More

    ಸಿಎಂ, ಡಿಸಿಎಂ ಸಭೆಯು ವಿಫಲ! ವೀಣಾ ನಡೆಯಿಂದ ಹೆಚ್ಚಿದ ‘ಕೈ’ ನಾಯಕರ ಆತಂಕ

    ಬಾಗಲಕೋಟೆ: ಇಲ್ಲಿನ ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಶಾಸಕ ವಿಜಯಾನಂದ ಕಾಶಪ್ಪನವರ್​ ಅವರ ಪತ್ನಿ ವೀಣಾ ಕಾಶಪ್ಪನವರ್​ಗೆ ಕಾಂಗ್ರೆಸ್​ ಟಿಕೆಟ್​ ಕೈತಪ್ಪಿದ್ದು, ಈ ವಿಷಯ ಇದೀಗ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲಗೆ ಚುನಾವಣಾ ಟಿಕೆಟ್ ಸಿಕ್ಕಿರುವುದು ವೀಣಾ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.

    ಇದನ್ನೂ ಓದಿ: ಒಂದು ಖಾತೆಯಿಂದ 10 ಲಕ್ಷ ರೂ ಹೆಚ್ಚಿನ ಹಣದ ವರ್ಗಾವಣೆಯಾದರೆ ಪರಿಶೀಲಿಸಿ: ವೆಚ್ಚ ವೀಕ್ಷಕ ರೋಹಿತ್ ಅಸುದಾನಿ ಸೂಚನೆ

    ಕಾಂಗ್ರೆಸ್​ ತನಗೆ ಟಿಕೆಟ್​ ಕೊಡದೆ ವಿಷಯಕ್ಕೆ ಭಾರೀ ಅಸಮಾಧಾನ ಹೊರಹಾಕಿರುವ ವೀಣಾ ಕಾಶಪ್ಪನವರ್​, ತಾನು ಚುನಾವಣಾ ಅಖಾಡದಲ್ಲಿರುವುದಂತೂ ಪಕ್ಕಾ ಎಂದು ಪರೋಕ್ಷವಾಗಿ ಹೇಳಿರುವುದು ಸದ್ಯ ಕೈ ನಾಯಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಒಂದೆಡೆ ವೀಣಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, ಮತ್ತೊಂದೆಡೆ ವೀಣಾಗೆ ಬಿಜೆಪಿ ಗಾಳ ಹಾಕಿದೆ ಎನ್ನಲಾಗುತ್ತಿದೆ. ಹೀಗಾಗಿ ವೀಣಾ ನಡೆ ಮೇಲೆ ಸದ್ಯ ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

    ಇನ್ನು ನಿನ್ನೆ (ಮಾ.28) ಸಂಜೆ ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್​, ಸಂಯುಕ್ತಾ ಪಾಟೀಲ, ಆರ್​.ಬಿ. ತಿಮ್ಮಾಪುರ ಸಮ್ಮುಖದಲ್ಲಿ ವೀಣಾ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನದಲ್ಲಿ ಸಭೆ ನಡೆಸಲಾಯಿತು. ಆದರೆ, ಈ ಸಭೆಯು ವಿಫಲವಾಗಿದೆ. ಟಿಕೆಟ್ ಬದಲಾವಣೆ ಸಾಧ್ಯವಿಲ್ಲ, ಎಂಎಲ್​ಸಿ, ನಿಗಮ ಮಂಡಳಿ ಬಗ್ಗೆ ಗ್ಯಾರಂಟಿ ಇಲ್ಲ ಎಂಬುದು ಮಾಹಿತಿ.

    ಇದನ್ನೂ ಓದಿ: ಸುಳ್ಳುರಾಮಯ್ಯ, ಬುರುಡೆರಾಮಯ್ಯ ಎಂದು ಹೆಸರು ಬದಲಿಸಿಕೊಳ್ಳಿ: ಸಿಎಂ ವಿರುದ್ಧ ಜಿಲ್ಲಾ ಬಿಜೆಪಿ ಟೀಕೆ

    ಸೂಕ್ತ ಸ್ಥಾನಮಾನದ ಖಚಿತ ಭರವಸೆ ಸಿಗದ ಹಿನ್ನಲೆ ಬಾಗಲಕೋಟೆ ಪಕ್ಷದ ಅಭ್ಯರ್ಥಿಯಾದ ಸಂಯುಕ್ತಾ ಪಾಟೀಲ ಪರ ಚುನಾವಣೆ ಪ್ರಚಾರಕ್ಕೆ ಹೋಗಲ್ಲ ಎಂದ ವೀಣಾ, ಪಕ್ಷದಲ್ಲಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷ ಸ್ಥಾನ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ.

    ಇನ್ನೇರೆಡು ದಿನಗಳಲ್ಲಿ ತನ್ನ ಮುಂದಿನ ನಡೆ ಬಹಿರಂಗ ಪಡಿಸಲಿರುವ ವೀಣಾ ಕಾಶಪ್ಪನವರ್​, ದುಡಿಮೆಗೆ ತಕ್ಕ ಕೂಲಿ ಸಿಗದ ಹಿನ್ನಲೆ ಪಕ್ಷದ ಮುಖಂಡರ ವಿರುದ್ದ ತೀವ್ರ ಅಸಮಧಾನ ಹೊರಹಾಕಿದ್ದಾರೆ.

    ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

    ಬಾಳೆಹಣ್ಣಿನ ವಿಷಯದಲ್ಲಿ ಈ ತಪ್ಪನ್ನು ಮಾಡಲೇಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts