More

    ಸೆಂಟ್ರಲ್​ ಜೈಲ್​ನಲ್ಲೂ ಲಸಿಕೆ ಅಭಿಯಾನ; ಕೈದಿಗಳಿಗೆ ವ್ಯಾಕ್ಸಿನೇಷನ್​ ಶುರು..

    ಬೆಂಗಳೂರು: ಕರೊನಾ ಮೊದಲನೆ ಅಲೆಯ ಸಂದರ್ಭದಲ್ಲಿ ಕೇಂದ್ರ ಕಾರಾಗೃಹದಲ್ಲೂ ಆತಂಕ ಉಂಟಾಗಿ ಎಷ್ಟೋ ಜನರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದ ಪ್ರಸಂಗವೂ ನಡೆದಿತ್ತು. ಇದೀಗ ಎರಡನೇ ಅಲೆಯಲ್ಲಿ ಕಾರಾಗೃಹವನ್ನೂ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಅಲ್ಲಿಯೂ ಲಸಿಕೆ ಅಭಿಯಾನ ಆರಂಭಿಸಿದೆ.

    ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಇಂದು ಕೈದಿಗಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ನ್ಯಾಯಾಧೀಶರು ಹಾಗೂ ಜೈಲಧಿಕಾರಿಗಳು ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

    ಪರಪ್ಪನ‌ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸುಮಾರು 4600 ಖೈದಿಗಳಿದ್ದಾರೆ. ಆ ಪೈಕಿ ಈಗಾಗಲೇ 45 ವರ್ಷ ಮೇಲ್ಪಟ್ಟ 580 ಕೈದಿಗಳಿಗೆ ಲಸಿಕೆ ನೀಡಲಾಗಿದೆ. 4120 ವಿಚಾರಣಾಧೀನ ಮತ್ತು ಸಜಾಬಂಧಿಗಳಿಗೆ ಇಂದು ಲಸಿಕೆ ನೀಡಲು ಆರಂಭಿಸಿದ್ದು, ಸದ್ಯ 18ರಿಂದ 44ರ ನಡುವಿನ ವಯೋಮಾನದವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ.

    ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

    ಆಪರೇಷನ್​ ಕೋಬ್ರಾ: ಬಾವಿಗೆ ಬಿದ್ದ ನಾಗರಹಾವನ್ನು ರಕ್ಷಿಸಿದ ಜನರು; ಬುಸುಗುಟ್ಟುತ್ತಲೇ ಮೇಲೆ ಬಂದ ಸರ್ಪ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts