More

    ಪರೀಕ್ಷೆಗಳಲ್ಲಿ ಸೋಲು-ಗೆಲುವು ಲೆಕ್ಕಿಸದಿರಿ

    ಅಳವಂಡಿ: ಸ್ಪರ್ದಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸುವದರಿಂದ ಜ್ಞಾನ ವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನವಾಗುತ್ತದೆ. ಜೀವನದಲ್ಲಿ ನಿರ್ದಿಷ್ಟ ಗುರಿ ಮುಟ್ಟಲು ಶ್ರದ್ಧೆ ಹಾಗೂ ಪ್ರಾಮಾಣಿಕವಾಗಿ ಅಭ್ಯಾಸ ಮಾಡಬೇಕು ಎಂದು ಶಿಕ್ಷಕ ಎಂ.ಎಸ್.ಕೊಪ್ಪಳ ಹೇಳಿದರು.

    ಇದನ್ನೂ ಓದಿ:ಕಿವೀಸ್‌ಗೆ ಸೋಲುಣಿಸಿದ ಕಿರಿಯರು: ಶಿಖರ್ ಧವನ್ ದಾಖಲೆ ಸರಿಗಟ್ಟಿದ ಸಫ್ರಾರ್ಜ್ ಖಾನ್ ಸಹೋದರ

    ಇಲ್ಲಿನ ಶ್ರೀಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದ ಪ್ರೌಢಶಾಲಾ ವಿಭಾಗದಲ್ಲಿ 2023-24ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದ ಅಂಗವಾಗಿ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

    ವಿದ್ಯಾರ್ಥಿಗಳು ಪ್ರತಿ ದಿನವನ್ನು ಜ್ಞಾನ ವೃದ್ಧಿಗಾಗಿ ಸದ್ಭಳಕೆ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಪ್ಪದೇ ಭಾಗವಹಿಸಿ. ಸೋಲು-ಗೆಲುವು ಲೆಕ್ಕಿಸದೆ ಸಮರ್ಥವಾಗಿ ಉತ್ತರಿಸಿ ಯಶಸ್ಸು ಖಂಡಿತವಾಗಿ ಸಿಗುತ್ತದೆ. ಓದಿನ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಪರೀಕ್ಷೆಗಳು ಯಶಸ್ಸಿನ ದಾರಿ ತೋರಿಸಲಿವೆ ಎಂದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    ಹಿರಿಯ ಶಿಕ್ಷಕ ವಿ.ಎಚ್.ಪುಲೇಶಿ, ಶಿಕ್ಷಕರಾದ ಹನುಮಂತ ಲಮಾಣಿ, ಅಂಬರೀಶ ಬಚನಹಳ್ಳಿ, ಪರಶುರಾಮ ಕಟ್ಟಿಮನಿ, ವಾಸವಾಂಬ ಸರ್ವಶೆಟ್ಟಿ, ಸಂಪಕ್ಕ ಗೊಲ್ಲರ, ಸುಮಿತ್ರ ಜ್ಯೋತಿಮಠ, ನೀಲಪ್ಪ ಹಕ್ಕಂಡಿ, ಮಹೇಶ ಮಾಳೆಕೊಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts