More

    ಎಲ್ಲರಿಗೂ ಅವಕಾಶ ಕಲ್ಪಿಸಿ ಬೆಳೆಯುವುದೇ ಕಾಯಕ: ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‍ಕ್ಲೇವ್​ನಲ್ಲಿ ಸಿಎಂ

    ಬೆಂಗಳೂರು: ಕಾಯಕ ಮತ್ತು ಕರ್ತವ್ಯದ ನಡುವೆ ವ್ಯತ್ಯಾಸವಿದೆ. ಕರ್ತವ್ಯ ನಮಗೋಸ್ಕರ ಮಾಡುವುದು, ನಮ್ಮೊಂದಿಗೆ ಬೇರೆಯವರಿಗೂ ಅವಕಾಶ ಕಲ್ಪಿಸಿ ಎಲ್ಲರೂ ಒಟ್ಟಾಗಿ ಬೆಳೆಯುವುದು ಕಾಯಕ. ಬಸವಣ್ಣನವರ ಕಾಯಕವೇ ಕೈಲಾಸ ಎಂಬುದು ಕೂಡ ಇದೇ ಚಿಂತನೆಯನ್ನು ಒಳಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಇಂಟರ್​​ನ್ಯಾಷನಲ್ ಲಿಂಗಾಯತ್ ಯೂತ್ ಫೋರಮ್ ಹಾಗೂ ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವತಿಯಿಂದ ಇಂದು ಅರಮನೆ ಮೈದಾನದ ವೈಟ್‍ಪೆಟಲ್ಸ್​​ನಲ್ಲಿ ಆಯೋಜಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‍ಕ್ಲೇವ್ -2023 ಹಾಗೂ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಸಾಮಾನ್ಯವಾಗಿ ಒಂದು ಸಮುದಾಯವನ್ನು ಕಟ್ಟುವಾಗ ಬಹುತೇಕ ಹಿರಿಯರು ಇರುತ್ತಾರೆ. ಆದರೆ, ಇಲ್ಲಿ ಯುವಕರೇ ಮುಂದೆ ಬಂದು ಸಮುದಾಯ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಪ್ರಾಂಜಲ ಮನಸಿನಿಂದ ಈ ಸಂಘ ಸ್ಥಾಪಿಸಿದ್ದಾರೆ. ಇವರಿಗೆ ಯಾವುದೇ ಮಾರ್ಗದರ್ಶನ ಬೇಕಿಲ್ಲ. ನಿಮ್ಮ ಆತ್ಮಸಾಕ್ಷಿಗೆ ತಕ್ಕಹಾಗೆ ಕೆಲಸ ಮಾಡಿ, ಬಸವಣ್ಣನವರು ಕಾಯಕವೇ ಕೈಲಾಸ ಎಂದರು ಎಂದು ಸಿಎಂ ಕಿವಿಮಾತು ಹೇಳಿದರು.

    ದುಡ್ಡೇ ದೊಡ್ಡಪ್ಪ ಅಲ್ಲ ದುಡಿಮೆಯೇ ದೊಡ್ಡಪ್ಪ, ನಮ್ಮ ನಾಯಕರಾದ ಯಡಿಯೂರಪ್ಪನವರು ಪರಿಶ್ರಮದಿಂದ ಬೆಳೆದಿದ್ದಾರೆ‌. ಅವರು ಕೇವಲ ಮುಖ್ಯಮಂತ್ರಿಯಷ್ಟೇ ಆದವರಲ್ಲ, ಅವರೊಬ್ಬ ನಾಯಕ, ಜನರ ಮನಸಿನಲ್ಲಿ ಉಳಿಯುವವರೇ ನಿಜವಾದ ನಾಯಕ. ಯಡಿಯೂರಪ್ಪ ಅವರೇ ನಮ್ಮ ರೋಲ್ ಮಾಡೆಲ್ ಎಂದರು.

    ನಿರಂತರ ಪರಿಶ್ರಮಕ್ಕೆ ಸಿಕ್ಕೇ ಸಿಗುತ್ತೆ ಪ್ರತಿಫಲ

    ನಮ್ಮ ಸಮುದಾಯದಲ್ಲಿ ಅನೇಕ ಉದ್ಯಮಿಗಳಿದ್ದಾರೆ. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಸಚಿವ ಮುರುಗೇಶ್ ನಿರಾಣಿ, ಕೆಎಲ್​ಇ ಮುಖ್ಯಸ್ಥ ಪ್ರಭಾಕರ್ ಕೋರೆ ಎಲ್ಲರೂ ದೊಡ್ಡಮಟ್ಟದ ಸಾಧನೆ ಮಾಡಿದ್ದಾರೆ. ಸಣ್ಣ ಸಣ್ಣ ಉದ್ಯಮದಿಂದ ಆರಂಭಿಸಿ ದೊಡ್ಡಮಟ್ಟದಲ್ಲಿ ಬೆಳೆದಿದ್ದಾರೆ‌. ನಮ್ಮದು ರೈತಾಪಿ ಸಮಾಜ, ಮಣ್ಣಿನ ಜೊತೆ ನಮ್ಮ ಸಂಬಂಧ, ಯಾರು ಮಣ್ಣಿನ ಜೊತೆ ಸಂಬಂಧ ಇಟ್ಟುಕೊಂಡಿರುತ್ತಾರೋ ಅವರು ಪ್ರಾಮಾಣಿಕರಾಗಿರುತ್ತಾರೆ‌. ಗುಡ್ಡಗಾಡು ಜನರು ಬಲಿಷ್ಠರಾಗಿರುತ್ತಾರೆ. ಕರಾವಳಿ ಜನರು ಸಾಹಸಿಗಳಾಗಿರುತ್ತಾರೆ. ಲಿಂಗಾಯತ ಸಮುದಾಯವನ್ನು ದುಡಿಮೆಯೇ ಕಾಪಾಡುತ್ತದೆ. ಲಕ್ ಎನ್ನುವುದು ಇಲ್ಲ. ನಿರಂತರ ಶ್ರಮ ವಹಿಸಿದಾಗ ಮಾತ್ರ ಪ್ರತಿಫಲ ಸಿಗುತ್ತದೆ. ಸಮಾಜಕ್ಕೆ ಏನು ಬೇಕೋ ಅದಕ್ಕೆ ಸರ್ಕಾರ ಬೆಂಬಲವಾಗಿ ನಿಲ್ಲುತ್ತದೆ. ಬಸವಕಲ್ಯಾಣ, ಕೂಡಲಸಂಗಮ ಅಭಿವೃದ್ದಿ ಮಾಡುತ್ತಿದ್ದೇವೆ. ಸಮಾಜಕ್ಕೆ ಏನು ಬೇಕೋ ಎಲ್ಲವನ್ನೂ ನೀಡಲು ಸರ್ಕಾರ ಸಿದ್ಧವಿದೆ ಎಂದು ಸಿಎಂ ಭರವಸೆ ನೀಡಿದರು.

    ಮಾಜಿ ಸಿಎಂ ಬಿ‌.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್, ಶಾಸಕರಾದ ಅರವಿಂದ ಬೆಲ್ಲದ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

    ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಸ್ವಾಮೀಜಿ ಶವವಾಗಿ ಪತ್ತೆ!

    ಮೇಲಿನ ಮನೆಯ ಶೋಯಬ್, ಕೆಳಗಿನ ಮನೆಯ ಶಾಜಿಯಾ ಒಂದೇ ದಿನ ಗಾಯಬ್!

    ಪೈಲಟ್ ಕೆಲಸಕ್ಕೇ ಮುಳುವಾದ ‘ಮೂತ್ರ ವಿಸರ್ಜನೆ’; ಏರ್​ ಇಂಡಿಯಾದ ಪ್ರಕರಣ ‘ಒಂದಕ್ಕೆ’ 30 ಲಕ್ಷ ರೂ. ದಂಡ

    ‘ಓಂ’ ಇದ್ದ ಹಾಳೆಯಲ್ಲಿ ಶುಭಾಶಯ ಬರೆಯಲು ಒಪ್ಪದ ತನ್ವೀರ್ ಸೇಠ್!; ಕನ್ನಡ ಮತ್ತು ಸಂಸ್ಕೃತಿ ಸಚಿವರ ಎದುರೇ ತಕರಾರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts