More

    “200 ವರ್ಷ ‘ಅಮೆರಿಕ’ದ ಗುಲಾಮರಾಗಿದ್ದೆವು” ಎಂದ ಉತ್ತರಾಖಂಡ ಸಿಎಂ !

    ಡೆಹ್ರಾಡೂನ್ : ಉತ್ತರಾಖಂಡದ ಹೊಸ ಸಿಎಂ ತೀರಥ್ ಸಿಂಗ್ ರಾವತ್, ಇದೀಗ ತಮ್ಮ ವಾಕ್​ಚಾತುರ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಕೆಲವು ದಿನಗಳ ಹಿಂದೆ ಮಹಿಳೆಯರು ರಿಪ್ಪಡ್ ಜೀನ್ಸ್ ಹಾಕಿಕೊಳ್ಳುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ವಿವಾದಕ್ಕೆ ಸಿಲುಕಿದ್ದರು, ರಾವತ್. ಇದೀಗ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಇಂಗ್ಲೆಂಡ್ ಬದಲಿಗೆ “ಅಮೆರಿಕ ನಮ್ಮನ್ನು 200 ವರ್ಷ ಗುಲಾಮರನ್ನಾಗಿಸಿತ್ತು” ಎಂದಿದ್ದಾರೆ.

    ಕರೊನಾ ಮಹಾಮಾರಿಯನ್ನು ಎದುರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ನಾಯಕತ್ವವನ್ನು ಶ್ಲಾಘಿಸುತ್ತಿದ್ದ ರಾವತ್, ಇತರ ದೇಶಗಳ ಸ್ಥಿತಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ ಎಂದು ಹೇಳುತ್ತಿದ್ದರು. ಈ ಸಂದರ್ಭದಲ್ಲಿ, “ನಾವು 200 ವರ್ಷಗಳು ಯಾವ ಅಮೆರಿಕದ ಗುಲಾಮರಾಗಿದ್ದೆವೋ, ಇಡೀ ದೇಶದ ಮೇಲೆ ಅದು ರಾಜ್ಯಭಾರ ಮಾಡುತ್ತಿತ್ತೋ, ಸೂರ್ಯ ಮುಳುಗದ ಸಾಮ್ರಾಜ್ಯ ಅದರದ್ದು ಎಂದು ಹೇಳುತ್ತಿದ್ದರೋ ಆ ದೇಶ ಕರೊನಾದಿಂದ ತತ್ತರಿಸಿಹೋಯಿತು. ಎರಡೂವರೆ ಲಕ್ಷಕ್ಕೂ ಹೆಚ್ಚು ಕರೊನಾ ಮರಣದರ ಹೊಂದಿದೆ…”ಎನ್ನುತ್ತಾ ರಾವತ್​ ವಿವಿಧ ರಾಷ್ಟ್ರಗಳ ಕರೊನಾ ಮರಣ ದರಗಳನ್ನು ಉಲ್ಲೇಖಿಸಿದರು. ತಾವು ಮಾಡಿದ ತಪ್ಪಿನ ಅರಿವೂ ಆಗದೆ ಆರಾಮವಾಗಿ ಭಾಷಣ ಮುಂದುವರೆಸಿದರು.

     

    ಈ ಬಗ್ಗೆ ಸುದ್ದಿ ಮಾಧ್ಯಮವೊಂದು ಟ್ವಿಟರ್​​ನಲ್ಲಿ ವರದಿ ಮಾಡಿದ ಬೆನ್ನಲ್ಲೇ, ರಾವತ್​ನ ಈ ಮಾತಿನ ಬಗ್ಗೆ ಹಲವು ಕಾಮೆಂಟು ಮತ್ತು ಮೀಮ್​ಗಳ ಸುರಿಮಳೆಯಾಗಿದೆ. ಶಿಕ್ಷಣ ಪಡೆಯದ ರಾಜಕಾರಣಿಗಳ ಸ್ಥಿತಿ ಇದು ಎಂದು ಕೆಲವರು ಕಾಮೆಂಟ್​ ಮಾಡಿದ್ದಾರೆ. ಮಾತಿನ ಭರಾಟೆಯಲ್ಲಿ ತಪ್ಪಿ ಅಮೆರಿಕ ಹೆಸರು ಹೇಳಿದರೋ ಅಥವಾ ಅವರಿಗೆ ನಿಜವಾಗಿ ಆ ಬಗ್ಗೆ ತಪ್ಪು ಕಲ್ಪನೆ ಇದೆಯೋ ಎಂದು ಕೆಲವು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಬಹಳಷ್ಟು ನೆಟ್ಟಿಗರು ಟೀಕೆ ಮತ್ತು ವ್ಯಂಗ್ಯಯುಕ್ತ ಮೀಮ್​ಗಳನ್ನು ಹರಿಬಿಟ್ಟಿದ್ದಾರೆ. (ಏಜೆನ್ಸೀಸ್)

    ಖೇಲಾ ಶೇಷ್ ಹೋಬೆ ! “ದೀದಿ, ನಿಮ್ಮ ಆಟ ಮುಗಿಯಲಿದೆ” ಎಂದ ಮೋದಿ

    ಸಚಿನ್ ತೆಂಡುಲ್ಕರ್​ ಅವರ ಹೊಸ ವಿಡಿಯೋ ನೋಡಿದ್ದೀರಾ ?!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts