More

    ಸಭಾಪತಿ ಸ್ಥಾನದಲ್ಲಿ ಕೂರಿಸುವ ಮೊದಲು ಯೋಚನೆ ಮಾಡಬೇಕಿತ್ತು- ವಿಪಕ್ಷ ನಾಯಕ ಎಸ್​.ಆರ್.ಪಾಟೀಲ

    ಬಾಗಲಕೋಟೆ: ವಿಧಾನಪರಿಷತ್ತಿನ ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಪರಿಷತ್ತಿನ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಅವರು ವಿಧಾನಪರಿಷತ್ತಿನಲ್ಲಿ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ಉಪಸಭಾಪತಿಯವರ ಮೇಲೆ ಕೈ ಮಾಡಿ ಅವರನ್ನು ಪೀಠದಿಂದ ಬಲವಂತವಾಗಿ ಕೆಳಕ್ಕೆಳೆದೊಯ್ದ ಕಾಂಗ್ರೆಸ್ ಸದಸ್ಯರ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಎಸ್.ಆರ್.ಪಾಟೀಲರು ಹೇಳಿದ್ದಿಷ್ಟು – ಸಭಾಪತಿ ಸ್ಥಾನದಲ್ಲಿ ಉಪಸಭಾಪತಿಯವರನ್ನು ಕೂರಿಸುವ ಮೊದಲು ಆ ಕೆಲಸ ಮಾಡಿದವರು ಯೋಚನೆ ಮಾಡಬೇಕಾಗಿತ್ತು. ಆ ರೀತಿ ಮಾಡಿದವರು ಈಗ ಆತ್ಮಶೋಧನೆ ಮಾಡಿಕೊಳ್ಳಬೇಕಾಗಿದೆ. ಆತ್ಮಹತ್ಯೆಗೆ ನಿಜವಾದ ಕಾರಣ ಪರಿಷತ್​ ಗಲಾಟೇನಾ ಎಂಬುದನ್ನೂ ಪರಿಶೀಲಿಸಬೇಕಾಗಿದೆ.

    ಇದನ್ನೂ ಓದಿ: ಶಾಕಿಂಗ್ ನ್ಯೂಸ್ ! ವಿಧಾನಪರಿಷತ್ ಉಪಸಭಾಪತಿ ಎಸ್​.ಎಲ್​.ಧರ್ಮೇಗೌಡ ಆತ್ಮಹತ್ಯೆ..

    ಧರ್ಮೇಗೌಡರ ಮುಗ್ದತೆಯನ್ನು ಯಾರು ದುರುಪಯೋಗ ಮಾಡುದವ್ರು ಆತ್ಮಶೋಧನೆ ಮಾಡಿಕೊಳ್ಳಬೇಕು. ಪ್ರಚೋದನೆ ಮಾಡಿದವ್ರೆ ಆತ್ಮಹತ್ಯೆಗೆ ಕಾರಣವಾ ಎಂಬುದೀಗ ಪ್ರಶ್ನೆ. ಸಭಾಪತಿ ಇದ್ದಾಗಲೂ ಆ ಸ್ಥಾನದಲ್ಲಿ ಕೂರೋದು ತಪ್ಪು. ಉಪಸಭಾಪತಿಯನ್ನು ಅನಧಿಕೃತವಾಗಿ ಸಭಾಪತಿ ಕುರ್ಚಿಯಲ್ಲಿ ಕೂರಿಸುವ ಮೂಲಕ ಮುಗ್ದ ರಾಜಕಾರಣಿಯನ್ನು ತಪ್ಪು ದಾರಿಗೆ ಎಳೆದ್ರು. ಪ್ರಜಾಪ್ರಭುತ್ವ ಮೌಲ್ಯವನ್ನು ಗಾಳಿಗೆ ತೂರಿದ ಬಗ್ಗೆ ಸೂಕ್ತ ತನಿಖೆ ಆಗಲಿ. ಎಳೆದಾಟಕ್ಕೆ ಮನನೊಂದು ಧರ್ಮೇಗೌಡ ಆತ್ಮಹತ್ಯೆಗೆ ಕಾರಣಾನಾ? ಎಂಬುದು ಕೂಡ ಒಂದು ಪ್ರಶ್ನೆ. ಈ ವಿಚಾರ ದೇಶದ ಕಾನೂನಿಗೆ ಬಿಟ್ಟ ವಿಚಾರವಾಗಿದೆ. ಕಾನೂನು ಪ್ರಕಾರ ತನಿಖೆ ಆದಾಗ ಯಾರು ಕಾರಣ ಅನ್ನೋದು ಗೊತ್ತಾಗುತ್ತೆ. ಇದೇ ಕಾರಣ ಅನ್ನೋದಾದರೆ ಸಭಾಪತಿ ಪೀಠದ ಮೇಲೆ ಕೂರಿಸಿದವರೇ ನನ್ನ ದೃಷ್ಠಿಯಲ್ಲಿ ತಪ್ಪಿತಸ್ಥರು.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಕಾಫಿ ಡೇ ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣವನ್ನು ಎಚ್​ಡಿಕೆ ನೆನಪಿಸಿಕೊಂಡದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts