More

    ಗುರು ಇಲ್ಲದೆ ಗುರಿ ಸಾಧಿಸುವುದು ಅಸಾಧ್ಯ

    ಬೆಳಗಾವಿ: ಕಲಿಕೆ ಕಠಿಣವಾಗಲು ನಮ್ಮ ಭಾವನೆಗಳೇ ಕಾರಣ. ಗುರು ಇಲ್ಲದೆ ನಿರ್ದಿಷ್ಟ ಗುರಿ ಸಾಧಿಸಲು ಸಾಧ್ಯವಿಲ್ಲ ಎಂದು ನಿವೃತ್ತ ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ ಹೇಳಿದರು.

    ನಗರದ ಕೆಎಲ್ಇ ಸಂಸ್ಥೆಯ ಆರ್‌ಎಲ್ಎಸ್ ಕಾಲೇಜಿನಲ್ಲಿ 1983ನೇ ಬ್ಯಾಚ್‌ನ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರು ವಂದನಾ ಕಾರ್ಯಕ್ರಮದಲ್ಲಿ ಗುರುಗಳನ್ನು ಸನ್ಮಾನಿಸಿ ಮಾತನಾಡಿದರು.

    ಈ ಸಂಸ್ಥೆಯ ಗುರುಬಳಗ, ಪರಿಸರ, ಗ್ರಂಥಾಲಯ, ಪ್ರಯೋಗ ಶಾಲೆ, ಆಟದ ಮೈದಾನ, ಹೂದೋಟಗಳೆಲ್ಲ ನನಗೆ ಒಂದೊಂದು ಹೊಸ ಜೀವನಾನುಭವ ನೀಡಿವೆ. ಭೌತಶಾಸ್ತ್ರ ಬದುಕಿನ ಕೌಶಲ ಕಲಿಸಿದೆ ಎಂದರು. ಹೂಲಿ ಚನಬಸಪ್ಪ, ಚಿದಾನಂದ ಶೆಟ್ಟೆಣ್ಣವರ, ಡಿ.ಎಸ್.ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯೆ ಜ್ಯೋತಿ ಕವಳೇಕರ ಮಾತನಾಡಿದರು. ಪ್ರೊ. ಬಿ.ಎಲ್.ಕೊಳ್ಳಿ, ಪ್ರೊ. ಎಸ್.ಬಿ.ಮಂಡ್ರೋಳಿ, ಪ್ರೊ.ಐ.ಎ.ನರಗುಂದ, ಪ್ರೊ. ಸಿ.ಎಸ್.ಬೋರಗಲ್ಲಿ, ಪ್ರೊ. ಬಿ.ಐ. ನೇಗಿನಾಳ, ಪ್ರೊ. ಆರ್.ಕೆ.ಪಾಟೀಲ, ಪ್ರೊ. ಎಸ್.ಪಿ.ಕುಲಕರ್ಣಿ, ಮನೋಜ ಚಿಂಚವಾಡ, ಹಳೇ ವಿದ್ಯಾರ್ಥಿಗಳಾದ ಮಂಜು ಶಿಂಧೆ, ಬಳವಂತ ಕುಲಕಣಿ, ಸುಧಾ, ಭಾರತಿ ಕುಲಕರ್ಣಿ, ಪದ್ಮಜಾ ಸೇಠ್, ಸುನೀಲ ಜಿರಾಳೆ, ಸನ್ಮತಿ ಮಿರ್ಜಿ, ಜಗದೀಶ ಮಠದ, ಮಲ್ಲೇಶ ರೊಟ್ಟಿ ಇದ್ದರು. ಅಗಲಿದ ಗುರುವೃಂದ ಮತ್ತು ಸ್ನೇಹಿತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನ ಆಚರಿಸಲಾಯಿತು. ನಿವೃತ್ತ ಡಿಎಫ್‌ಒ ಅಶೋಕ ಪಾಟೀಲ ಸ್ವಾಗತಿಸಿದರು. ಡಾ.ಡಿ.ಎನ್. ಮಿಸಾಳೆ ನಿರೂಪಿಸಿದರು. ವೆಂಕಟೇಶ ದೇಶಪಾಂಡೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts