More

    ರಾಸುಗಳಿಗೆ ತಪ್ಪದೆ ಲಸಿಕೆ ಹಾಕಿಸಿ

    ಹಿರೇಕೆರೂರ: ಮುಂಜಾಗ್ರತೆ ಕ್ರಮವಾಗಿ ಎಲ್ಲ ರಾಸುಗಳಿಗೆ ವರ್ಷಕ್ಕೆ ಒಂದು ಬಾರಿ ತಪ್ಪದೆ ಕಾಲುಬಾಯಿ ಬೇನೆ ಲಸಿಕೆ ಹಾಕಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

    ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವತಿಯಿಂದ 4ನೇ ಸುತ್ತಿನ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ತಾಲೂಕಿನ ರಾಸುಗಳಿಗೆ ಕಾಲುಬಾಯಿ ಬೇನೆ ಲಸಿಕೆ ಹಾಕುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

    ತಾಲೂಕಿನಲ್ಲಿ ಒಟ್ಟು 25402 ಜಾನುವಾರುಗಳಿದ್ದು, ಅವುಗಳಿಗೆ ಲಸಿಕೆ ಹಾಕಲು 13 ತಂಡ ರಚಿಸಲಾಗಿದೆ. ಒಟ್ಟು 64 ಗ್ರಾಮ ಮತ್ತು ಪಟ್ಟಣದಲ್ಲಿ ರೈತರ ಮನೆ ಬಾಗಿಲಿಗೆ ಹೋಗಿ ಇಂದಿನಿಂದ ಅ. 25 ರವರೆಗೆ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಕಾಲು ಬಾಯಿ ಲಸಿಕೆಯನ್ನು ಉಚಿತವಾಗಿ ಹಾಕಲಾಗುತ್ತಿದೆ. ರೈತರು ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಬೇಕು ಎಂದರು.

    ಪಶು ವೈದ್ಯಾಧಿಕಾರಿ ಡಾ.ಕಿರಣ ಎಲ್., ರಟ್ಟಿಹಳ್ಳಿ ಸಹಾಯಕ ಪಶುವೈದ್ಯಾಧಿಕಾರಿ ಡಾ.ರಾಜಶೇಖರ, ಜಾನುವಾರು ಅಧಿಕಾರಿ ಶಫಿವುಲ್ಲಾ, ಸಿದ್ದಲಿಂಗೇಶ ತಿಪ್ಪಶೆಟ್ಟಿ ಹಾಗೂ ರೈತರು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts