More

    ಜ್ಞಾನಿಗಳಾಗಲು ವಿವೇಕಾನಂದರ ಮಾರ್ಗ ಅನುಸರಿಸಿ

    ಸಿಂಧನೂರು: ಯುವ ಜನತೆ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಪಾಲಿಸಿದಾಗ ಜೀವನ ಸಾರ್ಥಕವಾಗಲಿದೆಂದು ಧಾರವಾಡದ ವಂದೇ ಮಾತರಂ ಗುರುಕುಲ ಸಂಸ್ಥಾಪಕ ಮಧುಸೂಧನ ಹೇಳಿದರು.

    ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಪಾಲಿಸಿ

    ತಾಲೂಕಿನ ತುರ್ವಿಹಾಳ ಸರ್ಕಾರಿ ಪ್ರೌಢ ಶಾಲೆ, ಪಪೂ ಕಾಲೇಜ್ ಆವರಣದಲ್ಲಿ ಬುಧವಾರ ರಾಮಕೃಷ್ಣ ವಿವೇಕಾನಂದ ಆಶ್ರಮದಿಂದ ಆಯೋಜಿಸಿದ್ದ ವಿವೇಕ ಸಪ್ತಾಹ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಕೂಡಾ ಸ್ವಾಮಿ ವಿವೇಕಾನಂದರ ತತ್ವ ಮತ್ತು ಸಿದ್ಧಾಂತಗಳನ್ನು ಪಾಲಿಸಿ ಪ್ರಖ್ಯಾತಿಯಾಗಿದ್ದಾರೆ. ವೀರ ಸನ್ಯಾಸಿ ವಿವೇಕಾನಂದರು ಎಲ್ಲ ಕಾಲಕ್ಕೂ ಪ್ರಸ್ತುತ. ನಾವು ಜ್ಞಾನಿಗಳಾಗಬೇಕಾದರೆ ಅವರ ಮಾರ್ಗ ಅನುಸರಿಸಬೇಕು. ನಾವು ಭಾರತದ ಬಗ್ಗೆ ತಿಳಿಯಬೇಕಾದರೆ ಮೊದಲಿಗೆ ವಿವೇಕಾನಂದರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು ಎಂದರು.

    ಇದನ್ನೂ ಓದಿ: ರಾಜ್ಯದ 500 ದೇಗುಲಗಳಲ್ಲಿ ವಸ್ತ್ರಸಂಹಿತೆಗೆ ಉಪಕ್ರಮ

    ಆಶ್ರಮದ ಅಧ್ಯಕ್ಷ ಸ್ವಾಮಿ ಸದಾನಂದ ಮಹಾರಾಜ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಛಲ ಇರಬೇಕು. ಭಯ ಇರಬಾರದು. ಸಿಂಹದಂತೆ ಧೈರ್ಯ ಇರಬೇಕು. ಇಂದಿನ ಯುವಕರು ನಿರ್ದಿಷ್ಟ ಗುರಿ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಜೀವನ ರೂಪಿಸಿಕೊಳ್ಳಬೇಕು. ಸಮಯದ ಮೌಲ್ಯ ತಿಳಿಯಬೇಕು ಎಂದರು. ಪಪೂ ಕಾಲೇಜ್ ಪ್ರಾಚಾರ್ಯ ಮಲ್ಲಪ್ಪ, ವಿರೂಪಾಕ್ಷಪ್ಪ ಗಚ್ಚಿನಮನಿ, ಮುಖ್ಯಶಿಕ್ಷಕ ದೊಡ್ಡ ಬಸಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts