಹೇಳುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಸೃಷ್ಟಿಸಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಇದೀಗ ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ.

    ‘ನಾನು ವೀಗನ್ ಎಂಬುದಾಗಿ ಎಂದೂ ಹೇಳಿಕೊಂಡಿಲ್ಲ. ನಾನು ವೆಜಿಟೇರಿಯನ್ ಎಂದಷ್ಟೇ ಯಾವಾಗಲೂ ಹೇಳಿಕೊಂಡು ಬಂದಿರುವೆ. ದೊಡ್ಡ ಉಸಿರೊಂದನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಸಸ್ಯಾಹಾರವನ್ನು (ನೀವು ಬಯಸಿದರೆ) ತಿನ್ನಿ’ ಎಂದು ಕೊಹ್ಲಿ ಮಂಗಳವಾರ ಟ್ವೀಟಿಸಿದ್ದಾರೆ.

    ಇದನ್ನೂ ಓದಿ: ಮೊಟ್ಟೆ ತಿಂದರೂ ವಿರಾಟ್ ಕೊಹ್ಲಿ ಸಸ್ಯಾಹಾರಿ! ನೆಟ್ಟಿಗರ ಅಚ್ಚರಿ

    ಕೊಹ್ಲಿ ವಾದದ ಪ್ರಕಾರ ಮಾಂಸ, ಮೀನು, ಜೇನು, ಹಾಲು ಸಹಿತ ಡೈರಿ ಉತ್ಪನ್ನ ಮತ್ತು ಮೊಟ್ಟೆ ತಿನ್ನದವರು ವೀಗನ್ ಆಗಿದ್ದರೆ, ಮಾಂಸ-ಮೀನು ತಿನ್ನದವರು ವೆಜಿಟೇರಿಯನ್. ಈ ಹಿಂದೆ ಹಲವು ಆಹಾರ ತಜ್ಞರು ಮತ್ತು ಪ್ರಾಣಿ ದಯಾ ಸಂಸ್ಥೆಗಳು ಕೂಡ ಇಂಥದ್ದೇ ವಾದ ಮಂಡನೆಯಾಗಿದೆ ಎಂಬುದು ಗಮನಾರ್ಹ. ಆದರೆ ಇಂಗ್ಲಿಷ್​ ಡಿಕ್ಷನರಿಯಲ್ಲಿ ಇವೆರಡೂ ಪದಗಳಿಗೆ ಸಸ್ಯಾಹಾರಿ, ಶಾಕಾಹಾರಿ ಎಂಬ ಒಂದೇ ಅರ್ಥಗಳಿವೆ.

    ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜತೆಗಿನ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಕೊಹ್ಲಿ, ತಮ್ಮ ಡಯೆಟ್ ಬಗ್ಗೆ ವಿವರಿಸುತ್ತ ಪ್ರತಿದಿನವೂ ಕೆಲ ಮೊಟ್ಟೆಗಳನ್ನು ತಿನ್ನುತ್ತೇನೆ ಎಂದಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು, ಕೋಳಿ ಮೊಟ್ಟೆ ತಿನ್ನುವವರು ಸಸ್ಯಾಹಾರಿಗಳಾಗಲು ಹೇಗೆ ಸಾಧ್ಯ ಎಂದು ಅಚ್ಚರಿಯೊಂದಿಗೆ ಕಾಲೆಳೆದಿದ್ದರು. ಕೊಹ್ಲಿ ತಮ್ಮ ಡಯೆಟ್ ಬಗ್ಗೆ ವಿವರಿಸುತ್ತ, ‘ಸಾಕಷ್ಟು ತರಕಾರಿಗಳು, ಕೆಲ ಮೊಟ್ಟೆ, 2 ಕಪ್ ಕಾಫಿ, ದಾಲ್, ಕ್ವಿನಾವೊ, ಸಾಕಷ್ಟು ಸ್ಪಿನಿಚ್ ಸೊಪ್ಪು ತಿನ್ನುತ್ತೇನೆ. ಹಾಗೆಯೇ ದೋಸೆಗಳನ್ನು ಇಷ್ಟಪಡುತ್ತೇನೆ. ಆದರೆ ಎಲ್ಲವನ್ನೂ ಸಾಕಷ್ಟು ನಿಯಂತ್ರಣದಲ್ಲಿ ತಿನ್ನುತ್ತೇನೆ’ ಎಂದು ಹೇಳಿದ್ದಾರೆ. ಶಾಕಾಹಾರಿಯ ಡಯೆಟ್‌ನಲ್ಲಿ ಮೊಟ್ಟೆ ಹೇಗೆ ಸೇರಿಕೊಂಡಿತು ಎಂದು ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ಉತ್ತಮ ಫಿಟ್ನೆಸ್ ಸಲುವಾಗಿ ಸಸ್ಯಾಹಾರಿಯಾಗಿರುವುದಾಗಿಯೂ ಕೊಹ್ಲಿ ಹೇಳಿಕೊಂಡಿದ್ದರು.

    ಅವಳಿ ಒಲಿಂಪಿಕ್​ ಪದಕ ವಿಜೇತ ಪೈಲ್ವಾನ್​ ಸುಶೀಲ್​ ಕುಮಾರ್​ಗೆ ದೆಹಲಿ ಪೊಲೀಸರಿಂದ ಶಾಕ್​ ಮೇಲೆ ಶಾಕ್​..

    ಸೋಷಿಯಲ್ ಮೀಡಿಯಾದಲ್ಲಿ ಪುತ್ರಿಯ ಮುಖ ತೋರಿಸದ ಬಗ್ಗೆ ವಿರುಷ್ಕಾ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts