More

    ಹೋಂ ವರ್ಕ್ ಭಯಕ್ಕೆ ರಾತ್ರಿಯಿಡೀ ಕಾಡಲ್ಲಿ ಕುಳಿತು ಕಿಡ್ನಾಪ್ ನಾಟಕವಾಡಿದ ಬಾಲಕಿ

    ಯಲ್ಲಾಪುರ:(ಉತ್ತರ ಕನ್ನಡ ): ತೀವ್ರ ಆತಂಕ ಮೂಡಿಸಿದ್ದ ನಂದೊಳ್ಳಿಯ ವಿದ್ಯಾರ್ಥಿನಿ ಕಾಣೆಯಾಗಿ, ಕಾಡಿನಲ್ಲಿ ಪತ್ತೆಯಾದ ಪ್ರಕರಣ ಠುಸ್ ಪಟಾಕಿಯಾಗಿದೆ. ಶಾಲೆಯ ವಿಚಾರಕ್ಕಾಗಿ ಮನೆಯಲ್ಲಿ ಬೈಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ತಾನೇ ಅಪಹರಣದ ಕಥೆ ಕಟ್ಟಿರುವುದಾಗಿ ಬಾಲಕಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾಳೆ.

    ಶಾಲೆಯಲ್ಲಿ ನೀಡಿದ ಹೋಂ ವರ್ಕ್ ಸರಿಯಾಗಿ ಮಾಡದೇ ಇರುವ ಬಗೆಗೆ ಆಗಾಗ ತಾಯಿ ವಿಚಾರಿಸುತ್ತಿದ್ದರು. ಬುಧವಾರ ಶಾಲೆಯ ಶಿಕ್ಷಕರಿಗೂ ಕರೆ ಮಾಡಿ ತನ್ನ ಮಗಳು ಹೋಂ ವರ್ಕ್ ಮಾಡಿದ್ದಾಳಾ ಎಂದು ವಿಚಾರಿಸಿದ್ದು, ಸರಿಯಾಗಿ ಮಾಡಿಲ್ಲ ಎಂದು ಶಿಕ್ಷಕರು ಹೇಳಿದ್ದರು. ಇಂದು ನಾನು ಮನೆಗೆ ಹೋದರೆ ಮನೆಯಲ್ಲಿ ಬೈದು, ಹೊಡೆಯುತ್ತಾರೆಂಬ ಭಯದಿಂದ ಬಸ್ ಇಳಿದವಳು ಮನೆಯ ಸಮೀಪದ ಕಾಡಿನಲ್ಲಿಯೇ ಕುಳಿತಿದ್ದೆ.

    ರಾತ್ರಿ ಒಂದು ಗಂಟೆಯ ಸಮಯಕ್ಕೆ ಮನೆಗೆ ಹೋಗಬೇಕೆನ್ನಿಸಿದಾಗ ಅಪಹರಣದ ಕಥೆ ಕಟ್ಟಿ ಬೈಯ್ಯುವುದನ್ನು ತಪ್ಪಿಸಬೇಕೆಂದುಕೊಂಡೆ. ಹಾಗಾಗಿಯೇ ಲೆಗ್ಗಿನ್ಸ್ ಪ್ಯಾಂಟ್ ಮೂಲಕ ಕಾಲು ಕಟ್ಟಿಕೊಂಡು, ವೇಲನ್ನು ಬಾಯಿಗೆ ಹಾಕಿಕೊಂಡು, ಕೈಯ್ಯನ್ನೂ ಕಟ್ಟಿಕೊಂಡು ಕುಳಿತೆ. ಅದೇ ವೇಳೆ ನಮ್ಮ ಮನೆಯ ಕಡೆಗೆ ಬೈಕ್ ಹೋಗುವ ಶಬ್ದ ಕೇಳಿಸಿತು. ಆಗ ಜೋರಾಗಿ ಕಿರುಚಿಕೊಂಡೆ, ಅದನ್ನು ಕೇಳಿ ಬೈಕ್ ನವರು ಮನೆಗೆ ವಿಷಯ ತಿಳಿಸಿದ್ದು, ಮನೆಯವರೆಲ್ಲ ಬಂದು ನನ್ನನ್ನು ಕರೆತಂದಿದ್ದಾರೆ.

    ಇದನ್ನೂ ಓದಿರಿ: ಪೆಟ್ರೋಲ್​ ದರ ಇಳಿಕೆ ಬಯಸುವುದಾದ್ರೆ ಮೋದಿಗೆ ಮತ್ತೆ ಮತ ಹಾಕಬೇಡಿ: ಬಿಲ್​ ಹಿಂದಿನ ಸತ್ಯಾಂಶ ಬಯಲು!

    ಮನೆಗೆ ಬಂದು ತಾಯಿಯಲ್ಲಿ ಯಾರೋ ಎರಡು ಬೈಕ್ ಮೇಲೆ ನನ್ನನ್ನು ಅಪಹರಿಸಿ, ರಾತ್ರಿ ವೇಳೆ ತಂದು ಕಾಡಿನಲ್ಲಿ ಬಿಟ್ಟು ಹೋಗಿದ್ದಾರೆ. ವಿಷಯ ಯಾರಲ್ಲಾದರೂ ತಿಳಿಸಿದರೆ ಮನೆಯವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ ಎಂದೂ ಸಹ ಹೇಳಿದೆ. ಹೋಂ ವರ್ಕ್ ಸರಿಯಾಗಿ ಮಾಡದ ಕಾರಣ ಬೈಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿಯೇ ಇಷ್ಟೆಲ್ಲ ಮಾಡಿರುವುದಾಗಿ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾಳೆ.

    ಅಪಹರಣವಾಗಿರುವುದು ಸತ್ಯ ಎಂದು ತಿಳಿದು ಹಲವರ ವಿಚಾರಣೆಯನ್ನೂ ನಡೆಸಲಾಗಿತ್ತು. ನಂದೊಳ್ಳಿ ಭಾಗದ ಜನತೆ ವಿದ್ಯಾರ್ಥಿಗಳ ರಕ್ಷಣೆಯ ಬಗೆಗೆ ತೀವ್ರ ಆತಂಕಪಡುವಂತಾಗಿತ್ತು. ಡಿ.ವೈ.ಎಸ್.ಪಿ ರವಿ ನಾಯ್ಕ, ಪಿಐ ಸುರೇಶ ಯಳ್ಳೂರ ಇತರರು ತೀವ್ರ ತನಿಖೆ ಕೈಗೊಂಡು ಪ್ರಕರಣ ಬೇಧಿಸಿದ್ದು, ಕೊನೆಗೂ ಎರಡು ದಿನಗಳ ಕುತೂಹಲ, ಆತಂಕಕ್ಕೆ ತೆರೆ ಬಿದ್ದಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ : ಬಂಗಾಳದಲ್ಲಿ ವೇತನ ಹೆಚ್ಚಳ, ತಮಿಳುನಾಡಿನಲ್ಲಿ ಸಾಲ ಮನ್ನಾ !

    ಮಮತಾ ಮಾತ್ರ ಏಕೆ, ನಾನೂ ಬಿಡ್ತೇನೆ ಅಂತ ಸ್ಕೂಟರ್ ಏರಿದ ಬಿಜೆಪಿ ನಾಯಕಿ

    ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದ ವಲಸೆ ಕಾರ್ಮಿಕನನ್ನ ಮಗುವಿನಂತೆ ಆರೈಕೆ ಮಾಡ್ತಿದ್ದಾನೆ ಅಪರಿಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts