More

    ಕಡೂರಿನಲ್ಲಿ ಆ.17ರಿಂದ ರಾಜ್ಯಮಟ್ಟದ ಸ್ಪರ್ಧೆ

    ಕಡೂರು: ಯೋಗವೂ ಕ್ರೀಡೆಯ ಭಾಗವಾಗಿ ಸೇರ್ಪಡೆಗೊಂಡಿರುವುದು ಕ್ರೀಡಾಕೂಟಗಳಿಗೆ ಮತ್ತಷ್ಟು ಮೆರುಗು ತಂದಿದೆ ಎಂದು ಏಷಿಯನ್ ಯೋಗಾಸನ ಸಂಸ್ಥೆ ಉಪಾಧ್ಯಕ್ಷ ಡಾ. ಎಂ.ನಿರಂಜನ್ ಹೇಳಿದರು.

    ಮಚ್ಚೇರಿ ಬೆಂಕಿಲಕ್ಷ್ಮಯ್ಯ ಸಭಾಂಗಣದಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯಿಂದ ಆಯೋಜಿಸಿದ್ದ ಮೂರು ದಿನಗಳ ರಾಜ್ಯ ನಿರ್ಣಾಯಕರ ತರಬೇತಿ ಶಿಬಿರ ಸಮಾರೋಪದಲ್ಲಿ ಮಾತನಾಡಿ, ಮೂರು ದಿನಗಳಲ್ಲಿ ರಾಜ್ಯದ 52 ಯೋಗಾಸನ ನಿರ್ಣಾಯಕರಿಗೆ ತರಬೇತಿ ನೀಡಲಾಗಿದೆ. ಆ.17 ಮತ್ತು 18 ರಂದು ಕಡೂರಿನಲ್ಲಿ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
    ರಾಜ್ಯ ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಅವಕಾಶ ಪಡೆದುಕೊಳ್ಳಲಿದ್ದಾರೆ. 2036ರಲ್ಲಿ ಭಾರತದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಒಲಿಂಪಿಕ್‌ನಲ್ಲಿ ಯೋಗಾಸನವನ್ನು ಕ್ರೀಡೆಯಾಗಿ ಸೇರ್ಪಡೆಗೊಳಿಸಿರುವುದು ಹೆಮ್ಮೆಯ ಸಂಗತಿ ಎಂದರು.
    ಯೋಗ ಕ್ಷೇತ್ರಕ್ಕೆ ಅನೇಕ ಸಾಧಕರು ಕೊಡುಗೆಗಳನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ನಿರ್ಣಾಯಕರಿಗೂ ವಿಶೇಷ ತರಬೇತಿ ನೀಡಲಾಗಿದೆ. ಯೋಗವನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಕಾರ್ಯ ಸಂಸ್ಥೆ ನಿರಂತರವಾಗಿ ಮಾಡಲಿದೆ ಎಂದು ಹೇಳಿದರು.
    ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಯೋಗದಿಂದ ದೇಹ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ ಎಂದರು.
    ಯೋಗಾಸನ ಕ್ರೀಡಾ ಸಂಸ್ಥೆ ಜಿಲ್ಲಾಧ್ಯಕ್ಷ ಬೆಂಕಿ ಶೇಖರಪ್ಪ ಮಾತನಾಡಿ, ಯೋಗ ಸ್ಪರ್ಧೆಗಳಲ್ಲಿ ಸೂಕ್ತ ತೀರ್ಪು ನೀಡಲು ತರಬೇತಿ ಮುಖ್ಯ. ಇಲ್ಲಿನ ತರಬೇತಿಯಿಂದಾಗಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ನಿರ್ಣಾಯಕರಾಗಿ ಭಾಗವಹಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
    ಮೂರು ದಿನಗಳ ತರಬೇತಿ ಪಡೆದ ನಿರ್ಣಾಯಕರಲ್ಲಿ ಹೆಚ್ಚು ಅಂಕ ಪಡೆದ ಭರತ್(ರಾಮನಗರ), ದಿವ್ಯಾದೇವಿ ಮತ್ತು ಹರೀಶ್‌ಕುಮಾರ್ (ಬೆಂಗಳೂರು) ಅವರಿಗೆ ಪ್ರಶಸ್ತಿ ನೀಡಲಾಯಿತು. ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರದ ಯೋಗಪಟುಗಳಾದ ಪೃಥ್ವಿ ಮತ್ತು ವಿಶ್ಮಿತಾ ಯೋಗ ಪ್ರದರ್ಶನ ನೀಡಿದರು.
    ಯೋಗಾಸನ ಕ್ರೀಡಾ ಸಂಸ್ಥೆ ಖಜಾಂಚಿ ಜಯಪ್ರಕಾಶ್, ಜಿಲ್ಲಾ ಉಪಾಧ್ಯಕ್ಷೆ ನಿರ್ಮಲಾ ಎನ್. ಬಾಳಿಗಾ, ಸ್ನೇಹಮಯಿ ವಿವೇಕಾನಂದ ಕೇಂದ್ರದ ನವೀನ್, ರಂಜಿತ್, ವಿಷ್ಣು, ಜ್ಯೋತಿ ಶರ್ಮಾ, ನಿವೇದಿತಾ, ಪರಶುರಾಮ್, ಕಸಾಪ ತಾಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ರಾಜ್ಯದ ವಿವಿಧ ಜಿಲ್ಲೆಗಳ ತರಬೇತುದಾರರು ಮತ್ತು ಯೋಗಪಟುಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts