More

    ಸಿಲಿಕಾನ್​ ಸಿಟಿಯ ಮೂವರಿಗೆ ರೂಪಾಂತರಿ ಮಾರಿ: ಅಪಾರ್ಟ್​ಮೆಂಟ್​ನಲ್ಲೇ 35 ಮಂದಿ ಕ್ವಾರಂಟೈನ್​!

    ಬೆಂಗಳೂರು: ರೂಪಾಂತರಿ ಕರೊನಾ ವೈರಸ್​ ಸಿಲಿಕಾನ್​ ಸಿಟಿ ಬೆಂಗಳೂರಿಗೂ ಕಾಲಿಟ್ಟಿದ್ದು, ಜನರನ್ನು ಸಾಕಷ್ಟು ಆತಂಕಕ್ಕೀಡುಮಾಡಿದೆ. ನಗರದ ಮೂವರಿಗೆ ಮಾರಕ ವೈರಸ್​ ಅಂಟಿರುವುದರಿಂದ ಜನಸಾಮಾನ್ಯರು ಬಹಳ ಎಚ್ಚರಿಕೆ ವಹಿಸಬೇಕಾಗಿದೆ.

    ಡಿಸೆಂಬರ್ 19ರಂದು ಬ್ರಿಟನ್​ನಿಂದ ಬೆಂಗಳೂರಿಗೆ ಬಂದಿದ್ದ ಉತ್ತರಹಳ್ಳಿಯ ವಸಂತಪುರದ ತಾಯಿ-ಮಗುವಿಗೆ ರೂಪಾಂತರಿ ವೈರಸ್​ ತಗುಲಿದೆ. ತಾಯಿ-ಮಗು ಶ್ರೀ ಸಾಯಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಇದೀಗ ಅಪಾರ್ಟ್‌ಮೆಂಟ್​ನಲ್ಲಿ ವಾಸವಿರುವ ಜನರನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡುವ ಪ್ರಯತ್ನ ನಡೆದಿದೆ.

    ಇದನ್ನೂ ಓದಿ: ಸಂಬಳ ಕೊಡುತ್ತೇನೆಂದಾಕೆ ವಿಚ್ಛೇದನದ ಬೆದರಿಕೆ ಹಾಕುತ್ತಿದ್ದಾಳೆ: ಪತ್ನಿಯ ಆಸ್ತಿಯಲ್ಲಿ ಪಾಲು ಸಿಗುವುದೆ?

    ಆದರೆ, ಆಸ್ಪತ್ರೆಗೆ ಸ್ಥಳಾಂತರವಾಗಲು ಅಪಾರ್ಟ್‌ಮೆಂಟ್ ‌ನಿವಾಸಿಗಳು ನಕಾರ ಮಾಡುತ್ತಿದ್ದಾರೆ. ಅಲ್ಲದೆ, ಆರೋಗ್ಯ ಇಲಾಖೆ ಸಿಬ್ಬಂದಿ ವಿರುದ್ಧ ಅಸಮಾಧಾನ ಹೊರಹಾಕಿರುವ ನಿವಾಸಿಗಳು ನಮ್ಮನ್ನೆಲ್ಲ ಜನರು ವಿಚಿತ್ರವಾಗಿ ನೋಡ್ತಿದ್ದಾರೆ. ತುಂಬಾ ಕಿರುಕುಳ ಆಗುತ್ತಿದೆ. ನಾವು ಎಲ್ಲಿಗೂ ಬರುವುದಿಲ್ಲ. ಇಲ್ಲೇ ಪ್ರತ್ಯೇಕವಾಗಿ ಇರ್ತೀವಿ, ಬಿಲ್ಡಿಂಗ್ ಸೀಲ್ ಡೌನ್ ಮಾಡಿ ಎಂದು ದಿಗ್ವಿಜಯ ನ್ಯೂಸ್​ ಜತೆ ಅಳಲು ತೋಡಿಕೊಂಡಿದ್ದಾರೆ.

    ಸದ್ಯ ಅಪಾರ್ಟ್‌ಮೆಂಟ್‌ನಲ್ಲೇ ಕ್ವಾರಂಟೈನ್‌ಗೆ ಬಿಬಿಎಂಪಿ ನಿರ್ಧಾರ ಮಾಡಿದೆ. ನಿವಾಸಿಗಳಿಂದ ವಿರೋಧ ವ್ಯಕ್ತವಾದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ. ಯಾವುದೇ ಕಾರಣಕ್ಕೂ ಅಪಾರ್ಟ್​ಮೆಂಟ್​ ಬಿಟ್ಟು ಬರುವುದಿಲ್ಲವೆಂದು ನಿವಾಸಿಗಳು ಪಟ್ಟು ಹಿಡಿದಿದ್ದಾರೆ. ಹೀಗಾಗಿ 35 ಮಂದಿ ವಾಸವಿರುವ ಶ್ರೀ ಸಾಯಿ ಅಪಾರ್ಟ್‌ಮೆಂಟ್‌ನಲ್ಲೇ ಎಲ್ಲರಿಗೂ ಕ್ವಾರಂಟೈನ್ ಮಾಡಲಾಗಿದ್ದು, ಇದರ ಜತೆಗೆ ಅಪಾರ್ಟ್​ಮೆಂಟ್​ ಏರಿಯಾವನ್ನು ಸೀಲ್​ಡೌನ್​ ಸಹ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: VIDEO: ಬಾಯ್​ಫ್ರೆಂಡ್​ ಜತೆ ಆನಂದದಲ್ಲಿ ಮೈಮರೆತಳು- ಹಿಂದೆ ಬೆಂಕಿ ಇದದ್ದೇ ತಿಳಿಯಲಿಲ್ಲ!

    ಬ್ರಿಟನ್ ವೈರಾಣು ಸೋಂಕು ತಾಯಿ, ಮಗು ಮತ್ತೊಬ್ಬ ವ್ಯಕ್ತಿಗೆ ದೃಢ ಅಂದ್ರು ಆರೋಗ್ಯ ಸಚಿವ

    ಕಾಫಿ ಡೇ ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣವನ್ನು ಎಚ್​ಡಿಕೆ ನೆನಪಿಸಿಕೊಂಡದ್ದೇಕೆ?

    ಸಭಾಪತಿ ಸ್ಥಾನದಲ್ಲಿ ಕೂರಿಸುವ ಮೊದಲು ಯೋಚನೆ ಮಾಡಬೇಕಿತ್ತು- ವಿಪಕ್ಷ ನಾಯಕ ಎಸ್​.ಆರ್.ಪಾಟೀಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts