More

    ವಚನ ಸಾಹಿತ್ಯದ ಕಣಜ ಅಕ್ಕಮಹಾದೇವಿ

    ಅಳವಂಡಿ: ಅಕ್ಕಮಹಾದೇವಿ ವಚನಗಳ ಮೂಲಕ ಆದ್ಯಾತ್ಮಿಕ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದ ಕನ್ನಡದ ಮೊದಲ ಕವಯಿತ್ರಿ ಎಂದು ಪಿಡಿಓ ಕೊಟ್ರಪ್ಪ ಅಂಗಡಿ ಹೇಳಿದರು.

    ಇದನ್ನೂ ಓದಿ: ವ್ಯಕ್ತಿ ಗೌರವ ಎತ್ತಿ ಹಿಡಿದ ವಚನ ಸಾಹಿತ್ಯ

    ಗ್ರಾಮ ಪಂಚಾಯತಿನಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಅಕ್ಕಮಹಾದೇವಿ ವಚನ ಸಾಹಿತ್ಯದ ಕಣಜ. ಅವರ ವಚನಗಳು ಇಂದಿನ ಸಮಾಜಕ್ಕೆ ಸ್ಪೂರ್ತಿದಾಯಕವಾಗಿವೆ.

    ಸೀಸಮುದಾಯಕ್ಕೆ ಹೊಸ ಚೈತನ್ಯ ತರುವಲ್ಲಿ ಅಕ್ಕನ ವಚನಗಳು ಸಹಾಯಕವಾಗಿವೆ. ಚಿಕ್ಕ ವಯಸ್ಸಿನಲ್ಲಿಯೇ ಸಕಲ ಸುಖಗಳನ್ನು ತ್ಯಜಿಸಿದ ಅಕ್ಕ ಸಾಕ್ಷಾತ್ ಶಿವನನ್ನು ಪತಿ ಎಂದು ಸ್ವೀಕರಿಸಿ ಲೌಕಿಕ ಜಗತ್ತನ್ನು ದಿಕ್ಕರಿಸಿ ಕೇಶಾಂಬರೆಯಾಗಿದ್ದರು ಎಂದರು.

    ಸಿಬ್ಬಂದಿಗಳಾದ ಶಿವಮೂರ್ತಿ, ದೇವೆಂದ್ರರಡ್ಡಿ, ದಾವಲಸಾಬ, ಏಕಯ್ಯ, ಹನುಮಂತ ಆವಿನ, ಮಾರುತಿ ಮಾಕಾಳಿ, ಪ್ರಮುಖರಾದ ಹನುಮಂತ, ದೇವಪ್ಪ, ಸಂಜೀವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts