More

    ಪೆಟ್ರೋಲ್​ ದರ ಇಳಿಕೆ ಬಯಸುವುದಾದ್ರೆ ಮೋದಿಗೆ ಮತ್ತೆ ಮತ ಹಾಕಬೇಡಿ: ಬಿಲ್​ ಹಿಂದಿನ ಸತ್ಯಾಂಶ ಬಯಲು!

    ನವದೆಹಲಿ: ಮುಂಬೈನ ವಿಖ್ರೋಲಿಯಲ್ಲಿರುವ ಎಚ್​ಪಿಎಲ್​ ಡೀಲರ್​ ಸಾಯಿ ಬಾಲಾಜಿ ಪೆಟ್ರೋಲ್​ ಬಂಕ್​ನದ್ದು ಎನ್ನಲಾದ ಪೆಟ್ರೋಲ್​ ಬಿಲ್​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ಬಿಲ್​ ಕೊನೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಬರೆಯಲಾಗಿದೆ.

    ಅನೇಕ ದಿನಗಳಿಂದ ದೇಶದಲ್ಲಿ ಇಂಧನ ದರ ಗಗನಮುಖಿಯಾಗುತ್ತಿದೆ. ಇದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಜನಾಕ್ರೋಶ ಹಾಗೂ ಪ್ರತಿಪಕ್ಷಗಳ ಪ್ರತಿಭಟನೆಗೆ ಕಾರಣವಾಗಿದೆ. ಇದರ ನಡುವೆ ಪೆಟ್ರೋಲ್​ ಬಂಕ್​ ಬಿಲ್​ ಒಂದು ವೈರಲ್​ ಆಗಿದ್ದು, ಅದರಲ್ಲಿ “ನೀವು ಪೆಟ್ರೋಲ್​ ಬೆಲೆಯನ್ನು ಕಡಿಮೆ ಮಾಡಲು ಬಯಸಿದರೆ ಮೋದಿಗೆ ಮತ್ತೆ ಮತಹಾಕಬೇಡಿ” ಎಂದು ಬರೆಯಲಾಗಿದೆ.

    ಇದನ್ನೂ ಓದಿರಿ: ತೈಲ ಬೆಲೆ ಏರಿಕೆ ಖಂಡಿಸಿ ಹೊಸಪೇಟೆಯಲ್ಲಿ ಲಾರಿಗೆ ಹಗ್ಗಕಟ್ಟಿ ಎಳೆದು ಆಕ್ರೋಶ

    ಪೆಟ್ರೋಲ್​ ದರ ಇಳಿಕೆ ಬಯಸುವುದಾದ್ರೆ ಮೋದಿಗೆ ಮತ್ತೆ ಮತ ಹಾಕಬೇಡಿ: ಬಿಲ್​ ಹಿಂದಿನ ಸತ್ಯಾಂಶ ಬಯಲು!

    ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದ್ದು, ವೈರಲ್​ ಫೋಟೋ ಕುರಿತಾದ ಅಸಲಿಯತ್ತು ಬಯಲಾಗಿದ್ದಿ, ಅದೊಂದು ನಕಲಿ ಬಿಲ್​ ಎಂದು ತಿಳಿದುಬಂದಿದೆ. ಭಾರತದ ಸಾರ್ವಜನಿಕ ವಲಯದ ತೈಲ ಮತ್ತು ಅನಿಲ ಕಂಪನಿ ಹಿಂದುಸ್ಥಾನ್​ ಪೆಟ್ರೋಲಿಯಂ ಕಾರ್ಪೊರೇಷನ್​ ಲಿಮಿಟೆಡ್​ (ಎಚ್​ಪಿಸಿಎಲ್​) ಸಹ ತನ್ನ ಟ್ವಿಟರ್​ನಲ್ಲಿ ಸ್ಪಷ್ಟನೆ ನೀಡಿದ್ದು, ಹರಿದಾಡುತ್ತಿರುವ ಬಿಲ್​ ಫೋಟೋ ಸತ್ಯಕ್ಕೆ ದೂರವಾದದ್ದು ಎಂದಿದೆ.

    ಬಿಲ್​ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ 2018ನೇ ಇಸವಿ ಉಲ್ಲೇಖವಾಗಿರುವುದನ್ನು ಗಮನಿಸಬಹುದು. ಇದೊಂದೆ ಅಲ್ಲದೆ, ಸಾಯಿ ಬಾಲಾಜಿ ಪೆಟ್ರೋಲಿಯಂ ಬಿಲ್​ ಪ್ರಕಾರ ಅಕ್ಷರ ಗಾತ್ರ ಮತ್ತು ಶೈಲಿಯಲ್ಲಿ ವ್ಯತ್ಯಾಸ ಕಾಣಬಹುದು. ಇನ್ನು ಎಚ್​ಪಿಎಲ್​ ಡೀಲರ್​ ಎಂದು ಬಿಲ್​ನಲ್ಲಿ ಬರೆಯಲಾಗಿದೆ. ಆದರೆ, ಹಿಂದುಸ್ಥಾನ್​ ಪೆಟ್ರೋಲಿಯಂ ಕಾರ್ಪೊರೇಷನ್​ ಲಿಮಿಟೆಡ್​ ಅನ್ನು ಎಚ್​ಪಿಸಿಎಲ್​ ಎಂದು ಕರೆಯಲಾಗುತ್ತದೆ. ಎಚ್​ಪಿಎಲ್​ ಹೆಸರಿನ ಯಾವುದೇ ಕಂಪನಿಯು ಇಲ್ಲ.

    ಇದನ್ನೂ ಓದಿರಿ: ಪಂಚರಾಜ್ಯ ಚುನಾವಣೆ: ಮೇ 2 ರಂದು ಫಲಿತಾಂಶ, ಬಂಗಾಳಕ್ಕೆ 8 ಹಂತದಲ್ಲಿ ಮತದಾನ!

    ಪೆಟ್ರೋಲ್​ ದರ ಇಳಿಕೆ ಬಯಸುವುದಾದ್ರೆ ಮೋದಿಗೆ ಮತ್ತೆ ಮತ ಹಾಕಬೇಡಿ: ಬಿಲ್​ ಹಿಂದಿನ ಸತ್ಯಾಂಶ ಬಯಲು!

    ಸಾಯಿ ಬಾಲಾಜಿ ಪೆಟ್ರೋಲಿಯಂ ಕಂಪನಿಯನ್ನು ಮುಂಬೈ ವಿಖ್ರೋಲಿ ಏರಿಯಾದಲ್ಲಿ ಹುಡುಕಾಡಿದಾಗ ಆ ಹೆಸರಿನಲ್ಲಿ ಯಾವುದೇ ಪೆಟ್ರೋಲ್​ ಬಂಕ್​ ಪತ್ತೆಯಾಗಿಲ್ಲ. ಅಸಲಿಗೆ ವೈರಲ್​ ಆಗಿರುವ ಬಿಲ್​ ಸ್ವರೂಪಕ್ಕೂ ಎಚ್​ಪಿಸಿಎಲ್​ ಬಿಲ್​ ಸ್ವರೂಪಕ್ಕೂ ತಾಳೆ ಆಗುವುದೇ ಇಲ್ಲ. ಹೀಗಾಗಿ ವೈರಲ್​ ಆಗಿರುವ ಫೋಟೋಗೂ ಪ್ರಸ್ತುತ ಏರುತ್ತಿರುವ ಪೆಟ್ರೋಲ್​ ದರಕ್ಕೂ ಸಂಬಂಧವಿಲ್ಲ. ಉದ್ದೇಶಪೂರ್ವಕವಾಗಿಯೇ ಅಪಪ್ರಚಾರ ಮಾಡಲು ಬಿಲ್​ ಫೋಟೋವನ್ನು ಎಡಿಟ್​ ಮಾಡಿ ಹರಿಬಿಡಲಾಗಿದೆ ಎಂಬುದು ಫ್ಯಾಕ್ಟ್​ಚೆಕ್​ ಮೂಲಕ ಬಹಿರಂಗವಾಗಿದೆ. (ಏಜೆನ್ಸೀಸ್​)

    ಪೆಟ್ರೋಲ್​ ದರ ಇಳಿಕೆ ಬಯಸುವುದಾದ್ರೆ ಮೋದಿಗೆ ಮತ್ತೆ ಮತ ಹಾಕಬೇಡಿ: ಬಿಲ್​ ಹಿಂದಿನ ಸತ್ಯಾಂಶ ಬಯಲು!ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬೆಳಗಾವಿ, ಮಸ್ಕಿ, ಬಸವಕಲ್ಯಾಣ, ಸಿಂದಗಿ ಉಪ ಚುನಾವಣೆಗೆ ಪ್ರತ್ಯೇಕ ಅಧಿಸೂಚನೆ

    ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕರ್ನಾಟಕ ತಂಡದ ಮಾಜಿ ನಾಯಕ ವಿನಯ್‌ಕುಮಾರ್

    ಮಮತಾ ಮಾತ್ರ ಏಕೆ, ನಾನೂ ಬಿಡ್ತೇನೆ ಅಂತ ಸ್ಕೂಟರ್ ಏರಿದ ಬಿಜೆಪಿ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts