More

    ಕಿವೀಸ್‌ಗೆ ಸೋಲುಣಿಸಿದ ಕಿರಿಯರು: ಶಿಖರ್ ಧವನ್ ದಾಖಲೆ ಸರಿಗಟ್ಟಿದ ಸಫ್ರಾರ್ಜ್ ಖಾನ್ ಸಹೋದರ

    ಬ್ಲೋಮಾಂಟೇನ್: ಉದಯೋನ್ಮುಖ ಆಟಗಾರ ಮುಶೀರ್ ಖಾನ್ (131 ರನ್, 126 ಎಸೆತ, 13 ಬೌಂಡರಿ, 3 ಸಿಕ್ಸರ್ ಹಾಗೂ 10ಕ್ಕೆ 2 ವಿಕೆಟ್) ಆಲ್ರೌಂಡರ್ ಪ್ರದರ್ಶನ ಹಾಗೂ ಸ್ಪಿನ್ನರ್ ಸೌಮಿ ಪಾಂಡೆ (19ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಐದು ಬಾರಿಯ ಚಾಂಪಿಯನ್ ಭಾರತ ತಂಡ 19 ವಯೋಮಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 214 ರನ್‌ಗಳಿಂದ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಉದಯ್ ಸಹಾರನ್ ಬಳಗ ಸೂಪರ್ ಸಿಕ್ಸ್‌ನ ಗ್ರೂಪ್-1ರಲ್ಲಿ ಶುಭಾರಂಭ ಕಂಡಿದ್ದು, ಒಟ್ಟು ಆರು ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.

    ಮಂಗಳವಾರ ನಡೆದ ಸೂಪರ್-6 ಹಂತದ ತನ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ, ಮುಶೀರ್ ಖಾನ್ ಹಾಗೂ ಆರಂಭಿಕ ಆದರ್ಶ್ ಸಿಂಗ್ (52 ರನ್, 58 ಎಸೆತ, 6 ಬೌಂಡರಿ) ಜತೆಯಾಟದ ಬಲದಿಂದ 8 ವಿಕೆಟ್‌ಗೆ 295 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಸೌಮಿ ಪಾಂಡೆ-ಮುಶೀರ್ ಸ್ಪಿನ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್, 28.1 ಓವರ್‌ಗಳಲ್ಲಿ 81 ರನ್‌ಗಳಿಗೆ ಸರ್ವಪತನ ಕಂಡು ಹೀನಾಯ ಸೋಲುಂಡಿತು.

    ಭಾರತ: 8 ವಿಕೆಟ್‌ಗೆ 295 (ಆದರ್ಶ್ 52, ಮುಶೀರ್ 131, ಉದಯ್ 34, ಅವಿನಾಶ್ 17, ಸಚಿನ್ 15, ಕ್ಲಾರ್ಕ್ 62ಕ್ಕೆ 4). ನ್ಯೂಜಿಲೆಂಡ್: 28.1 ಓವರ್‌ಗಳಲ್ಲಿ 81 (ಜೇಮ್ಸ್ 10, ಜಾಕ್ಸನ್ 19, ಕಮ್ಮಿಗ್ 16, ಅಲೆಕ್ಸ್ 12, ಸೌಮಿ ಪಾಂಡೆ 19ಕ್ಕೆ 4, 10ಕ್ಕೆ 2, ರಾಜ್ ಲಿಂಬಾನಿ 17ಕ್ಕೆ 2). ಪಂದ್ಯಶ್ರೇಷ್ಠ: ಮುಶೀರ್ ಖಾನ್.

    https://x.com/BCCI/status/1752342222413136055?s=20

    2: ಮುಶೀರ್ ಖಾನ್ 19 ವಯೋಮಿತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 2 ಶತಕ ಸಿಡಿಸಿದ ಶಿಖರ್ ಧವನ್ (2004) ದಾಖಲೆಯನ್ನು ಸರಿಗಟ್ಟಿದರು.

    ಭಾರತಕ್ಕೆ ಮುಂದಿನ ಪಂದ್ಯ
    ಯಾವಾಗ: ಶುಕ್ರವಾರ
    ಎದುರಾಳಿ: ನೇಪಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts