More

    ವಾಸ್ತವಾಂಶ ಮಾತನಾಡಿದರೆ ಒಳ್ಳೆಯದು: ಸಿದ್ದರಾಮಯ್ಯ ವಿರುದ್ಧ ವಿ. ಸೋಮಣ್ಣ ಟೀಕೆ

    ಮೈಸೂರು: ಸೋಮಣ್ಣ ಹೊರಗಿನವರು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸ್ವತಃ ವಿ ಸೋಮಣ್ಣ ಅವರೇ ಪ್ರತ್ಯುತ್ತರ ನೀಡಿದ್ದು, ವಾಸ್ತವಾಂಶ ಮಾತನಾಡಿದರೆ ಒಳ್ಳೆಯದು ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.

    ವರುಣ ಕ್ಷೇತ್ರದ ವಾಜಮಂಗಲ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ನಾನು ಹತ್ತಾರು ಚುನಾವಣೆಯನ್ನು ಮಾಡಿದ್ದೇನೆ. ಜನರ ಭಾವನೆ ಉತ್ಸಾಹವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತೀರ್ಮಾನ ಮಾಡಿದ್ದೇನೆ. ಬಿಜೆಪಿಗೆ ಈ ಬಾರಿ ಜನರು ಆಶೀರ್ವಾದ ಮಾಡುವ ನಂಬಿಕೆ ಇದೆ. ಸೋಮಣ್ಣ ಹೊರಗಿನವರು ಎನ್ನುವ ಸಿದ್ದರಾಮಯ್ಯ, ಬಾದಾಮಿಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿಲಿಲ್ವ. ಇದರ ಬಗ್ಗೆ ಅವರು ಮಾತನಾಡುವುದಿಲ್ಲ‌. ಅವರು ವಾಸ್ತವಾಂಶ ಮಾತನಾಡಿದರೆ ಒಳ್ಳೆಯದು ಎಂದರು.

    ಇದನ್ನೂ ಓದಿ: ಬೃಹತ್​ ಹಾರ ತಯಾರಕರಿಗೆ ಡಿಮಾಂಡಪ್ಪೋ ಡಿಮಾಂಡ್​; 10 ಸಾವಿರದಿಂದ 1 ಲಕ್ಷ ರೂ. ಬೆಲೆ

    ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ

    ವರುಣ ಕ್ಷೇತ್ರದಲ್ಲಿ ನನಗೆ 100 ಪಟ್ಟು ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ. ಜನರ ಪ್ರೀತಿ, ವಿಶ್ವಾಸ ಹಾಗೂ ಮಮಕಾರ ಇದೆ. ಚಾಮುಂಡೇಶ್ವರಿ ಆಶೀರ್ವಾದ ಹಾಗೂ ಮಹದೇಶ್ವರರ ಸಂದೇಶ ಇದೆ. ಜನ ಈ ಬಾರಿ ಆಶೀರ್ವಾದ ‌ಮಾಡುವ ನಂಬಿಕೆ ಜಾಸ್ತಿಯಾಗುತ್ತಿದೆ. ಯಾರು ಹೊರಗಿನವರು, ಒಳಗಿನವರು ಅನ್ನೋದಕ್ಕಿಂತ ಹೆಚ್ಚಾಗಿ ನಮ್ಮ ಕಾಲದಲ್ಲಿ ಏನು ಮಾಡಿದ್ಧಾರೆ ಎಂಬುಂದು ಮುಖ್ಯ ಎಂದು ಹೇಳಿದರು.

    ನಮ್ಮ ಇತಿಮಿತಿಯಲ್ಲಿ ಮಾತನಾಡಬೇಕು

    ಲಿಂಗಾಯತ ಸಿಎಂ ವಿಚಾರವಾಗಿ ನಾನು ಚರ್ಚೆ ಮಾಡಲ್ಲ. ನಮ್ಮ ವರಿಷ್ಠರು ಅದರ ಬಗ್ಗೆ ಮಾತನಾಡುತ್ತಾರೆ‌. ಒಂದು ಧರ್ಮವನ್ನು ಮತ್ತೊಂದು ಧರ್ಮಕ್ಕೆ ಹೋಲಿಕೆ ಮಾಡುವುದು ನಮ್ಮ ಕರ್ತವ್ಯ ಅಲ್ಲ. ರಾಜಕಾರಣಿಗಳು ನಮ್ಮ ಇತಿಮಿತಿಯಲ್ಲಿ ಮಾತನಾಡಬೇಕು ಎಂದರು.

    ಇದನ್ನೂ ಓದಿ: ಸೋಲಿನ ಭಯದ ನಡುವೆ ಸಿದ್ದರಾಮಯ್ಯ ಸಿಎಂ ಕನಸು ಕಾಣುತ್ತಿದ್ದಾರೆ; ಪ್ರತಾಪ್ ಸಿಂಹ

    ಜಾತಿ ನಿಮಿತ್ತ ಮಾತ್ರ

    ಲಿಂಗಾಯತ ಸಿಎಂಗಳು ಭ್ರಷ್ಟ ಸಿಎಂಗಳು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ದೇಶಕ್ಕೆ ಗೊತ್ತಿದೆ ನಿಜಲಿಂಗಪ್ಪನವರು, ವಿರೇಂದ್ರ ಪಾಟೀಲ್, ಜೆ.ಎಚ್.ಪಟೇಲ್, ಎಸ್.ಆರ್. ಬೊಮ್ಮಾಯಿ ಹಾಗೂ ಯಡಿಯೂರಪ್ಪನವರು ತಮ್ಮದೆ ಕೊಡುಗೆ ಕೊಟ್ಟಿದ್ದಾರೆ. ನಾನು ಒಂದೊಂದು ಬಾರಿ ಭಾವನಾತ್ಮಕವಾಗಿ ಮಾತನಾಡಿ ಎರಡೇ ನಿಮಿಷಕ್ಕೆ ಉಲ್ಟಾ ಹೊಡೆಯುವ ವ್ಯವಸ್ಥೆಯನ್ನು ನೋಡಿದ್ದೇನೆ. ಅದರ ಬಗ್ಗೆ ಹೆಚ್ಚು ಚರ್ಚೆ ಮಾಡಲ್ಲ. ಸಿದ್ದರಾಮಯ್ಯ ಮನವರಿಕೆ ಮಾಡಿಕೊಂಡು ರಾಜ್ಯದ ಎಲ್ಲಾ ವರ್ಗದ ಜನರ ಜೊತೆ ಒಡನಾಟ ಇಟ್ಟುಕೊಂಡು ಕೆಲಸ ಮಾಡಬೇಕಿದೆ. ಜಾತಿ ನಿಮಿತ್ತ ಮಾತ್ರ. ಅದನ್ನ ವೈಭವಿಕರಿಸಬಾರದು. ಎಲ್ಲ ವರ್ಗಾದ ಜನರು ಸೋಮಣ್ಣನಂತಹ ಕೆಲಸಗಾರರು ಬೇಕು ಅಂಥ ಕೇಳುತ್ತಿದ್ದಾರೆ. ವಸತಿ ಸಚಿವರಾಗಿ ಸೋಮಣ್ಣ ಏನು ಕೆಲಸ ಮಾಡಿದ್ದಾರೆ ಎಂಬುದು ಸಿದ್ದರಾಮಯ್ಯಗೆ ಗೊತ್ತಿದೆ. ನನ್ನ ಬಗ್ಗೆ ಸಿದ್ದರಾಮಯ್ಯನವರೇ ಮೆಚ್ಚುಗೆಯ ಮಾತುಗಳ್ನಾಡಿದ್ದಾರೆ. ಎಲ್ಲವೂ ಅವರಿಗೆ ಗೊತ್ತಿದೆ ಜಾಣ ಕುರುತನ ಅಷ್ಟೇ ಎಂದರು.

    ಪ್ರಧಾನಿ ಹುದ್ದೆ ಕೊಟ್ಟರೂ ಬೇಡ! ಚಿಕ್ಕಪೇಟೆ ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ; ಕೆಜಿಎಫ್ ಬಾಬು

    ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಮನೆಗೆ ಕಳಿಸುವುದು ಗ್ಯಾರಂಟಿ: ಸಿಎಂ ಬೊಮ್ಮಾಯಿ ವಾಗ್ದಾಳಿ

    ಆರ್​​ಎಸ್​​ಎಸ್​​ನವರು ನನ್ನ ಮೇಲೆ ನಿಗಾ ವಹಿಸಿ ಯಾವುದೇ ಪ್ರಯೋಜನವಿಲ್ಲ; ಜಗದೀಶ್ ಶೆಟ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts