More

    ಕೂಲಿ ಕಾರ್ಮಿಕರನ್ನು ಕರೆಸಿಕೊಳ್ಳಲು ಮನವಿ

    ಸುರಪುರ: ನಗರದ ಸಾವಿರಾರು ಜನರು ತಮ್ಮ ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಲಾಕ್ಡೌನ್ನಿಂದ ತೊಂಬಾ ತೊಂದರೆಅನುಭವಿಸುತ್ತಿದ್ದಾರೆ. ಅತಂಹ ವಲಸೆ ಕೂಲಿ ಕಾರ್ಮಿಕರನ್ನು ಮರಳಿ ತಮ್ಮ ಊರುಗಳಿಗೆ ಕರೆಸಿಕೊಳ್ಳಬೇಕು ಎಂದು ಶಾಶಕ ನರಸಿಂಹ ನಾಯಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಈ ಕುರಿತು ಜಿಲ್ಲಾಧಿಕಾರಿಗೆ ಭೇಟಿಯಾಗಿ ಮನವಿ ಸಲ್ಲಿಸಿದ ಅವರು, ಕೂಲಿ ಕಾರ್ಮಿಕರನ್ನು ಕರೆಸಿಕೊಳ್ಳಲು ಈಗಾಗಲೇ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಅದರಂತೆ ತಾಲೂಕಿನ ಎಲ್ಲ ಕೂಲಿ ಕಾಮರ್ಿಕರನ್ನು ಕೂಡಲೇ ಕರೆಸಿಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.

    ಹೂರರಾಜ್ಯಕ್ಕೆ ದುಡಿಮೆ ಅರಿಸಿ ತೆರಳಿದವರ ಪಟ್ಟಿ ಮಾಡಲಾಗಿದೆ ಆ ಪಟ್ಟಿ ಜಿಲ್ಲಾಡಳಿತಕ್ಕೂ ನೀಡಲಾಗಿದೆ ಅದರಂತೆ ಮಹರಾಷ್ಟ್ರ ಮತ್ತು ಗೂವಾ ರಾಜ್ಯಗಳಲ್ಲಿ ಸಾವಿರಾರು ಜನರು ಕೆಲಸವನ್ನು ಮಾಡುತ್ತಿದ್ದಾರೆ ಕಳೆದ ಒಂದು ತಿಂಗಳ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಅಲ್ಲದೆ ಕರೊನಾ ವೈರಸ್ ವ್ಯಾಪಕವಾಗಿ ಹರುಡಿತ್ತಿರುವುದರಿಂದ ಭಯ ಭೀತರಾಗಿ ನಮ್ಮನ್ನು ಮರಳಿ ತಾಲೂಕಿಗೆ ಕರೆಸಿಕೊಳ್ಳಬೇಕು ಎಂದರು.

    ಮಹರಾಷ್ಟ್ರದಲ್ಲಿ ಕರೊನಾ ವ್ಯಾಪಕವಾಗಿ ಹರಡಿದೆ ಹೊಟ್ಟೆಪಾಡಿಗಾಗಿ ಅಲ್ಲಿಗೆ ತೆರಳಿದ ಬಡ ಜನರು ತಮಗೂ ವೈರಸ್ ತಗಲಬಹುದು ಎಂಬ ಶಂಕೆಯಿಂದ ಹೊರಗಡೆ ಎಲ್ಲೂ ಹೊಗದೆ ಇತ್ತ ಮನೆಯಲ್ಲಿರುವ ದಿನಸಿಗಳಿಗೂ ಖಾಲಿಯಾಗಿ ತುಂಬಾ ಸಂಕಷ್ಟ ಅನುಭವಿಸಿ ನನಗೆ ಕರೆಮಾಡಿ ಅವರ ನೋವು ತೋಡಿಕೊಂಡಿದ್ದಾರೆ ಆದ್ದರಿಂದ ಆದಷ್ಟು ಶೀಘ್ರ ಜಿಲ್ಲಾಧಿಕಾರಿಗಳು ಗೊವಾ ಮತ್ತು ಮಹಾರಾಷ್ಟ್ರದಲ್ಲಿ ವಾಸವಾಗಿರುವ ಕೂಲಿ ಕಾಮರ್ಿಕರನ್ನು ಕರೆ ತರಲು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts