More

    ಜೀರ್ಣಶಕ್ತಿ ಹೆಚ್ಚಿಸಿ ಉಸಿರಾಟ ಸುಗಮವಾಗಿಸುತ್ತೆ, ವಜ್ರಾಸನ!

    ನಮ್ಮ ದೇಹವನ್ನು ವಜ್ರದಂತೆ ಕಾಪಾಡುವ, ಜೀರ್ಣಶಕ್ತಿಯನ್ನು ಹೆಚ್ಚಿಸುವ ಯೋಗಾಸನವೇ ವಜ್ರಾಸನ. ಮೊಣಕಾಲು ನೋವು, ಪಾದಗಳ ಗಂಟಿನ ನೋವು, ಬೆನ್ನು ಮತ್ತು ಕಾಲಿನ ಸೆಳೆತ ಮುಂತಾದ ಸಮಸ್ಯೆಗಳನ್ನು ನೀಗಿಸಲು ಈ ಆಸನ ಸಹಾಯ ಮಾಡುತ್ತದೆ.

    ಪಾದಗಳ ಮಣಿಗಂಟುಗಳ ನೋವು, ಮಂಡಿ ನೋವು, ಬೆನ್ನು ನೋವು ಅಥವಾ ಸೆಳೆತ ನಿಯಂತ್ರಣಕ್ಕೆ ವಜ್ರಾಸನದ ಅಭ್ಯಾಸ ಉಪಯುಕ್ತ. ಬೆನ್ನು ಮತ್ತು ಕೈಕಾಲುಗಳಿಗೆ ಲಘುತ್ವ ಉಂಟಾಗಿ, ಬೆನ್ನು ನೇರವಾಗಿ, ಉಸಿರಾಟ ನಿರಾಯಾಸವಾಗಿ ಆಗುತ್ತದೆ. ಜೀರ್ಣಶಕ್ತಿ ಹೆಚ್ಚಿಸುವುದಕ್ಕೆ ಈ ಆಸನ ಸಹಕಾರಿ. ಧ್ಯಾನ ಮತ್ತು ಪ್ರಾಣಾಯಾಮ ಮಾಡುವುದಕ್ಕೆ ಹೇಳಿಮಾಡಿಸಿದಂತಹ ಆಸನ.

    ಇದನ್ನೂ ಓದಿ: ಲಾಲ್​ಬಾಗ್​ನಲ್ಲಿ ಈ ಬಾರಿಯೂ ಫಲಪುಷ್ಪ ಪ್ರದರ್ಶನ ರದ್ದು

    ಮಾಡುವ ವಿಧಾನ : ಮೊಣಕಾಲ ಮೇಲೆ ಕುಳಿತುಕೊಂಡು, ಉಸಿರು ಬಿಡುತ್ತಾ, ನಿಧಾನವಾಗಿ ಹಿಂದಕ್ಕೆ ಕುಳಿತುಕೊಳ್ಳುವುದು. ಬೆನ್ನು, ಕುತ್ತಿಗೆ ನೇರವಾಗಿ ಇಟ್ಟುಕೊಂಡು, ದೇಹವನ್ನು ಸಡಿಲಗೊಳಿಸಬೇಕು. ಕಾಲುಗಳ ಹೆಬ್ಬೆರಳು ಒಂದಕ್ಕೊಂದು ತಾಗುವಂತಿರಬೇಕು. ಕೈಗಳಲ್ಲಿ ಚಿನ್ಮುದ್ರೆ ಧರಿಸಿ ಸಹಜ ಉಸಿರಾಟ ನಡೆಸಬೇಕು. ಈ ರೀತಿ ವಜ್ರಾಸನದ ಭಂಗಿಯಲ್ಲಿ ಸ್ವಲ್ಪ ಹೊತ್ತು ಕೂತ ನಂತರ, ಕಾಲುಗಳನ್ನು ಚಾಚಿ ರಿಲ್ಯಾಕ್ಸ್​ ಮಾಡಿಕೊಳ್ಳಬೇಕು.

    ದೇಹಸೌಂದರ್ಯ ಹೆಚ್ಚಿಸಿ ಮನಸ್ಸಿಗೆ ಏಕಾಗ್ರತೆ ನೀಡುತ್ತೆ, ಈ ಸುಲಭ ಯೋಗಾಸನ!

    3ನೇ ಅಲೆ ಬರುತ್ತಿದೆ… ಮೈಮರೆತು ಜನಜಾತ್ರೆ ಮಾಡಬೇಡಿ: ಐಎಂಎ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts