More

    ‌ವಸಿಷ್ಠ ಸಿನಿಮಾಗಳ ಪಟ್ಟಿಗೆ ಇನ್ನೊಂದು ಸೇರ್ಪಡೆ … ಇಲ್ಲಿದೆ ಡೀಟೇಲ್ಸ್​ …

    ಬೆಂಗಳೂರು: ವಸಿಷ್ಠ ಸಿಂಹ ಅಭಿನಯದ ‘ಕಾಲಚಕ್ರ’ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಈ ಮಧ್ಯೆ, ಅವರು ಇನ್ನೂ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ‘ತಲ್ವಾರ್​ಪೇಟೆ’, ‘ಮರ್ಯಾದಸ್ಥ’, ‘ದಂತಕಥೆ’, ಗುರು ದೇಶಪಾಂಡೆ’ ನಿರ್ದೇಶನದ ಹೊಸ ಚಿತ್ರ … ಹೀಗೆ ವಸಿಷ್ಠ ಮುಂದಿನ ಒಂದು ವರ್ಷದಲ್ಲಿ ಸಾಲುಸಾಲು ಚಿತ್ರಗಳಲ್ಲಿ ನಟಿಸಲಿದ್ದಾರೆ.

    ಇದನ್ನೂ ಓದಿ: ವಿಜಯಲಕ್ಷ್ಮೀ ಮೇಲೆ ಇನ್ನೊಂದು ದೂರು … ಈ ಬಾರಿ ಕೊಟ್ಟವರು ಲಾಡ್ಜ್​ ಓನರ್​

    ಇದೆಲ್ಲದರ ಜತೆಗೆ, ಅವರು ಇನ್ನೂ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರ. ಸದ್ಯಕ್ಕೆ ಇನ್ನೂ ಹೆಸರಿಡದ ಈ ಚಿತ್ರವು ಅಕ್ಟೋಬರ್ ಕೊನೆಯಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಸದ್ಯಕ್ಕೆ ‘ಪ್ರೊಡಕ್ಷನ್​ ನಂಬರ್​ ಒನ್​’ ಹೆಸರಿನಿಂದ ಕರೆಯಲ್ಪಡುತ್ತಿರುವ ಈ ಚಿತ್ರದ ಹೆಸರು ಸದ್ಯದಲ್ಲೇ ಅನಾವರಗೊಳ್ಳಲಿದೆ.

    ಜನರತ್ನ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜನಾರ್ದನ ನಿರ್ಮಿಸುತ್ತಿರುವ ಈ ಚಿತ್ರವನ್ನು ವಚನ್ ನಿರ್ದೇಶಿಸುತ್ತಿದ್ದಾರೆ. ವಚನ್​ ಈ ಹಿಂದೆ ಪವನ್ ಕುಮಾರ್ ಜೊತೆಗೆ ‘ಲೂಸಿಯಾ’ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದವರು. ಇನ್ನಷ್ಟು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಕಲಿತವರು. ಈಗ ಅವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

    ಇದನ್ನೂ ಓದಿ: ಆರ್​ಆರ್​ಆರ್​ ಟೀಸರ್​; ಗೆದ್ದ ಜೂ. ಎನ್​ಟಿಆರ್​, ಸೋತ ರಾಮ್​ಚರಣ್​

    ವಿಶೇಷವೆಂದರೆ, ಈ ಚಿತ್ರದಲ್ಲಿ ವಸಿಷ್ಠ ಜತೆಗೆ ಕಿಶೋರ್​ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಲ್ಲದೆ, ಕನ್ನಡ ಚಿತ್ರರಂಗದ ಇನ್ನಷ್ಟು ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತವಿರುವ ಈ ಚಿತ್ರಕ್ಕೆ ‘ಮಫ್ತಿ’ ಖ್ಯಾತಿಯ ನವೀನ್ ಕುಮಾರ್ ಛಾಯಾಗ್ರಹಣವಿದೆ. ಇನ್ನು, ‘ಟಗರು’ ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.

    ‘ಟಗರು’ ನೋಡೋಕೆ ಯಾರೆಲ್ಲಾ ಬರ್ತಾರೆ ಗೊತ್ತಾ? ನೀವೇ ನೋಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts